ಬುಧವಾರ, ಅಕ್ಟೋಬರ್ 30, 2013

ನೀ.....ರಾಧೆ!






ನೀ ವೇಣು 
ಊದಿದೆ 
ಕೃಷ್ಣಾ....  
ನಾ ರಾಧೆ 
ಕರಗಿ
ನೀರಾದೆ!

ಬಾಳಿಲ್ಲ 
ನನಗೆ ಈಗ 
ನೀನಿರದೆ! 

ನಿನ್ನ ತುಟಿಯ
ಪಿಸುರಾಗಕ್ಕೆ
ನಾ ....  
ಉಸಿರಾದೆ 

ವೇಣು ಗಾನದಲ್ಲಿ 
ಈಗ ಬರಿದೆ 
ಪ್ರೀತಿರಾಗ
ಹೊಮ್ಮಿದೆ!

ಪ್ರೇಮ ಲೋಕಕ್ಕೆ 
ರಾಧೆ
ಹೆಸರ
ನೀ
ಧಾರೆಯೆರೆದೆ !