ಈ ನಾಡ ಅಂದ..........ಈ ತಾಣ ಚಂದ ......
ಗುರುವಾರ, ಡಿಸೆಂಬರ್ 21, 2017
ಸಾಲಗಾರ...!
ಸಾಲಗಾರ...!
ಸಾವಿನ
ಸಮಯದಲ್ಲೂ
ಅವರು
ಸಾಲ ಮಾಡಿದರು...
ಕೊನೆಯುಸಿರು
ಎಳೆದವರು
ವಾಪಸು ಕೊಡಲಿಲ್ಲ!!
✍ಶಾಂತಾರಾಮ್ ಶೆಟ್ಟಿ
➖➖➖➖➖👻
ಅನಂತ!
ಅನಂತ!
➖➖➖➖🌚🌞
ರಾತ್ರಿ
ಇವತ್ತಿನ ಕೊನೆಯೇನಲ್ಲ
ನಾಳೆಯ ಮೊದಲು!
ಹಗಲು
ಇವತ್ತಿನ ಮೊದಲೇನಲ್ಲ
ನಿನ್ನೆಯ ಕೊನೆ!
ಹೀಗಿದ್ದೂ
ಹಗಲು ರಾತ್ರಿಗಳಿಗೆ
ಕೊನೆ
ಮೊದಲೆಂಬುದೇನೇ
ಇಲ್ಲ!!
✍ಶಾಂತಾರಾಮ್ ಶೆಟ್ಟಿ
➖➖➖➖🌚🌞
ಜೀವನ!
ಜೀವನ!
➖➖➖➖❓
ಮೊದಲ ಪುಟದಲಿ
ಹುಟ್ಟಿದೆ
ಕೊನೆಯ ಪುಟದಲಿ
ಸಾವಿದೆ....!
ನಡುವೆ
ಬರೆಯದ
ಖಾಲಿ ಪುಟ,
ದಿನಾ
ಹುಡುಕಾಟ.....
ಏನಿದೆ..
ಮುಂದೆ....ಏನಿದೆ❓
✍ ಶಾಂತಾರಾಮ್ ಶೆಟ್ಟಿ
➖➖➖➖➖😮
ಸ್ಥಿತ!!
ಸ್ಥಿತ!!
▪▪▪
ಹೆಂಡತಿ
ಕಳಕೊಂಡವನು...,
ಅವನದ್ದು
ಒಂದು
ರಾಮಾಯಣ...!
ಹೆಂಡತಿ ಮಕ್ಕಳ
ಮೋಹಕ್ಕೆ ಬಿದ್ದವನು
ಅವನದ್ದೋ....
ಇನ್ನೊಂದು
ಮಹಾಭಾರತ....!
ನಡುವೆ
ಜಂಜಾಟಗಳ
ಸಾಗರವ
ಹಾರಿ
ಮೀರಿ
ನಿಂತ
ಹನುಮಂತ!!
🐒🐒
✍🏽ಶಾಂತಾರಾಮ್ ಶೆಟ್ಟಿ
ವ್ಯಾಪಾರ!
ವ್ಯಾಪಾರ
!
ಬದುಕಿದ್ದವರನ್ನು
ಬಿಟ್ಬಿಡಿ
ಸ್ವಾಮಿ
...!
ಸತ್ರವರಿಗೂ
ನಮ್ಮಲ್ಲಿ
ಸೇವಾ
ಸೌಲಭ್ಯವಿದೆ
ಎಂದನಂತೆ
ಶವಪೆಟ್ಟಿಗೆ
ವ್ಯಾಪಾರಿ
!
ಕಹಿ ಸತ್ಯ!
ಕಹಿ ಸತ್ಯ!
➖➖➖😗
ತಮ್ಮೊಳಗಿನ
ಕುರೂಪವನ್ನು
ಎತ್ತಿ
ತೋರಿದ್ದಕ್ಕೆ
ಕನ್ನಡಿಯ
ಮುಂದೆ
ಮುಖ
ಕಿವುಚಿದರು!!
✍ಶಾಂತಾರಾಮ್ ಶೆಟ್ಟಿ
ದಿಕ್ಕಾಪಾಲು!
ದಿಕ್ಕಾಪಾಲು!
➖➖➖
ಅಷ್ಟ ದಿಕ್ಕುಗಳಿಂದ
ಹರಿದು ಬಂದ
ಭಕ್ತಕೋಟಿಯ
ಬೇಡಿಕೆಗಳಿಗೆ
ದೇವರೇ
ದಿಕ್ಕೆಟ್ಟು ಓಡಿದ
ಜೀವಂತ !-ಇನ್ನೂ...!
ಜೀವಂತ !
➖➖➖➖➖
ಒಂದೇ
ಗುಂಡು ಸತ್ತಿದ್ದು
ಐದು ಗುಂಡುಗಳು
ಇನ್ನೂ
ಜೀವಂತ....!
ಸತ್ತ
ಗುಂಡೇ
ಸಾಯಿಸಿದ್ದು!!
✍ಶಾಂತಾರಾಮ್ ಶೆಟ್ಟಿ
➖➖➖➖➖➖
ಇನ್ನೂ...!
➖➖➖➖
ಆಸೆ
ಹೊತ್ತು ಸತ್ತವ
ಗೋರಿಯೊಳಗೆ
ಮಡದಿ ಮಕ್ಕಳಿಗೂ
ಜಾಗ ಕಾದಿರಿಸಿದ !
ಸತ್ತವನ
ಆಸೆ
ಇನ್ನೂ ಸತ್ತಿಲ್ಲ!!
✍ ಶಾಂತಾರಾಮ್ ಶೆಟ್ಟಿ
➖➖➖➖👻👻
ಪ್ರವಚನ! ➖➖➖🐣
ಪ್ರವಚನ
!
➖➖➖🐣
ಮೊಟ್ಟೆಯೊಳಗೇ
ಆಧ್ಯಾತ್ಮದ
ಪ್ರವಚನ
...!
ತರೆತರೆದು
ಒಳಗಿಂದ
ತೆರೆದರೆ
ಜೀವನ
ಮೆರೆಮೆರೆದು
ಹೊರಗಿಂದ
ಮುರಿದರೆ
ಮರಣ
!!
ಉರುವಲು!
ಉರುವಲು!
➖➖➖🔥🔥
ಎಂಥಾ
ಕಾವ್ಯದ
ಸುವಾಸನೆಯಿದೆ
ಹೆಂಡತಿ ಕೊಟ್ಟ
ಬೆಚ್ಚನೆ
ಕಾಫಿಯ ಹಬೆ
ಒಳಗೆ ?!
ಬಹುಷ:
ಇವತ್ತೂ
ಉರುವಲಾಗಿ
ಇಟ್ಟಿರಬೇಕು
ಒಂದು
ಕವನ ಸಂಕಲನ
ಒಲೆಗೆ !!
✍ಶಾಂತಾರಾಮ್ ಶೆಟ್ಟಿ
ಕಣ್ಕಟ್ಟು!!
ಕಣ್ಕಟ್ಟು!!
➖➖➖😎
ಇಂದಿಗೂ..
ಸುಂದರಾಂಗನನ್ನು
ಮನ್ಮಥನಿಗೂ...
ಸುಂದರಿಯನ್ನು
ರತಿಗೂ
ಹೋಲಿಸುವರು!
ಎಷ್ಟು
ಕಣ್ಕಟ್ಟು ನೋಡಿ
ಉಪಮೆಯಲ್ಲೂ?
ನೋಡದವರು
ನೋಡದವರಿಗೆ
ನೋಡದ್ದನ್ನು
ನೋಡಿದಂತೆಯೇ
ಕಣ್ಣೆದುರೇ
ಕಟ್ಟಿ
ಕೊಡುವರು
ಬಣ್ಣದ
ಕಾಮನ ಬಿಲ್ಲು!!
✍ಶಾಂತಾರಾಮ್ ಶೆಟ್ಟಿ
ಚುಟುಕಾಂಬರಿ!- ತಾಕತ್ತು!
ಚುಟುಕಾಂಬರಿ!
➖➖➖➖➖🗣
ಒಂದೋ ಎರಡೋ
ಮುತ್ತಿನಂತ
ಮಾತು ಹೆಂಡತಿಯದು....,
ಆಹಾ
ಎಂತಾ ಸೊಗಸು
ಚುಟುಕು
ಕವಿಯ ಬದುಕು !
ಕಾದಂಬರಿಕಾರನದ್ದೊ
ಮುಗಿಯದ ಗೋಳು
ಬೆಳಿಗ್ಗಿಂದ
ಸುರುವಾದರೆ ರಾತ್ರಿವರೆಗೆ
ಹೆಂಡತಿ ದಿನಾ ಬಿಡದೆ
ಬೈಯೋಳು!!
: ತಾಕತ್ತು!
➖➖➖
ಭಾಷೆ
ಬರದವರ
ನಡುವೆಯೂ
ದುಡ್ಡು
ಸಲೀಸಾಗಿ
ಮಾತಾಡಿತು!!
✍ಶಾಂತಾರಾಮ್ ಶೆಟ್ಟಿ
➖➖➖➖➖🤝🏾
ಲಾಲಸೆ!
ಲಾಲಸೆ!
➖➖➖
ಯಮನೂ
ಪಳಗಿದ
ರಾಜಕಾರಣಿ...!
ನರಕ-
ವಾದರೇನಂತೆ
ಅಧಿಕಾರ
ಬೇಕಂತೆ!!.
✍ಶಾಂತಾರಾಮ್ ಶೆಟ್ಟಿ
➖➖➖➖➖
ಜೀವಂತ!
ಜೀವಂತ!
➖➖➖➖🌿
ಬದುಕಿದವರೆಲ್ಲಾ
ಬದುಕಿದ್ದಾರಂತೇನೂ ಇಲ್ಲ...
ಜನರ ನಡುವೆ
ಗಡಿಬಿಡಿಯಲ್ಲಿ
ಉಸಿರಾಡುತ್ತಿದ್ದಾರೆ!
ಸತ್ತವರೆಲ್ಲಾ
ಸತ್ತಿದ್ದಾರಂತೇನೂ ಇಲ್ಲ
ಜನರ ನಡುವೆ
ನಾಡಿ-ನುಡಿಯಲ್ಲಿ
ಈಗಲೂ
ಉಸಿರಾಡುತ್ತಿದ್ದಾರೆ!!
✍ ಶಾಂತಾರಾಮ್ ಶೆಟ್ಟಿ
➖➖➖➖➖🌱
ಆಸ್ತಿ!
ಆಸ್ತಿ!
➖➖➖➖✨✨
ಆಕಾಶ...
ಅಪ್ಪ
ಬಿಟ್ಟು ಹೋದ ಆಸ್ತಿ!
ನಕ್ಷತ್ರಗಳು
ಅಮ್ಮ
ಎಣಿಸಲು ಹೇಳಿಕೊಟ್ಟ
ಕನಸುಗಳು...!
ಹಗಲು
ಆಯುವ
ಬದುಕಾದರೂ
ರಾತ್ರಿ
ನನ್ನದು
ಸುಂದರ
ಸ್ವಪ್ನ ಲೋಕ!!.
✍ಶಾಂತಾರಾಮ್ ಶೆಟ್ಟಿ.
Horror -ಕಾಮಿಡಿ!!
Horror -ಕಾಮಿಡಿ!!
➖➖➖➖➖😀
ಕನ್ನಡಿಯ
ಮುಂದೆ ನಿಂತು
ಕನ್ನಡಿಗ
ಕನ್ನಡಿಗೆ
Mirror
ಎಂದಾಗ
ಕನ್ನಡಿಯೊಳಗಿನ
ಪ್ರತಿಬಿಂಬಕ್ಕೆ
ಹೆಮ್ಮೆಯ ನಗು!!
✍ಶಾಂತಾರಾಮ್ ಶೆಟ್ಟಿ.
➖➖➖➖➖🌱
ಬಾಂಧವ್ಯ!
ಬಾಂಧವ್ಯ!
ನೊಂದವರ
ನೋವಿಗೆ
ನೋಯುವವರಿಲ್ಲ
ಅನ್ನುವ
ನೋವು 😢
ನೋವಿಗೂ ಇದೆ!
ನೋವೂ
ನಮ್ಮೊಳಗಿನವನೇ
ಬಿಟ್ಟಿರಲಾಗದವ..,
ನಲಿವಿನಂತೆ😀
ನೋವಿಗೂ
ಬಂಧುಗಳು
ನಾವು-ನೀವು!!.
✍🏽ಶಾಂತಾರಾಮ್ ಶೆಟ್ಟಿ
➖➖➖➖➖🌹❣
ಬದ್ಧ!
ಬದ್ಧ!
☘☘☘☘
ಬುದ್ಧನ ಕುರಿತು
ಕೊರೆದವರೆಲ್ಲಾ
ಬುದ್ಧನಿಗೆ
ಬದ್ಧರಲ್ಲ......!
ಆಸೆ ದು:ಖದ ಮೂಲ
ಎಂದು
ಜರಿದ
ಪ್ರವಚನಕಾರರು
ಸಂಭಾವನೆ
ಕಡಿಮೆಯಾಯಿತೆಂದು
ಎತ್ತಿದರಂತೆ
ಸಂಘಟಕರಲ್ಲಿ
ತಕರಾರು!!
✍🏽ಶಾಂತಾರಾಮ್ ಶೆಟ್ಟಿ 😳
➖➖➖➖➖➖➖
ವರ್ತಮಾನ!
ವರ್ತಮಾನ!
➖➖➖➖➖➖
ಸಜ್ಜನ ಸಾತ್ವಿಕರಿಗೆ
ಭೂಮಿ ಮೇಲೆ
ಇಂದು
ಕಷ್ಟಗಳಿರಬಹುದು
ನಾಳೆ
ಮೇಲೆ
ಸ್ವರ್ಗ ಕಾದಿದೆ!
ಅನುಭೋಗಕ್ಕೆ
ಒಂದಿಷ್ಟು
ಪುಣ್ಯದ ಮಿತಿ....!
ವರ್ತಮಾನದಲ್ಲಿ
ಬದುಕುವ
ಸುಳ್ಳರಿಗೆ ಕಳ್ಳರಿಗೆ
ಲೂಟಿಗಾರರಿಗೆ
ನಾಳೆಗಳಲ್ಲಿ
ನಂಬಿಕೆಯಿಲ್ಲ....!
ಇಂದೇ
ಭೂಮಿಯಲ್ಲೆ
ಸ್ವರ್ಗಸೃಷ್ಟಿಯಾಗಿದೆ
ಉದ್ಘಾಟನೆಗೆ
ಇಂದ್ರನೇ
ಮುಖ್ಯ ಅತಿಥಿ!!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖👻.
ಮಂಗಳವಾರ, ಡಿಸೆಂಬರ್ 5, 2017
ಭವಿಷ್ಯ!
➖➖➖➖🌚
ಗಂಡ-ಹೆಂಡತಿ
ತುಂಬಾ
ಅನ್ಯೋನ್ಯವಾಗಿದ್ದರು!
ಇತ್ತೀಚೆಗೆ
ಬೀದಿಯ
ಮೂರನೇ ಮನೇಲಿ
ಶನಿಯೊಬ್ಬ
ವಕ್ಕರಿಸಿದ್ದಾನೆ!!
✍🏻ಶಾಂತಾರಾಮ್ ಶೆಟ್ಟಿ
➖➖➖➖➖🌚
(ಸು)ಮ್ಮನೆ!
(ಸು)ಮ್ಮನೆ!
➖➖➖💀
ಬದುಕು
ಹುಡುಕಿ ಹೊರಟ
ಎಲ್ಲರ
ಕೈಯಲ್ಲೂ....
ಸಾವಿನ ವಿಳಾಸ!!.
✍🏻ಶಾಂತಾರಾಮ್ ಶೆಟ್ಟಿ.
➖➖➖➖➖👻
ಪ(ಬ)ರಿಕಲ್ಪನೆ
ಪ(ಬ)ರಿಕಲ್ಪನೆ!
➖➖➖➖🐝
ಕವಿ
ಕಲ್ಪನೆಯಲ್ಲಿ...,
ಮಧು ಹೀರಿ
ಮಾಯವಾದ
ಮೋಸಗಾರ
ದುಂಬಿ..!
ಹೂವು
ಮಾತ್ರ
ತಲೆಯಲ್ಲಾಡಿಸಿ
ನಗುತಿತ್ತು
ಮನದುಂಬಿ!!
✍ಶಾಂತಾರಾಮ್ ಶೆಟ್ಟಿ
ಮಿತಿ!.
ಮಿತಿ!.
➖➖➖🐸
ಬಾವಿಯೊಳಗಿನ
ಕಪ್ಪೆಯೂ
ಖುಷ್-
ಖುಷಿಯಾಗಿತ್ತು,..!
ಸಂತೋಷಕ್ಕೆ
ಜ್ಞಾನದ
ಪರಿಮಿತಿ
ಇದ್ದಂಗಿಲ್ಲ !!.
✍ಶಾಂತಾರಾಮ್ ಶೆಟ್ಟಿ
➖➖➖➖➖🐸
(ಸ್ವ)ಭಾವ!
(ಸ್ವ)ಭಾವ!
➖➖➖🌿
ಮರಿ
ಕೋಗಿಲೆ
ತಾಯಿಗಾಗಿ
ಅತ್ತರೂ...
ಕವಿಯ
ಕಿವಿಗದು
ವಸಂತ-ಗಾನ!!
✍ಶಾಂತಾರಾಮ್ ಶೆಟ್ಟಿ
➖➖➖➖➖🌿
ನೀರು !!
ನೀರು !!
➖➖➖😢
ಸಾಲ ಮಾಡಿ
ಬಾವಿ ತೋಡಿ...
ರೈತನ
ಕಣ್ಣಲ್ಲಿ
ಧಾರಾಕಾರ ನೀರು !
✍ಶಾಂತಾರಾಮ್ ಶೆಟ್ಟಿ.
ಸಾವಾ(ಸ)! ➖➖➖
ಸಾವಾ(ಸ)!
➖➖➖
ಎಂತಾ...
ಟ್ರಾಜಿಡಿ ನೋಡಿ!
ಉಪ್ಪಿನ ಸಹವಾಸ
ಮಾಡಿ
ಚಿರುಟಿ- ಮುರುಟಿ
ಹೋಯ್ತು
ಚೆಂದದ
ಮಾವಿನ ಮಿಡಿ!!.
✍ಶಾಂತಾರಾಮ್ ಶೆಟ್ಟಿ.
ಶ್ರವಣ ದೋಷ!
ಶ್ರವಣ ದೋಷ!
➖➖➖➖👂🏾
ನೀರು
ತುಂಬಿಸುತ್ತಿದ್ದ
ಶಬ್ದ
ಪ್ರಾಣಿಯ
ಚಲನದಂತೆ
ಕೇಳಿಸಿತಂತೆ !
ಶ್ರವಣ ಕುಮಾರನ
ಸಾಯುಸುವ ಮೊದಲೇ
ದಶರಥನಿಗೆ
ಶ್ರವಣ ದೋಷವಿತ್ತಂತೆ !!
✍ ಶಾಂತಾರಾಮ್ ಶೆಟ್ಟಿ
➖➖➖➖👂🏾
ಕಾರಣ!
ಕಾರಣ!
➖➖➖❓
ಮುದುಕ
ಅಲ್ಲೇ
ಒರಗಿ ಕೂತಿರುವುದು
ವಯೋ ಸಹಜ
ಸುಸ್ತಿಂದ!
ಜನರ
ಭಾವಗಳು
ಬದಲಾಗಲು ಕಾರಣ
ಪಕ್ಕದಲ್ಲಿದ್ದ
wineshop
!!
✍ ಶಾಂತಾರಾಮ್ ಶೆಟ್ಟಿ
ಕಾಲ!
ಕಾಲ!
➖➖➖🕐
ಆ ಕಲ್ಲು
ದಿನಾ ಶಿಲ್ಪಿಯ
ದಾರಿ
ಕಾಯುತ್ತಿತ್ತು...
ಮೂರ್ತಿ
ದೇವರಾಗಿದೆ
ಈಗ...
ಶಿಲ್ಪಿ
ಧರ್ಮ ದರ್ಶನದ
ಸರತಿಯಲ್ಲಿ
ಕಾಯುತ್ತಿದ್ದಾನೆ!!
✍ ಶಾಂತಾರಾಮ್ ಶೆಟ್ಟಿ
ಉರಿ !
ಉರಿ !
➖➖🌞
ಇಬ್ಬನಿಗೆ
ಇನ್ನಷ್ಟು ಹೊತ್ತು
ಅವಳ
ಕೆಂದುಟಿಯ
ಮೇಲಿರುವಾಸೆಯಿತ್ತು!
ರವಿ ಕಿರಣ
ಕಿಚ್ಚಿಂದ
ಜಾಡಿಸಿದ
ಒದ್ದೋಡಿಸಿದ!!
✍ಶಾಂತಾರಾಮ್ ಶೆಟ್ಟಿ
➖➖➖➖➖🌞
ಬೇಕಿತ್ತನಾ
ಬೇಕಿತ್ತನಾ❓
➖➖➖➖💔
ಮದುವೆಯಾದ
ಮೇಲೂ
ದಿನಾ ಬಾಯಲ್ಲಿ
ಸಾಹಿತ್ಯ ಕಾದಂಬರಿ
ಕವನ-ಕಲ್ಪನಾ...!
ಮೂರೇ ತಿಂಗಳಲ್ಲಿ
ಕೊಟ್ಟು ಬಿಟ್ಟಳು
ಕವಿಯ ಹೆಂಡತಿ
ವಿಚ್ಛೇದನ !!
✍ ಶಾಂತಾರಾಮ್ ಶೆಟ್ಟಿ
➖➖➖➖😢💔
ಬಣ್ಣದ ಲೋಕ!
ಬಣ್ಣದ ಲೋಕ!
➖➖➖➖➖
ಪುರಾಣಕಾಲ
ದಿಂದಲೂ
ಇದ್ದದ್ದೇ
ವರ್ಣಭೇದ...,
ಬೆಳ್ಳಗಿರುವರು
ಒಳ್ಳೆಯವರು-ಸುರರು,
ಕಳ್ಳರು-ಅಸುರರು
ಕರ್ರಗಿರುವರು!
ಬೆಳ್ಳಗಿರುವವರ
ಕಳ್ಳತನ-ಸುಳ್ಳುತನ
ಬಯಲಾಗಲೇ ಇಲ್ಲ....
ಎಲ್ಲಾ
ಪಾಪಗಳನ್ನು
ಪಾಪ....
ಮಸಿ ನುಂಗಿತೇನೋ?
✍ಶಾಂತಾರಾಮ್ ಶೆಟ್ಟಿ
ಪ್ರವಚನ!
➖➖➖🐣
ಮೊಟ್ಟೆಯೊಳಗೇ
ಆಧ್ಯಾತ್ಮದ
ಪ್ರವಚನ...!
ತರೆತರೆದು
ಒಳಗಿಂದ
ತೆರೆದರೆ
ಜೀವನ
ಮೆರೆಮೆರೆದು
ಹೊರಗಿಂದ
ಮುರಿದರೆ
ಮರಣ!!
✍ಶಾಂತಾರಾಮ್ ಶೆಟ್ಟಿ
ಸೋಮವಾರ, ಅಕ್ಟೋಬರ್ 23, 2017
ಕಟು ಸತ್ಯ!
ಕಟು ಸತ್ಯ!
➖➖➖➖👻
ಕೊಂದವರೇ
ಕೊಂದಿದ್ದಾರೆ
ಅನ್ನುವುದು
ಸುಳ್ಳು....,
ನಂಬಲು
ಸಾಕಷ್ಟು ಸಾಕ್ಷಿಗಳಿಲ್ಲ!
ಸತ್ತವರು
ಸತ್ತಿದ್ದಾರೆ
ಅನ್ನೋದು
ಮಾತ್ರ ಸತ್ಯ
ನಂಬಲೇ ಬೇಕು
ಸತ್ತವರು ಬದುಕಿಲ್ಲ!!.
✍🏻ಶಾಂತಾರಾಮ್ ಶೆಟ್ಟಿ.
Traditional Rivalry!
Traditional Rivalry!
➖➖➖➖➖👊🏻
ಏನಿಟ್ಟರೂ-ಎಲ್ಲಿಟ್ಟರೂ
ಹಾಗಿಟ್ಟರೂ-ಹೀಗಿಟ್ಟರೂ
ಕೊನೆಗೆ
ಹೇಗಿಟ್ಟರೂ
ಗಂಡನ ಕೆಲಸದಲ್ಲಿ
ತಪ್ಪು ಹುಡುಕುವುದು
ಹೆಂಡತಿಯ
ಸಂಪ್ರದಾಯ.....!
ಪಾಕಿಸ್ತಾನ-ಭಾರತದಂತೆ
ಗಂಡ-ಹೆಂಡಿರೂ
ಸಾಂಪ್ರದಾಯಿಕ
ವೈರಿಗಳು!!.
😥
✍🏻ಶಾಂತಾರಾಮ್ ಶೆಟ್ಟಿ
(ಗಂಡ - ಹೆಂಡತಿ ಪದ ಸ್ಥಿತ್ಯಂತರಕ್ಕೆ
ನಮ್ಮದೇನೂ ಸಾಂಪ್ರದಾಯಿಕ ವಿರೋಧವಿಲ್ಲ!)😜
ರೋಧನೆ!
ರೋಧನೆ!
➖➖➖➖❌
ಗಂಡ-ಹೆಂಡತಿ
ಜೋಡಿ ಪದಗಳು
ಎಂದೇ
ವಾದಿಸುತ್ತಿದ್ದ
ವ್ಯಾಕರಣದ ಮೇಷ್ಟ್ರು....,
ಮದುವೆಯಾದ
ಆರು ತಿಂಗಳೊಳಗೇ
ವಿರೋಧ ಪದಗಳು
ಎಂದು
ಅವಿರೋಧವಾಗಿ
ಒಪ್ಪಿ ಬಿಟ್ಟರು !!
✍🏻ಶಾಂತಾರಾಮ್ ಶೆಟ್ಟಿ
➖➖➖➖➖➖😀
ಕವಿಗೋಷ್ಠಿ!
ಕವಿಗೋಷ್ಠಿ!
➖➖➖➖
ತುಳಿದವರನ್ನು
ತೊಳೆದು ಬಿಡಿ
ಎದೆ ಸೆಟೆದು
ನೀ ನಡಿ_
ಬಂಡಾಯ
ಕವಿಗೋಷ್ಠಿಯಲ್ಲಿ
ಕವಿಗಳ ಮುಗಿಲು
ಮುಟ್ಟಿದ
ಆಕ್ರೋಶದ ಕಾವು ...!
ಖಾಲಿ ಕುರ್ಚಿಗಳು
ಚಪ್ಪಾಳೆ ತಟ್ಟಿದವು !!
✍🏻ಶಾಂತಾರಾಮ್ ಶೆಟ್ಟಿ.
➖➖➖➖➖➖😀
ಭಾನುವಾರ, ಅಕ್ಟೋಬರ್ 15, 2017
ಗೂಡು!
ಗೂಡು!
➖➖➖➖➖
ಮನಸೊಳಗೇ
ಕನಸುಗಳು
ಬಣ್ಣದ ಹಕ್ಕಿಯ
ಹಾಗೆ
ಬಿಡದೇ
ಗೂಡು
ಕಟ್ಟಬೇಕು !
ಸವಿ ನೆನಪಿನ
ಹಸಿರು
ಎಳೆ-ಎಳೆಗಳ
ಎಳೆದೆಳೆದು
ಬೆಚ್ಚಗೆ
ಎದೆಯೊಳಗೆ
ಪ್ರೀತಿ
ಹುಟ್ಟಬೇಕು !
✍🏻 ಶಾಂತಾರಾಮ್ ಶೆಟ್ಟಿ
🐥
ರಂಗು!🌹
ರಂಗು!🌹
➿➿➿➿
ಮರೆಯಲಾಗದು
ಮರೆತು ಹೋಗದು
ಕೂತಲ್ಲಿ-ನಿಂತಲ್ಲಿ
ನೀನಿಟ್ಟ ನೆನಪುಗಳು
ದಿನಾ...
ಅದೇ ಗುಂಗು !
ಕಣ್ಣೀರು
ಹರಿಸಿ ತೊಳೆದರೂ
ತೊಳೆದು ಹೋಗದು
ಹೃದಯ ತುಂಬಾ
ನೀ
ಹಚ್ಚಿ ಹೋದ
ಪ್ರೀತಿಯ ರಂಗು !!
✍🏻ಶಾಂತಾರಾಮ್ ಶೆಟ್ಟಿ .
ಕೃಪೆ!
ಕೃಪೆ!
➿➿➿🙏
ನನ್ನ
ಎಲ್ಲಾ ಕನಸುಗಳಿಗೂ
ರೆಕ್ಕೆ ಬರಬೇಕು.... ,
ಹಾರಬೇಕು
ನಿಮ್ಮಂತೆ
ಬಾನೆತ್ತರಕ್ಕೆ!
ಮುಖವೆತ್ತಿ
ಮೊರೆಯಿಟ್ಟು
ಕಾಯುತ್ತಿರುವೆ
ಕಾಯ
ಕಾಯುವವನ ... ,
ಅವನ
ಉತ್ತರಕ್ಕೆ !!
✍🏻ಶಾಂತಾರಾಮ್ ಶೆಟ್ಟಿ
➖➖➖➖➖🙏
ಒಂಟಿ!
➖➖➖➖🦆
ಕಾಯುವವನ
ಕಣ್ಣು
ತಪ್ಪಿಸಿಯೂ
ಕೊಲ್ಲುವರು
ಹಲವರು !
ಒಬ್ಬಂಟಿ
ನೀನು ....
ಬದುಕು
ತಲೆಕೆಳಗಾಗಿ
ಬೀಳುವಾಗ
ಜೊತೆಗಿದ್ದವರೂ
ತಪ್ಪಿಸಿ
ಹಾರುವರು !!
✍ಶಾಂತಾರಾಮ್ ಶೆಟ್ಟಿ
➖➖➖➖➖➖🦅
ಗಿಲಿ ಗಿಲಿ!
ಗಿಲಿ ಗಿಲಿ!
➖➖➖➖🌹
ಅವಳ
ಓರೆಗಣ್ಣಿನ 👁
ಒಂದೇ
ಒಂದು ಝಲಕ್...!
ಆಹಾ....
ಗಿಲಿ ಗಿಲಿ
ಮ್ಯಾಜಿಕ್!
ಹೃದಯ
ಮಂಗ ಮಾಯ!!.
🐒
✍🏻ಶಾಂತಾರಾಮ್ ಶೆಟ್ಟಿ.
➖➖➖➖➖➖
ಮಂಗಳವಾರ, ಸೆಪ್ಟೆಂಬರ್ 19, 2017
➕& ➖
➕& ➖
➿➿➿➿➿
ಸಕಾರಾತ್ಮಕವಷ್ಟೇ
ಅಲ್ಲ
ನಕಾರಾತ್ಮಕ
ಧೋರಣೆಗಳಲ್ಲೂ
ಜೀವ ಜಾತಿಯ
ಸಮಾಜದ
ಒಳಿತಿದೆ...!
ಕೊಲೆ ಮಾಡಲು
ಕೇಳಿದ...
ಆಗಲ್ಲ ಎಂದೆ!!
🤔
✍ಶಾಂತಾರಾಮ್ ಶೆಟ್ಟಿ
➕➖➕➖➕➖➕
ಗುರುವಾರ, ಸೆಪ್ಟೆಂಬರ್ 14, 2017
ತಾಂತ್ರಿಕ- ಮಾಂತ್ರಿಕ
ತಾಂತ್ರಿಕ- ಮಾಂತ್ರಿಕ!
➖➖➖🍋🌶🌶🌶
ಚೀನಾ
ಜಪಾನ್ ಗೆ
ಹೋಲಿಸಿದರೆ
ನಾವು ಇನ್ನೂ
50-60 ವರ್ಷ
ಹಿಂದಿದ್ದೇವೆ...!
ಅಪಘಾತ
ತಪ್ಪಿಸಲು
ಈಗಲೂ ನಾವು
ಮೂರು ಮೆಣಸಿನಕಾಯಿ
ಒಂದು
ನಿಂಬೆಕಾಯಿಯನ್ನೇ
ನಂಬಿದ್ದೇವೆ!!
😜
✍ಶಾಂತಾರಾಮ್ ಶೆಟ್ಟಿ
🍋🌶🍋🌶🍋
ಭಾನುವಾರ, ಆಗಸ್ಟ್ 20, 2017
ಬಾಂಧವ್ಯ!
ಬಾಂಧವ್ಯ!
ನೊಂದವರ
ನೋವಿಗೆ
ನೋಯುವವರಿಲ್ಲ
ಅನ್ನುವ
ನೋವು 😢
ನೋವಿಗೂ ಇದೆ!
ನೋವೂ
ನಮ್ಮೊಳಗಿನವನೇ
ಬಿಟ್ಟಿರಲಾಗದವ..,
ನಲಿವಿನಂತೆ😀
ನೋವಿಗೂ
ಬಂಧುಗಳು
ನಾವು-ನೀವು!!.
✍🏽ಶಾಂತಾರಾಮ್ ಶೆಟ್ಟಿ
➖➖➖➖➖🌹❣
ಉನ್ನತಿ!
ಉನ್ನತಿ!
➖➖➖➖
ಕಳೆದು
ಕಳೆದೂ
ಕಣ್ಣೆದುರೇ
ಬೆಳೆದವರಿದ್ದಾರೆ....,
ಮೋಡ
ಹನಿ-ಹನಿಯಾಗಿ
ಕಳೆದು
ಇಳೆಯೊಳಗೆ
ಇಳಿದು
ಪಚ್ಚೆಪೈರಾಗಿ
ಸೊಂಪಾಗಿ-
ತಂಪಾಗಿ
ಬೆಳೆದದ್ದು!
ಗಂಧ
ಅರೆದು-ಅರೆದೂ
ಸುತ್ತ ಮುತ್ತ
ಕಂಪು ಬೀರಿ
ನೊಸಲಿಗೇರಿದ್ದು!
ತುಳಿದು-ತುಳಿದೂ
ಮಣ್ಣು
ಮಡಕೆಯಾಗಿ
ಅನ್ನದ
ಅಕ್ಷಯದ
ಪಾತ್ರೆಯಾದದ್ದು!
ಯಾಕೆ
ಕಳೆದುದರ ಚಿಂತೆ?
ಕಳೆದೂ
ಬೆಳೆಯಬಹುದಂತೆ!!
✍🏽ಶಾಂತಾರಾಮ್ ಶೆಟ್ಟಿ➖
➖➖➖➖➖➖➖
ಧೈರ್ಯ!
ಧೈರ್ಯ!
➖➖➖➖
ಧೀರ
ಸಾವಿನ ಮನೆಯ
ಕದ ತಟ್ಟಿ
ಕೇಳಿದ
ನಿನಗೆ
ಬದುಕಲು
ಆಸೆಯಿದೆಯಾ?
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
ಮಂಗಳವಾರ, ಆಗಸ್ಟ್ 15, 2017
ಆತ್ಮಹತ್ಯೆ!
ಆತ್ಮಹತ್ಯೆ!
➖➖➖➖
ದಿನಾ
ಸೊಂಪಾಗಿ
ನೆರಳೀಯುತ್ತಿದ್ದ
ಆಲದ ಮರ
ಇಂದೇಕೋ
ಅವನ
ಜಾತಿ ಕೇಳಿತು!
ಧರ್ಮಾಂಧತೆ
ಮೇರೆ ಮೀರಿ
ಮರವೇರಿ
ಬಾಯಿಗೆ ಬೆರಳಿಟ್ಟು
ನಿಶ್ಯಬ್ಧವಾಗಿ
ರೆಂಬೆಯಲಿ
ನೆಲೆಸಿತ್ತು
ಮರದ
ಕೊಂಬೆ
ನಡುನೆತ್ತಿಗೆ ಬಿದ್ದು
ದೇಹ ಬಿಡಿ
ಆತ್ಮ
ಕೂಡಾ ಸತ್ತಿತು!!.
✍🏽ಶಾಂತಾರಾಮ್ ಶೆಟ್ಟಿ 😐
➖➖➖➖➖➖➖
ಸಮಾಧಿ!
ಸಮಾಧಿ!
➖➖➖➖💀
ಸತ್ಯ ಸತ್ತಿದ್ದೇ
ಬಾಯ್ಬಿಡದವರ
ಬಾಯೊಳಗೆ.. !
ನಾಲಗೆನೇ
ಸತ್ಯದ
ಹಾದಿ...
ನಾಲಗೆಯೇ
ಸತ್ಯದ
ಸಮಾಧಿ!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖
ಬದ್ಧ!
ಬದ್ಧ!
☘☘☘☘
ಬುದ್ಧನ ಕುರಿತು
ಕೊರೆದವರೆಲ್ಲಾ
ಬುದ್ಧನಿಗೆ
ಬದ್ಧರಲ್ಲ......!
ಆಸೆ ದು:ಖದ ಮೂಲ
ಎಂದು
ಜರಿದ
ಪ್ರವಚನಕಾರರು
ಸಂಭಾವನೆ
ಕಡಿಮೆಯಾಯಿತೆಂದು
ಎತ್ತಿದರಂತೆ
ಸಂಘಟಕರಲ್ಲಿ
ತಕರಾರು!!
✍🏽ಶಾಂತಾರಾಮ್ ಶೆಟ್ಟಿ 😳
➖➖➖➖➖➖➖
ವರ್ತಮಾನ!
ವರ್ತಮಾನ!
➖➖➖➖➖➖
ಸಜ್ಜನ ಸಾತ್ವಿಕರಿಗೆ
ಭೂಮಿ ಮೇಲೆ
ಇಂದು
ಕಷ್ಟಗಳಿರಬಹುದು
ನಾಳೆ
ಮೇಲೆ
ಸ್ವರ್ಗ ಕಾದಿದೆ!
ಅನುಭೋಗಕ್ಕೆ
ಒಂದಿಷ್ಟು
ಪುಣ್ಯದ ಮಿತಿ....!
ವರ್ತಮಾನದಲ್ಲಿ
ಬದುಕುವ
ಸುಳ್ಳರಿಗೆ ಕಳ್ಳರಿಗೆ
ಲೂಟಿಗಾರರಿಗೆ
ನಾಳೆಗಳಲ್ಲಿ
ನಂಬಿಕೆಯಿಲ್ಲ....!
ಇಂದೇ
ಭೂಮಿಯಲ್ಲೆ
ಸ್ವರ್ಗಸೃಷ್ಟಿಯಾಗಿದೆ
ಉದ್ಘಾಟನೆಗೆ
ಇಂದ್ರನೇ
ಮುಖ್ಯ ಅತಿಥಿ!!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖👻.
ಬದ್ಧತೆ!
ಬದ್ಧತೆ!
➖➖➖
ಬೀಜ
ನಾಶದಿಂದ
ಬೆಳೆದ ಹೆಮ್ಮರ...
ನಾಶದ
ಹೊಣೆ ಹೊತ್ತು
ಋಣ ತೀರಿಸಿತು....
ಕೊಟ್ಟು
ಸಾವಿರ ಪಟ್ಟು!
✍🏽ಶಾಂತಾರಾಮ್ ಶೆಟ್ಟಿ.
➖➖➖➖➖🌳
ತಾಕತ್ತು!
ತಾಕತ್ತು!
➖➖➖
ಭಾಷೆ
ಬರದವರ
ನಡುವೆಯೂ
ದುಡ್ಡು
ಮಾತಾಡಿತು!!.
✍ಶಾಂತಾರಾಮ್ ಶೆಟ್ಟಿ
ಹಾರೈಕೆ!💧
ಹಾರೈಕೆ!💧
➖➖➖➖
ನಿನ್ನ ನೋವಿನ
ಕೊನೆಯ
ಬಿಂದುವಾಗಲಿ
ನಾನು....
ಕೆನ್ನೆಯ
ಇಳಿಜಾರಿನಲ್ಲಿ
ಜಾರುವ
ಮುನ್ನ
ಹರಸಿತು
ಕಣ್ಣೀರ ಹನಿ!! 😢
✍ಶಾಂತಾರಾಮ್ ಶೆಟ್ಟಿ💧
ಸೋಮವಾರ, ಆಗಸ್ಟ್ 7, 2017
ಅನ್ಯಾಯ!
ಅನ್ಯಾಯ!
➖➖➖➖➖
ಸಂಕುಚಿತ
ಸಮಾಜದಲ್ಲಿ
ಸಾಮಾನ್ಯನ
ಬದುಕು
ಅಯೋಮಯ..,
ಜಾತಿ-ಧರ್ಮ
ಧನ ಬಲ
ಜನ ಬಲ
ಎಡ-ಬಲ
ರಾಜಕೀಯ!
ಅಯ್ಯಯ್ಯೋ...
ಎಂದು
ಬಾಯ್ ಬಾಯ್
ಬಡ್ಕೊಂಡು
ಎದೆಬಿರಿದು
ಪಾಪ....
ನಿನ್ನೆನೇ
ಸತ್ತೋಯ್ತಂತೆ
ನ್ಯಾಯ !!
✍🏽 ಶಾಂತಾರಾಮ್ ಶೆಟ್ಟಿ
➖➖➖➖➖😕😢
ಉನ್ಮಾದ!
ಉನ್ಮಾದ!
➖➖➖➖➖
ಈ ದೇಶ ನನ್ನದು
ನನ್ನ ದೇಹದೊಳು
ಹರಿಯುವ
ಹನಿ ಹನಿ
ರಕ್ತವೂ ನಿನ್ನದು !
ಕವಿ ಬರೆದ
ಗಾಯಕ ಹಾಡಿದ
ಜನ
ವೀರಾವೇಶದಿಂದ
ಕುಣಿದರು
ದಣಿದರು...!!
ಉನ್ಮತ್ತ ಮತಭಕ್ತ
ರಾಜಕಾರಣಿ
ಎದೆಸೀಳುವ
ತಲೆಕಡಿಯುವ
ಯುದ್ದೋನ್ಮಾದದ
ರಕ್ತಸಿಕ್ತ
ಪಂಥಾಹ್ವಾನ ನೀಡಿದ!
ಗಡಿಯಲ್ಲಿ
ಗುಂಡು ಎದೆಯೊಕ್ಕಿಸಿ
ರಕ್ತ ಬಸಿದುಕೊಂಡು
ವೈರಿಯ ಪ್ರಾಣ
ಕಸಿದುಕೊಂಡು
ತಣ್ಣಗೆ ಸತ್ತಿದ್ದು
ಸೈನಿಕ ಮಾತ್ರ!
ವೀರ ಸತ್ತಾಗ
ಹೆಂಡತಿ ಮಕ್ಕಳು
ಎದೆಬಿರಿದು ಅತ್ತಾಗ
ಲೆಕ್ಕಿಸಲಿಲ್ಲ-ಬಿಕ್ಕಿಸಲಿಲ್ಲ
ದು:ಖಿಸಲು
ಜನರೇ ಇಲ್ಲ !
ಉಗುರು ಕಚ್ಚುವ
ದೇಶಭಕ್ತರೆಲ್ಲರೂ
ಅತಂಕಿತರೇ
ದೇಶ ಗೆದ್ದರೆ ಸಾಕು
ಕೊನೆಯ ಬಾಲಲ್ಲಿ
ಗೆಲ್ಲಲು ಇನ್ನೂ
ಐದು ರನ್ನು ಬೇಕು!!.
✍🏽ಶಾಂತಾರಾಮ್ ಶೆಟ್ಟಿ 😕
ಆವಾಸ! .
ಆವಾಸ! .
➖➖➖➖😳
ಶಾರದೆ
ಬರೀ
ಜ್ನಾನಿ-ವಿಜ್ನಾನಿಗಳ
ಮನೆಯಂಗಳದ
ಮಹಾರಾಣಿ!
ಲಕ್ಷ್ಮೀ
ಹಾಗಲ್ಲ...
ಕಳ್ಳಕಾಕ
ಸುಳ್ಳ ಮಳ್ಳರ
ವ್ಯತ್ಯಾಸವಿಲ್ಲ!
ದಡ್ಡ ಕೂಡಾ
ದುಡ್ಡು
ಮಾಡಬಲ್ಲ !!.
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
ದಾರಿ ತಪ್ಪಿದ ಮಗ!
ದಾರಿ ತಪ್ಪಿದ ಮಗ!
➖➖➖➖➖➖
ಅವಳ ಮನೆಯಿದ್ದ
ಓಣಿ ಅವನ
ದಿನದ-ಅನುದಿನದ
ದಾರಿಯಲ್ಲ...!
ಪ್ರೀತಿ ತುಂಬಿದ
ಹೃದಯ
ಲಯ ತಪ್ಪಿದ್ದು!
ಕಾಡಿಬೇಡಿ
ಕಾಲನ್ನು ಕೇಳಿ
ಒಪ್ಪಿಸಿದ್ದು....
ಅವಳ
ಮೆಲುನಗು
ಅವನ
ದಾರಿ ತಪ್ಪಿಸಿದ್ದು!!.
✍🏽ಶಾಂತಾರಾಮ್ ಶೆಟ್ಟಿ
ಪರ್ಣಕುಟಿ!
ಪರ್ಣಕುಟಿ!
☘☘☘☘
ಜಾತಿ
ಸ್ವಾಮಿಗಳಿಗೊಂದು
ಸಣ್ಣ
ಆಶ್ರಮ ಬೇಕಂತೆ!
ಅವರೇ
ಹೆಸರಿಟ್ಟಿದ್ದಾರೆ
ನಮಗ್ಯಾಕೆ ಚಿಂತೆ?
ಪರ್ಣಕುಟಿ
ಅಂದಾಜು ವೆಚ್ಚ
ಸುಮಾರು
ಹತ್ತು ಕೋಟಿ !
ತಲೆಗೆ
ಹತ್ತೇ ರೂಪಾಯಿ
ಸಾಕೆನ್ನುತ್ತೆ
ಭಕ್ತಕೋಠಿ!!
✍🏽 ಶಾಂತಾರಾಮ್ ಶೆಟ್ಟಿ.
☘☘☘☘☘☘☘
ಭಾನುವಾರ, ಜುಲೈ 16, 2017
ಕೊಳ್ಳಿ!
ಕೊಳ್ಳಿ!
➖➖➖🔥🔥
ಎಲ್ಲಾ ಸುಟ್ಟು
ಬೂದಿಯಾಗಿ
ಆರಿದ
ನಂತರ
ಶಾಂತಿ ಮಂತ್ರ
ಜಪಿಸಿತು
ಬೆಂಕಿಕಡ್ಡಿ!
✍🏽ಶಾಂತಾರಾಮ್ ಶೆಟ್ಟಿ
➖➖➖➖➖🔥🔥
ಕುರುಡು!
ಕುರುಡು!
▪▪▪▪▪▪
ಹಠಕ್ಕೆಬಿದ್ದ
ಹರಿಶ್ಚಂದ್ರ
ಸತ್ಯದ
ಹಾದಿಯಲ್ಲೇನೋ
ಗೆದ್ದ!
ತನ್ನ ಸತ್ಯದ
ಶೂಲದಿಂದ
ತಿವಿ-ತಿವಿದು
ಹೆಂಡತಿ-ಮಗನ
ಹಿಂಸಿಸಿದ್ದ!
ಸತ್ಯ- ಹಿಂಸೆ
ಅಸತ್ಯ-ಅಹಿಂಸೆ
ಗಳ
ಕವಲುದಾರಿಯಲ್ಲಿ
ಏಗಲಾರದೆ
ಧರ್ಮ
ತೊಳಳಾಡಿದ್ದು
ಭೇಷ್
ಎಂದ ಹೊಗಳುಭಠರಿಗೆ
ಕಾಣಿಸಲೇ ಇಲ್ಲ.
✍🏽ಶಾಂತಾರಾಮ್ ಶೆಟ್ಟಿ
〰〰〰〰〰〰〰
ಸ್ವರ್ಗ!
ಸ್ವರ್ಗ!
=======
ಗಾಂಧಿ ಬುದ್ಧ
ಬಸವಣ್ಣನಂತ
ಸಜ್ಜನರೆಲ್ಲಾ
ಸ್ವರ್ಗದಲ್ಲಿದ್ದಾರೆ…,
ಅಜ್ಹಿ
ಮೊಮ್ಮಗನಿಗೆ
ನೋಡದೆ
ಹೇಳಿದ ಸುಳ್ಳು!
ಕೆಲವೊಮ್ಮೆ
ಸುಳ್ಳುಗಳೂ
ಭೂಮಿಯಲ್ಲಿ
ಸ್ವರ್ಗ ಸೃಷ್ಟಿಸುತ್ತವೆ!!.
ಶಾಂತಾರಾಮ್ ಶೆಟ್ಟಿ.
°°°°°°°°°°°°°°°°°°°°°
ಊರುಗೋಲು!
ಊರುಗೋಲು!
➿➿➿➿➿➿
ವೃದ್ಧಾಪ್ಯದಲ್ಲಿ
ಊರುಗೋಲಾಗುತ್ತಾರೆ
ಎಂದು
ಜೋಪಾನವಾಗಿ
ಸಾಕಿದ ಮಕ್ಕಳು!
ಊರುಗೋಲಾದದ್ದು
ಮಾತ್ರ
ಮೂಲೆಯಲ್ಲಿ
ಬಿಸಾಕಿದ ಕೋಲು!!
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖
ಗುರುವಾರ, ಜುಲೈ 13, 2017
ಬೇಳೆ!
ಬೇಳೆ!
➖➖➖➖
ಗ್ಯಾಸ್-ಕಟ್ಟಿಗೆ
ಯಾವ
ಬೆಂಕಿಯೂ
ಸಾಲುವುದಿಲ್ಲ.....
ಕೋಮು ದ್ವೇಷಾಗ್ನಿಯ
ಉರಿಯೇ
ಬೇಕು
ಸರಾಗವಾಗಿ
ಬೇಯಲು
ರಾಜಕೀಯ ಬೇಳೆ !
✍🏽ಶಾಂತಾರಾಮ್ ಶೆಟ್ಟಿ
🔪🔪🔪🔪🔪🔪🔪
ಅಂಧತ್ವ!
ಅಂಧತ್ವ!
-------------
ಧರ್ಮಗುರುಗಳೆಲ್ಲಾ
ಸೇರಿ
ದೇವರ ಹೆಸರಲ್ಲಿ
ಮೊಣಕೈಗೆ
ಹಚ್ಚಿದ ಬೆಲ್ಲ
ಮನ ಮೈಗೆ
ಮೆತ್ತಿದ ಭಯವೆಲ್ಲ
ಭಕ್ತಾಂಧನಿಗೆ
ಪ್ರಸಾದವಾದದ್ದು
ಮರಣ
ಮೋಕ್ಷದಲ್ಲಿ!.
ಸ್ವರ್ಗದಲ್ಲಿ
ಭಕ್ತನಿಗೆ ಸೀಟು
ಕಾದಿರಿಸಿದವರಿಗೆ
ಆಸ್ಪತ್ರೆಯಲ್ಲಿ
ಆತನ
ನರಕಯಾತನೆ
ಕಾಣಲೇ ಇಲ್ಲ!!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖➖
ಕುರಿಗಳು!
ಕುರಿಗಳು!
🐑🐑🐑
ಬರೇ ಓಟಿಗಾಗಿ
ಇಷ್ಟೆಲ್ಲಾ
ಎಂದು
ಗೊತ್ತಿದ್ದರೂ....,
ಅವರಿವರ
ಮಾತು ಕೇಳಿ
ದಿನಕ್ಕೊಂದು
ಹಸಿ ಹಸಿ
ಹೆಣ ಅಡ್ಡಬಿದ್ದರೆ!
ಒಪ್ಪಿಕೊಳ್ಳಲೇಬೇಕು
ನಾವೆಲ್ಲರೂ...
ಬುದ್ಧಿವಂತರ
ನಾಡಲ್ಲಿ
ಈಗಲೂ
ದಡ್ಡರಿದ್ದಾರೆ!!
✍🏽ಶಾಂತಾರಾಮ್ ಶೆಟ್ಟಿ
ಯೋಗ್ಯತೆ!
ಯೋಗ್ಯತೆ!
🐕.....................
ನಿಯತ್ತು
ಹಾಗಂದರೇನು ಗೊತ್ತಾ?
ಬಾಲ
ಅಲ್ಲಾಡಿಸುತ್ತಿದ್ದ
ನಾಯಿಯನ್ನೂ
ಬಿಡದೆ ನನ್ನದೊಂದು
ಕೊಂಕು !
ಅವಮಾನ
ಆಗಿರಬೇಕು....,
ನಾಯಿ
ಬೆನ್ನಿಡಿದು
ಬಿಡದೆ
ಬೊಗಳುತ್ತೆ
ಪ್ರಶ್ನಿಸುವುದಕ್ಕೂ
ಇರಬೇಕು
ಒಂದಿಷ್ಟು
ಯೋಗ್ಯತೆ!.
✍🏽ಶಾಂತಾರಾಮ್ ಶೆಟ್ಟಿ
................................🐕
ಬಂದ್!
ಬಂದ್!
〰〰〰
ಬಾಗಿಲು
ತಟ್ಟುತ್ತಿವೆ
ನಿನ್ನ ನೆನಪುಗಳು
ದಿನಾ ಬಂದು!
ಮನದೊಳಗೆ
ಮನೆಯೊಳಗೆ
ನೀನೇ
ಬಂದು....
ಮಾಡುಬಿಡು
ಬಾಗಿಲು ಬಂದು!!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖
ಮರಣಭಯ!
ಮರಣಭಯ!
➖➖➖➖➖➖
ತಾನೂ....
ಮೊಟ್ಟೆ ಒಡೆದೇ
ಹೊರಬರುವುದಾದರೂ
ಕೋಳಿ ಮರಿಗೆ
ತನಗಿಂತ ಮೊದಲೇ
ಯಾರಾದರೂ ಒಡೆಯುವರೋ
ಅನ್ನುವ
ಚಿಂತೆ !!
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖
ಶನಿವಾರ, ಜುಲೈ 8, 2017
ಮೂಲ!
ಮೂಲ!
➖➖➖➖
🦋🦋🦋
ರೇಷ್ಮೆಯ
ಹುಳು
ಚಿಟ್ಟೆಯಾಗಿ
ಹಾರಾಡುವ
ಕನಸು ಹೊತ್ತು
ಆಸೆಯ ಬಲೆಯೊಳಗೆ
ಗೂಡು ಕಟ್ಟುವುದ
ಬುದ್ಧ ನೋಡಿದ್ದ .....
ಬಿಸಿ ನೀರಿಗೆ ಬಿದ್ದು
ವಿಲವಿಲ ಒದ್ದಾಡಿ
ಸಾಯುವುದ ನೋಡಿ
ಆಸೆಯೇ
ದು:ಖದ ಮೂಲ
ಎಂದಿದ್ದ !!.
✍🏽ಶಾಂತಾರಾಮ್ ಶೆಟ್ಟಿ🦋
➖➖➖➖➖➖➖
ಪೆದ್ದ!!.
ಪೆದ್ದ!!.
➖➖➖
ಮದುವೆಯಾಗಿ
ಮನೆ ಬಿಟ್ಟು
ಹೋಗಿ
ಮರದಡಿಯಲ್ಲಿ
ಕೂತು
ಅವನು
ಬುದ್ಧನಾದದ್ದು....
ಮರದಡಿಯಲ್ಲಿಯೇ
ಅವಳ
ಜೊತೆ ಕೂತು
ಪ್ರೀತಿಯ ಮಾತು!
ಮನೆ ಬಿಟ್ಟು
ಹೋಗಿ
ಮದುವೆಯಾಗಿ
ನಾನು
ಪೆದ್ದನಾದದ್ದು !!
🤡
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
(ಎಂಚಿನಾ ಕರ್ಮಯೆ.....🤡)
ಅನ್ನಬ್ರಹ್ಮ!
ಅನ್ನಬ್ರಹ್ಮ!
🌱🌱🌱🌱
ಕರಿಹಲಗೆಯ
ಮೇಲೆ
ಕಲಿಸಲಾಗದ
ಹಸಿವಿನ
ಅಕ್ಷರಗಳನ್ನು
ರೈತ
ನೇಗಿಲ ಗೆರೆಗಳಲ್ಲಿ
ಗೀಚಿದ !!
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
ಗುರುವಾರ, ಜುಲೈ 6, 2017
(ಅಪ)ನಂಬಿಕೆ!
(ಅಪ)ನಂಬಿಕೆ!
➖➖➖➖➖
ನಂಬಿಕೆಯದೇನೂ
ತಪ್ಪಿರಲಿಲ್ಲ
ಮಾತಿನೊಂದಿಗೆ
ಸುತ್ತಿಕೊಂಡಿತ್ತು
ಅಷ್ಟೇ....
ದಾರಿ ತಪ್ಪಿದ್ದು
ಮಾತು!.
ಇಂದು ಬೆಳಿಗ್ಯೆ
ಅಪಹಾಸ್ಯಕ್ಕೆ
ಹೆದರಿ
ನಂಬಿಕೆ
ಆತ್ಮಹತ್ಯೆ
ಮಾಡಿಕೊಂಡಿತ್ತು!!.
✍🏽 ಶಾಂತಾರಾಮ್ ಶೆಟ್ಟಿ
➖➖➖〰〰〰〰〰
ಕನ್ನಡಿಗ!
ಕನ್ನಡಿಗ!
➖➖➖➖
ನೀವು ಕನ್ನಡದವರಾ?
ಕನ್ನಡಿಗನೊಬ್ಬ
ಕನ್ನಡಿಗನನ್ನು
ಕನ್ನಡಿ ಹಿಡಿದು
ಬೆಂಗಳೂರೆಲ್ಲ
ಹುಡುಕಿದ...
ಕೊನೆಗೂ ಒಬ್ಬ
ಸಿಕ್ಕಿ...
ಎಸ್... ಐಯಾಮ್ ಕನ್ನಡಿಗ
ಅಂದ
ಹೆಮ್ಮೆಯಿಂದ!!
✍🏽ಶಾಂತಾರಾಮ್ ಶೆಟ್ಟಿ 🤡
ಬುಧವಾರ, ಜೂನ್ 28, 2017
ಪ್ರೇಮ ಬೃಂದಾವನ!
ಪ್ರೇಮ ಬೃಂದಾವನ!
💞💞💞💞💞
ನಿನ್ನೊಲುಮೆಗೆ
ಕಾದು
ಹೃದಯದೊಳಗೆ
ಪ್ರೀತಿ
ಗೂಡು ಕಟ್ಟಿದೆ
ಇನಿಯಾ.....!
ಬಾ...
ಬಂದು...
ಬೃಂದಾವನವಾಗಿಸು
ಮನೆಯಾ !!
✍🏽ಶಾಂತಾರಾಮ್ ಶೆಟ್ಟಿ .
♥♥♥♥♥♥♥
ಮಂಗಳವಾರ, ಜೂನ್ 27, 2017
ಆಲದ ಮರ!.
ಆಲದ ಮರ!.
➖➖➖➖➖
ಹುಟ್ಟಿದಾಕ್ಷಣ
ಹೃದಯ ತಟ್ಟಿದ
ಸುಂದರ ಕಾವ್ಯ
ಅಮ್ಮಾ....!
ನೀನು ಮಹಾಕಾವ್ಯ
ಅರಿಯಲು
ಸಮಯ ಕೊಟ್ಟವ !
ಅಪ್ಪಾ...
ನೀನು ಆಲದ ಮರ
ಅಳುವ
ಕಣ್ಣೀರಿಗೆ
ಬೆರಳಿಟ್ಟವ
ಸುಡುವ
ನೆತ್ತಿಗೆ
ನೆರಳಿಟ್ಟವ !!.
✍🏽ಶಾಂತಾರಾಮ್ ಶೆಟ್ಟಿ.
ಲಂಚಾವತಾರ!
ಲಂಚಾವತಾರ!
➖➖➖➖➖
ಸತ್ತವನು
ಸರಕಾರಿ
ಅಧಿಕಾರಿ
ಬಲಾ.....
ಭ್ರಷ್ಟಾಚಾರಿಯಂತೆ!
ಯಮ
ಬಂದು ಕರೆದಾಗ
ವಾರ ಬಿಟ್ಟು ಬಾ
ಅರ್ಜಂಟಿದ್ದರೆ
ಹತ್ತುಸಾವಿರ
ತಳ್ಳು
ಎಂದನಂತೆ !!.
ತೃಣ ಸಮಾನ! ➖➖➖➖➖➖
ತೃಣ ಸಮಾನ!
➖➖➖➖➖➖
ಗರಿಕೆಯ
ಹುಲ್ಲಿಲ್ಲದೆ
ಹೊಟ್ಟೆ ನೋವಿಂದ
ಬೊಬ್ಬಿಡುತ್ತಿತ್ತು
ಕಾಂಕ್ರೀಟ್
ಬೀದಿಯಲ್ಲಿ ನಾಯಿ!
ನಗರ
ಜೀವನ
ತೃಣ
ವಿಹೀನ !!
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
ಅಮ್ಮಾವ್ರು..!!
ಅಮ್ಮಾವ್ರು..!!
〰〰〰〰〰
ನಮ್ಮ
ಮನೆಯಲ್ಲಿ
ನನ್ನ
ಮಾತಿನಂತೆಯೇ
ಎಲ್ಲಾ
ನಡೀಬೇಕು...!
ಅದರೂ
ನನ್ನ ನಿರ್ಧಾರ
ನಾಳೆ
ಹೇಳ್ತೇನೆ...
ಹೆಂಡ್ತೀನ
ಒಂದು ಮಾತು
ಕೇಳ್ಬೇಕು!!.
✍🏽ಶಾಂತಾರಾಮ್ ಶೆಟ್ಟಿ🤡
➿➿➿➿➿➿➿➿
ಶನಿವಾರ, ಜೂನ್ 10, 2017
ಅಯ್ಯೋ... ಕೊಲೆ !!
ಅಯ್ಯೋ... ಕೊಲೆ !!
➖➖➖➖➖➖
ಖಣ್ಣಡಕ್ಕಾಗಿ
ಶಾಯಳೂ ಶಿದ್ದ
ಎಂದು ಬೊಬ್ಬಿರಿದಿದ್ದ
ಕನ್ನಡ
ಹೋರಾಟಗಾರ
ಕನ್ನಡವನ್ನೇ
ಕತ್ತು ಹಿಸುಕಿ
ಸಾಯಿಸಿದ್ದ !!
✍🏽ಶಾಂತಾರಾಮ್ ಶೆಟ್ಟಿ
😜😜😜😜😜😜😜
ದುರಾದೃಷ್ಟ!
ದುರಾದೃಷ್ಟ!
➖➖➖➖➖
ರೈತರ ಆತ್ಮಹತ್ಯೆ
ಸಂಬಂಧ
ವಿರೋಧ ಪಕ್ಷದ
ಶಾಸಕರೇನೂ
ಸುಮ್ಮನಿರಲಿಲ್ಲ !
ಸದನದ
ಬಾವಿಗಿಳಿದು
ಹೋರಾಡಿ
ಹೊರಳಾಡಿದರು..
ದುರಾದೃಷ್ಟಕ್ಕೆ
ಬಾವಿಯಲ್ಲಿ
ನೀರಿರಲಿಲ್ಲ !!.😢
✍🏽ಶಾಂತಾರಾಮ್ ಶೆಟ್ಟಿ
ಭಾನುವಾರ, ಜೂನ್ 4, 2017
ಆಮ್ಲೆಟ್
ಆಮ್ಲೆಟ್
➖➖➖➖
ಮೊಟ್ಟೆಯೊಳಗಿಂದ
ಕಾವಲಿಗೆ
ಬಿದ್ದಾಗಲೇ
ಗೊತ್ತಾದದ್ದು
ಕೋಳಿ ಮರಿಗೆ
I am late !!.
➖➖➖➖➖
ಚಿಂತೆ
ಚಿಂತೆ
➖➖➖➖
ಮದುವೆಯಾಗದವನ
ಚಿಂತೆ
ಹೆಂಡತಿ ಸಿಗುತ್ತಿಲ್ಲವಂತೆ
ಮದುವೆಯಾದವನ
ಚಿಂತೆ
ಹೆಂಡತಿ ಕೈಗೇ ಸಿಗುತ್ತಿಲ್ಲವಂತೆ !!.😜
ಇಲ್ಲಗಳ ಬದುಕು!.
ಇಲ್ಲಗಳ ಬದುಕು!.
➖➖➖➖➖➖
ಹಸಿರಿಲ್ಲ
ಉಸಿರು ಬೇಕು
ಮಳೆಯಿಲ್ಲ
ನೀರ
ಒಸರಿರಬೇಕು
ಮಣ್ಣಿಲ್ಲ
ಇಳೆ ಬೆಳೆ
ಬೆಳೀಬೇಕು!
ಬದುಕಿಲ್ಲ
ಜಗದೊಳಗೆ
ಜನರೊಳಗೆ
ಬದುಕಿದಂತೆ
ನಟಿಸಬೇಕು!
ಬೇಕುಗಳ
ಜಯಿಸೋ
ಭರದಲ್ಲಿ
ನರ
ವಾಸ್ತವ
ಮರೆಯುತ್ತಾನೆ
ಸಾವ
ಕರೆಯುತ್ತಾನೆ!
ಮನಸ್ಸಿಲ್ಲ......,
ಆದರೂ
ನಾಳೆ
ಸಾಯಬೇಕು!!
✍🏽ಶಾಂತಾರಾಮ್ ಶೆಟ್ಟಿ.
▪▪▪▪▪▪▪
ಜೀವನ!
ಜೀವನ!
➖➖➖➖➖
ಹುಟ್ಟಿನಿಂದ
ಈ ವರೆಗೆ
ನಾನು ನಡೆದದ್ದು
ಸಾವಿನ
ಮನೆಯ ದಾರಿ...!
ಮನೆ
ಸಿಕ್ಕರೆ
ವಿಶ್ರಾಂತಿ!!
✍🏽ಶಾಂತಾರಾಮ್ ಶೆಟ್ಟಿ
ಶುಕ್ರವಾರ, ಏಪ್ರಿಲ್ 28, 2017
ನಾಟಿ!(ನಟ್ಟಿ)
ನಾಟಿ!(ನಟ್ಟಿ)
🌾🌾🌾🌾
ಕಣ್ಣಲ್ಲಿ ಕಣ್ಣಿಟ್ಟು
ನೆಟ್ಟ
ನೋಟಕ್ಕೆ
ಹೃದಯದೊಳಗೆ
ಪ್ರ್ರೀತಿ
ಬೀಜ
ಮೊಳಕೆಯೊಡೆದು
ಹೂವಾಗಿ
ಅರಳಿದ್ದು !!
🌸🌸🌸🌸
✍🏻ಶಾಂತಾರಾಮ್ ಶೆಟ್ಟಿ
ಚಿ(ರಂ)ತನ!
ಚಿ(ರಂ)ತನ!
▪▪▪▪
ಬದುಕಿದ್ದವರಿಗೆ
ಸಾವಿನ
ಚಿಂತೆ
ಸಾವುಂಡವರಿಗೆ
ಸುಖ
ನಿದ್ರೆಯಂತೆ!
✍🏻ಶಾಂತಾರಾಮ್ ಶೆಟ್ಟಿ
ಯೋಧ!
ಯೋಧ!
🕴🏿🕴🏿🕴🏿🕴🏿
ಗೋರಿಯ
ಮೇಲೆ
ಕುಳಿತು
ಸಾವಿಗೇ
ಅವನು
ಬದುಕಿನ
ಪಾಠ
ಹೇಳಿಕೊಟ್ಟ!.
✍🏻 ಶಾಂತಾರಾಮ್ ಶೆಟ್ಟಿ
ಹಣೆಬರಹ!
ಹಣೆಬರಹ!
➖➖➖➖➖
ಬ್ರಹ್ಮ
ಹಣೆಬರಹನ
ಮೊಬೈಲಲ್ಲಿ
ಟೈಪು
ಮಾಡುತ್ತಿದ್ದ....!
ಬದುಕು ಬಂಗಾರವಾಗಲಿ!
Autotype...
ಬದುಕು ಬರಗಾಲವಾಗಲಿ!
ಎಂದು
ಸರಿಪಡಿಸಿತು..!!
✍🏻ಶಾಂತಾರಾಮ್ ಶೆಟ್ಟಿ
ಅಪ್ಪನ ಬಗ್ಗೆ ಒಂದಿಷ್ಟು.....
ಅಪ್ಪನ ಬಗ್ಗೆ ಒಂದಿಷ್ಟು.....
➖➖➖➖➖➖➖➖
1
ಅಪ್ಪನ ಕಣ್ಣಲ್ಲಿ
ಯಾವತ್ತೂ
ನೀರಿಲ್ಲ
ಅಪ್ಪ ನೋವು
ನುಂಗಿ
ಇಂಗಿದ ಬಾವಿ !
2
ನಾವು
ಅಳುವಾಗಲೆಲ್ಲಾ
ಅಪ್ಪ ಸಂತೈಸುತ್ತಿದ್ದ
ಅಪ್ಪ ಅಳುವುದಿಲ್ಲ
ಸಂತೈಸಲು
ಅಪ್ಪನಿಗೆ ಅಪ್ಪನಿಲ್ಲ !
3
ಅಪ್ಪ ಒಬ್ಬನೇ
ನಕ್ಕಿಲ್ಲ
ನಗುವಾಗ ನಗಿಸುತ್ತಿದ್ದ
ನೋವು ಹಂಚಲಿಲ್ಲ
ಮರೆಯಲ್ಲೇ
ನುಂಗಿದ್ದ !
4
ಅಮ್ಮನ ಕಣ್ಣೀರಿಗೆ
ಅಪ್ಪ ಕರಗುವ
ಮೌನಿಯಾಗಿ....
ಗೋಡೆ ನೋಡುತ್ತಾ
ಸೋತು
ಒರಗುವ !.
5
ಅಪ್ಪನ ಮಾತಿಗೆ
ಮನೆ ತುಂಬಾ
ಮೌನ
ಅಪ್ಪನ ಮೌನಕ್ಕೆ
ಮನೆಯೇ
ಸ್ಮಶಾನ !.
6
ಅಪ್ಪನ ಸಾಧನೆಗೆ
ಅಮ್ಮನಿಗೂ
ಸನ್ಮಾನ
ಅಪ್ಪ ಸೋತಾಗ
ಅಮ್ಮನಿಗೂ..
ಅನುಮಾನ !
7
ಅಪ್ಪ ಗಂಧದ
ಕೊರಡು...
ಮನೆ ತುಂಬಾ
ಪರಿಮಳ
ತೇದು ತೇದು
ಸವೆದಿದ್ದು
ಯಾರಿಗೂ
ತಿಳಿಯಲಿಲ್ಲ!
8
ಅಪ್ಪನ ಏಟು
ನಮ್ಮ ತಪ್ಪಿಗೆ
ನೋವು ಮರೆಸಿದ್ದು
ಮದ್ದಲ್ಲ....
ಅಪ್ಪನ ಅಪ್ಪುಗೆ!
9
ಅಪ್ಪನ ಬಗ್ಗೆ
ಒಂದಿಷ್ಟು
ಸಣ್ಣವನ ಮಾತು
ಅಪ್ಪ
ಸಣ್ಣವನಲ್ಲ
ದೇವರಿಗೂ ಗೊತ್ತು!
10
ಅಪ್ಪಾ ....
ಲೋಕ ಮೆಚ್ಚದಿರಬಹುದು
ನಿನ್ನ.....
ನನಗಂತೂ
ನೀನು ಅಪರಂಜಿ
ಅಪ್ಪಟ
ಚಿನ್ನ !!.
✍🏻 ಶಾಂತಾರಾಮ್ ಶೆಟ್ಟಿ
ಹೊನ್ನ ಶೂಲ
ಹೊನ್ನ ಶೂಲ
👏🏻👏🏻👏🏻👏🏻👏🏻
ಹೊಗಳಿಕೆಗೆ ....
ಜೀವ
ಬಿಡುವವರಿದ್ದಾರೆ
ಈ ಜಗದಲ್ಲಿ !
ಚಪ್ಪಾಳೆ
ತಟ್ಟಿದವರಿಗೆಲ್ಲಾ
ರಕ್ತದಾನ
ಮಾಡಿತು
ಸೊಳ್ಳೆ !!.
✍🏻ಶಾಂತಾರಾಮ್ ಶೆಟ್ಟಿ
ರಾಗ ರೀತಿ!
ರಾಗ ರೀತಿ!
➖➖➖➖
ಕೋಗಿಲೆ
ಹಾಡಿದಾಗ
ಎಲ್ಲರೂ ಬರೆದರು
ಅತ್ತಿದ್ದು
ಯಾರೂ
ಬರೆಯಲಿಲ್ಲ....!
ಕುಹೂ ರಾಗ
ಕುಸುರಾಗ
ಆಗಬಾರದೆಂದಿಲ್ಲ
ನೋವಿಗೆ
ಜತೆಗಾರರು
ಬೆರಳೆಣಿಕೆಯವರು!!
✍🏻ಶಾಂತಾರಾಮ್ ಶೆಟ್ಟಿ
▪▪▪▪▪▪▪
ಮಂಗಳವಾರ, ಏಪ್ರಿಲ್ 4, 2017
ಅಪ್ಪಾ!
ಅಪ್ಪಾ!
👨🏾⚕👨🏾⚕👨🏾⚕
ಅಮ್ಮ ನನ್ನ
ಒಂಭತ್ತು ತಿಂಗಳು
ಹೊತ್ತು ನಡೆಯುವಾಗ
ಒಳಗಿಂದ
ನೋಡುತ್ತಿದ್ದೆ...
ಅಮ್ಮನ ಕೈಯೊಳಗೆ
ಕೈಯಿಟ್ಟು...
ಮೆಲ್ಲಗೆ
ನಡೆಸಿದಾತ ನೀನು!,
ಒಂಬತ್ತು ವರ್ಷ
ತನ್ನ ಹೆಗಲ ಮೇಲೆತ್ತಿ
ಸುತ್ತಿ ಕುಣಿಸಿ
ಆಡಿಸಿದದವನು...
ಯಾರ
ಬೆಂಗಿಲ್ಲದೆ-ಹಂಗಿಲ್ಲದೆ!
ಅಪ್ಪಾ ...ನೀನು...
ಕಷ್ಟಕ್ಕೆ ಕೈ ಕೊಟ್ಟವನು
ಅಷ್ಟಕ್ಜೇ...
ಕೈ ಬಿಡದವನು !
✍🏻ಶಾಂತಾರಾಮ್ ಶೆಟ್ಟಿ
➖➖➖➖➖➖➖➖
ಪ್ರೇಮಕವಿ!!
ಪ್ರೇಮಕವಿ!!
➖➖➖➖➖
ಯುವಕವಿ...
ಅದ್ಭುತ
ಅಮರ ಪ್ರೇಮ ಕಾವ್ಯ
ಬರೆದ....!
ಕಾವ್ಯದ ಗುಂಗಿನಲಿ
ಮದುವೆಯಾಗುವುದ
ಮರೆತೇ ಹೋದ!!
✍🏻ಶಾಂತಾರಾಮ್ ಶೆಟ್ಟಿ
😜➖➖➖➖➖
ನಂಟು!
ನಂಟು!
🔁🔁🔁
ದುರ್ಯೋಧನ
ಬಿದ್ದನೆಂದು
ನಕ್ಕಳು
ದ್ರೌಪದಿ.....
ಮಹಾಭಾರತವಾಯ್ತು!
ರಾವಣ
ಕದ್ದೊಯ್ದನೆಂದು
ಅತ್ತಳು ಸೀತೆ....
ರಾಮಾಯಣವಾಯ್ತು!
ಹೆಣ್ಣು
ಅತ್ತಾಗಲೂ
ನಕ್ಕಾಗಲೂ
ಅರ್ಥವಾಗದವರು
ಅಂಟಂಟು
ಅಂದರು
ಈ
ನಂಟು!
ಮಾಯೆದುಲಾಯಿದ
ಬದ್ಕ್....,
ಈ....
ಒಂಜಿ
ನಮೂನೆ
ಮಾಯಣ
ಮಾಯಣ!!
😀
✍🏾: ಶಾಂತಾರಾಮ್ ಶೆಟ್ಟಿ
🍁🍁🍁🍁🍁🍁🍁🍁
ರಾಕ್ಷಸರು!!
ರಾಕ್ಷಸರು!!
👹👹👹👹
ಹೋದಲೆಲ್ಲಾ
ನಾರದರು
ಮಾಡಿದ್ದೇನು?
ಬರೇ .....
ಬತ್ತಿ ಇಟ್ಟದ್ದು
ಮಾರಾಯ್ರೆ !
ರಾಗ-ದ್ವೇಷದ
ತುಪ್ಪ ಸುರಿದು
ಬೆಂಕಿ ಇಟ್ಟು
ಯಮನ
ಉರುಳಿಗೆ
ಕೊರಳು
ಒಡ್ಡಿ
ಎಳೀ.... ಎಳೀ
ಎಂದವರು
ಅವರೇ....?
ಇಲ್ಲಾ....!!
ಎಲ್ಲಾ...
ನಮ್ಮವರೇ....
ನಮ್ಮೊಳಗಿನ
ರಾಕ್ಷಸರೇ!!
✍🏾ಶಾಂತಾರಾಮ್ ಶೆಟ್ಟಿ
➖➖➖➖➖➖
ಬುಧವಾರ, ಮಾರ್ಚ್ 1, 2017
ರಾಮಾಯಣ!
ರಾಮಾಯಣ!
🏹🏹🏹🏹🏹
ಸಾಗರದಾಚೆ
ಬಚ್ಚಿಟ್ಟ
ಹೆಂಡತಿಯ
ಹುಡುಕುವುದೇ
ಆಯ್ತು
ಶ್ರೀರಾಮನಿಗೆ....,
ರಗಳೆ
ರಾಮಾಯಣ!
ಸದಾ....
ತಾಪತ್ರಯ
ಸಾಕಾಯ್ತು
ಸಂಸಾರಿ
ಜನುಮ !
ಒಡೆಯನ
ಪಾಡು
ನೋಡಿಯೇ
ಬ್ರಹ್ಮಚಾರಿಯಾಗಿ
ಉಳಿದುಬಿಟ್ಟ
ಬುದ್ದಿವಂತ
ಹನುಮ !!
✍🏻: ಶಾಂತಾರಾಮ್ ಶೆಟ್ಟಿ .
🙉🙉🐒🐒🙉🙉
ಪ್ರಮಾದ!
ಪ್ರಮಾದ!
❌❌❌
ಪ್ರೀತಿ-ಪ್ರೇಮದ
ಭ್ರಮೆಯಲ್ಲಿ
ಕಡಲತಡಿಯ
ಮರಳ ಮೇಲೆ
ನಿನ್ನಕೈಯೊಳಗೆ
ನನ್ನ ಕೈಯಿಟ್ಟು
ಹಾಕಿದ ಹೆಜ್ಜೆಗಳ
ಗುರುತು,
ಛಲಹಿಡಿದು
ಅಲೆಗಳು
ಅಳಿಸಿಹಾಕಿದವು....!
ಬಹುಷ
ನಾವಿಟ್ಟ
ಹೆಜ್ಜೆಗಳಲ್ಲಿ
ಉನ್ಮಾದದ,
ಮದದ,
ಪ್ರಮಾದಗಳಿರಬೇಕು!
🐾🐾🐾🐾🐾👫
✍🏻 ಶಾಂತಾರಾಮ್ ಶೆಟ್ಟಿ
ಕವಿ ಕಲ್ಪನೆ!
ಕವಿ ಕಲ್ಪನೆ!
➖➖➖➖
ಕಲ್ಪನೆಯಲ್ಲೇ
ಕೂಸು
ಹೆಡೆದು
ಹಾಲುಣಿಸಿ
ಬೆಳೆಸಿ....,
ಅದರ ಜೊತೆ
ಆಟವಾಡಿ
ಬೆಳೆದು
ಕವಿಯಾದವನು
ನಾನು!!
ಕಾವ್ಯ
ನನ್ನ
ಕಲ್ಪನೆಯ
ಕೂಸು!!
🙋🏽♂
✍🏻ಶಾಂತಾರಾಮ್ ಶೆಟ್ಟಿ
ಉಗ್ರಪ್ರತಾಪಿ!
ಉಗ್ರಪ್ರತಾಪಿ!
➖➖➖➖➖
ಸಪ್ತಸಾಗರದ ಆಳಕ್ಕಿಳಿದು
ಮುತ್ತುಗಳ ಅಳೆದು
ಮಾಲೆಯ ಸುರಿದು ತರಲೆ?
ಏಳುಮಲೆಯ
ದಟ್ಟ ಪೊದರುಗಳ
ತರಿದು
ಹುಲಿಯ ಹಾಲನು ಹಿಂಡಿ ಬರಲೆ...?
ಹೇಳು ಪ್ರಿಯೆ...
ನಿನ್ನ ತುಟಿಯಂಚಿನಲಿ
ಸಂಪಿಗೆಯ
ಹೂ ನಗು ಕೊಂಕಲು
ಇಂದ್ರನನು ಗೆದ್ದು
ಸ್ವರ್ಗವನ್ನೇ ವರ್ಗಾಯಿಸಿ
ಧರೆಗೆಳೆಯಲೆ....?
ಕುಲ್ಲುಲೆಯೆ ಅಂಚಿ....,
ಸುರುಕು
ಕಜಿಪುಗು
ರಡ್ಡ್ ತಾರಾಯಿ
ಪಿರೆಲೆ!!
😜😜😜
✍🏻:ಶಾಂತಾರಾಮ್ ಶೆಟ್ಟಿ .
ಪಾಣಿಗ್ರಹಣ!
ಪಾಣಿಗ್ರಹಣ!
🤝🤝🤝🤝
ಚಂದಿರನೂರಿಂದ
ಜಾರಿ
ಹಾರಿ ಬಂದೆ
ನಿನ್ನ ಮುಡಿಗಿಡಲು
ನಕ್ಷತ್ರಗಳ ಆರಿಸಿ
ಕಿತ್ತು ತಂದೆ!
ಪ್ರೀತಿಗೆ...
"ಹೂಂ"
ಕಾರವೇ
ಮಧುಚಂದ್ರ
"ಅಹಂ"
ಕಾರವೇ
ಅರ್ಧಚಂದ್ರ!
ಗೆಳತಿ.....
ಕೈ ಕೊಡದೆ,
ಕೈ ಕೊಡು...
ಕೈ ನೀಡಿ,
ಕೈ ಹಿಡಿ !!.
✍🏻 ಶಾಂತಾರಾಮ್ ಶೆಟ್ಟಿ
ಮಂಗಳವಾರ, ಫೆಬ್ರವರಿ 21, 2017
ಮೌನರಾಗ!
ಮೌನರಾಗ!
😍😍😍😍
ಮೌನದ
ಮಾತಿನಲ್ಲಿಯೇ
ಅವಳು
ನನ್ನ
ಪ್ರೀತಿಸಿದಳು!
ತುಟಿ ಬಿಗಿದು
ಮಾತು
ಮೌನವಾದಾಗ
ಕಣ್ಣಗಳೇ
ಮಾತಿಗಿಳಿದವು!.
✍🏻 ಶಾಂತಾರಾಮ್ ಶೆಟ್ಟಿ
👁👁👁👁👁👁👁
ಭಾನುವಾರ, ಫೆಬ್ರವರಿ 12, 2017
ಸ್ವರ್ಗದ ಬಾಗಿಲು
ಸ್ವರ್ಗದ ಬಾಗಿಲು
➖➖➖➖➖
ವೈಕುಂಠ ಏಕಾದಶಿ
ಇಂದು
ದೇವಸ್ಥಾನದ
ಮುಂದು
ಜನ
ಸಾಲು ಸಾಲು!
ಸ್ವರ್ಗದ ಬಾಗಿಲೇ
ತೆರೆದಿದೆ
ವೈಕುಂಠದಲ್ಲಿ
ಅಲ್ಲಿಲ್ಲವಂತೆ
ಈ ಪರಿ
ನೂಕು ನುಗ್ಗಲು.....!😜
ಅವಸರವೇನಿಲ್ಲ
ಜನಕ್ಕೆ
ಇಷ್ಟು ಬೇಗ
ಸತ್ತು
ಸ್ವರ್ಗ ಸೇರಲು!
ಜನ್ಮಭೂಮಿ
ಇದು
ಮನೆಯಿದೆ ,
ಮಡದಿ,ಮಕ್ಕಳು
ಹೇಳಿಲ್ಲವೇ
ಹಿರಿಯರು....
ಸ್ವರ್ಗಕ್ಕಿಂಲೂ
ಮಿಗಿಲು !
ಸಿಕ್ಕಿದ್ರೆಹೇಳಿ
ದಾರಿಯಲ್ಲಿ
ನರೇಂದ್ರನಿಗೆ
ಬಾಗಿಲಿಗೆ
ಬೀಗ
ಹಾಕಲು!.😂
✍🏻ಶಾಂತಾರಾಮ್ ಶೆಟ್ಟಿ
ಮುಚ್ಚುಮರೆ
ಮುಚ್ಚುಮರೆ
☔☔☔☔
ಮಳೆಯಲ್ಲಿ
ಮಾತ್ರ
ನಾನು ಅತ್ತಿದ್ದು!
ಹಾಗಾಗಿ
ನನ್ನ
ನಗುವ
ಕಂಡವರೇ
ಹೆಚ್ಚು !
✍🏻:-ಶಾಂತಾರಾಮ್ ಶೆಟ್ಟಿ
😀😀😀😀😀😀😀
ಗುಣಗಾನ!
ಗುಣಗಾನ!
ಸತ್ತ ದಿನ
ಆಹಾ....
ಸತ್ತವನ
ಗುಣಗಾನ
ಬದುಕಿದ್ದಾಗ
ನೀರು ಕೊಟ್ಟಿಲ್ಲ
ಅನ್ನವಿಟ್ಟಿಲ್ಲ
ದಿನಾ
ಗೊಣಗೊಣ!.
✍🏻ಶಾಂತಾರಾಮ್ ಶೆಟ್ಟಿ
ಹೊಗಳಿಕೆ
ಹೊಗಳಿಕೆ
➖➖➖➖
ಸೊಳ್ಳೆಯ
ಸನ್ಮಾನ ಸಮಾರಂಭದಲ್ಲಿ
ಮಹಾ ಜನತೆಯಲ್ಲಿ
ಸೊಳ್ಳೆಯದೊಂದು
ನಮ್ರ ವಿನಂತಿ!
ದಯವಿಟ್ಟು
ತಟ್ಟಬೇಡಿ
ಚಪ್ಪಾಳೆ
ನಿಮ್ಮ ಹೊಗಳಿಕೆಯಿಂದಲೇ
ಸತ್ತಿದ್ದು
ನಮ್ಮ ಅರ್ಧ ಸಂತತಿ!
😜
✍🏻ಶಾಂತಾರಾಮ್ ಶೆಟ್ಟಿ
➖➖➖➖➖➖➖
ಪಾಪಿ!
ಪಾಪಿ!
😲😲😲
ಪಾಪಿಗಳೆಲ್ಲಾ
ನರಕವಾಸಿಗಳು.....
ಎಲ್ಲಾ
ಅವರವರ
ಕರ್ಮ!
ಪಾಪ...
ಏನು ಪಾಪ
ಮಾಡಿದನೋ
ಯಮಧರ್ಮ?!!.
✍🏻ಶಾಂತಾರಾಮ್ ಶೆಟ್ಟಿ
➖➖➖➖➖➖➖➖
ಅಡಿಗೆ!
ಅಡಿಗೆ!
😀😀😀
ಸಿದ್ದರಾಮಯ್ಯ
ಸರಕಾರ....,
ನಾಲ್ಕನೆ ವರ್ಷ
ಭರವಸೆಯ
ನಡಿಗೆ...!
ಐದನೆ ವರ್ಷ...?
ಅಡಿಗೆ!!
😜
✍🏻ಶಾಂತಾರಾಮ್ ಶೆಟ್ಟಿ
ಗುರುವಾರ, ಜನವರಿ 5, 2017
ಮೇಟಿ ವಿದ್ಯೆ!
ಮೇಟಿ ವಿದ್ಯೆ!
😜😜😜😜
ಕೋಟಿ
ವಿದ್ಯೆಗಳಲ್ಲಿ
ಮೇಟಿ
ವಿದ್ಯೆಯೇ
ಮೇಲು....!
ಮೈ ಬಗ್ಗಿ
ದುಡಿದರೆ
ಕೈ- ಬಾಯಿ
ತುಂಬಾ
ಮೊಸರು !
ಮೈ ಮರೆತು
ಕಾಲು
ಜಾರಿದರೆ
ಮುಖ
ಮೂತಿಯೆಲ್ಲಾ
ಕೆಸರು!!
✍🏻-ಶಾಂತಾರಾಮ್ ಶೆಟ್ಟಿ
ಸುಸ್ತು!
ಸುಸ್ತು!
💓💓💓
ಪ್ರಿಯೇ....
ನಿನಗಾಗಿ ನಕ್ಷತ್ರ
ಕಿತ್ತು ತರುವೆ
ಬೆಟ್ಟಾನ
ಹೊತ್ತು ಬರುವೆ...
ಪ್ರೇಮಿಗಳಾಗಿದ್ದಾಗ
ಈ ಮಾತೆಲ್ಲಾ
ಚೆಂದ....!
ಆಗ ಇತ್ತು
ತಾಕತ್ತು
ಈಗ
ಮದುವೆಯಾಗಿದೆ...
ಸುಸ್ತೋ ಸುಸ್ತು !
ಆಗದು ನನ್ನಿಂದ
ನಿನ್ನ
ಪೌಡರು ಲಿಪ್ಸ್ಟಿಕ್ಕ್ ಗಳಿಗೆ
ಎರಡು ಸಾವಿರದ
ಒಂದು ನೋಟು
ತರಲೂ
ಏ.ಟಿ.ಎಂ ನಿಂದ!!
😜
✍🏾:ಶಾಂತಾರಾಮ್ ಶೆಟ್ಟಿ
💔💔💔💔💔💔💔
ಸಾಯಿತಿ!.
ಸಾಯಿತಿ!.
📝📝📝📝
ಹಕ್ಕಿ ನೋಡಿ ಹಾರುತಿ
ಪ್ರಕೃತಿ ನೋಡಿ ಹಾಡುತಿ
ಸೂರ್ಯ ಚಂದ್ರರು
ಹುಟ್ಟಲೂ ಬಿಡದೆ
ಬೆನ್ನಟ್ಟಿ ಕಾಡುತಿ...!
ನಂಗೊತ್ತು
ಇದ್ದರೂ
ಇಹದಲ್ಲಿಲ್ಲ....,
ನೀನೊಬ್ಬ
ಕಲ್ಪನೆಯ ಗೆರೆಗಳ
ಗೀಚಿ ಬರೆವ
ಸಾಹಿತಿ
ಆದರೂ....
ಹೊಟ್ಟೆಗೇನು
ಮಾಡುತಿ?!
ದುಡಿಯೋ ವಯಸ್ಸಲ್ಲಿ
ಕಣ್ಮುಚ್ಚಿ ಕಲ್ಪನೆಗಳ
ಗುಂಗಿನ
ಹಗಲುಗನಸಿನ ಗಂಟು
ನಾಳೆ ಹೆಂಗೋ ಏನೋ
ಯಾರಿಗರಿವುಂಟು!
ಅರೆಕಾಸಿನ ಮಜ್ಜಿಗೆಗೆ
ಹೊಟ್ಟೆ ತುಂಬಲ್ಲ
ನಂಗೊತ್ತು...
ನನ್ ಮಾತು
ಈಗ
ನೀ ನಂಬಲ್ಲ
ನಂಗೇನು...?
ನೀನುಂಟು
ನಿನ್ನ
ಕವನಗಳುಂಟು!
ಹೇ....
ಸಾಹಿತಿ
ಕೊನೆಗಾಲದಲ್ಲಿ
ನನಸಿನಲೋಕದ
ಮುರುಕು ಗುಡಿಸಲಲಿ
ಬದುಕ ಮುರಿಯುತ
ಹೊಟ್ಟೆಗೆ ತೊಟ್ಟಿಲ್ಲದೆ
ಹಿಟ್ಟಿಲ್ಲದೆ
ಸಾಯುತಿ !!.
✍🏻:ಶಾಂತಾರಾಮ್ ಶೆಟ್ಟಿ
✍🏾✍🏾✍🏾✍🏾✍🏾✍🏾✍🏾
ಕಾಲಾಯ ತಸ್ಮೈ ನಮ:
ಕಾಲಾಯ ತಸ್ಮೈ ನಮ:
➖➖➖➖➖➖➖
ಮುರಿದಿರುವ
ಬಾಳಿಗೂ
ಆಸೆಯ
ತಾಳವೊಂದಿದೆ
ಕಷ್ಟಗಳು
ಮುಗಿಯುವ
ಕಾಲವೂ
ಒಂದಿದೆ!!
ಹರಿದ
ಕನಸುಗಳೋ
ಗೋಡೆ ಮೇಲೆ
ನೇತು ಹಾಕಿದ
ನೆನಪುಗಳು
ಬದುಕು ಕಟ್ಟುವ
ಬಯಕೆಗಳೇ
ಮುಂದಿನ
ದಾರಿಗೆ
ಆಶಾದೀಪಗಳು!
ನಡೆಯಬೇಕು
ಮುಂದೆ
ತಿರುಗಿ ನೋಡದೆ
ಕಲ್ಲು ಮಳ್ಳುಗಳ
ಕವಲುಗಳು
ಮುಂದೂ
ಬರಬಹುದು
ಸದ್ದು ಮಾಡದೆ!
ಕಾಲ ನಿಲ್ಲದು
ಅವರಿವರ
ಮಾತಿಗೆ
ನಡೆಯುವ
ಕಾಲೂ
ನಿಲ್ಲಬಾರದು
ಲೋಕದ
ತೂತಿಗೆ !
ಟಿಕ ಟಿಕ
ಶಬ್ದಗಳು
ನಡಿಗೆಯ ರಾಗ
ಕುಂದಬಾರದು
ಕುಸಿಯಬಾರದು
ಜೀವನಿಚ್ಚೆಯ
ವೇಗ!
ಸೋಲೋ
ಗೆಲುವೋ
ಎರಡಕ್ಕೂ ಜೈ
ಸಾವಿನ ಗಳಿಗೆ
ಹತ್ತಕ್ಕೋ
ಐದಕ್ಕೋ
ಯಾವತ್ತೂ ಸೈ!!
✍🏻ಶಾಂತಾರಾಮ್ ಶೆಟ್ಟಿ
🔘🔘🔘🔘🔘🔘
ನಶ್ವರ!
ಎಲ್ಲಾ ನಶ್ವರ!
➖➖➖
👇🏼👇🏼👇🏼
ಛೆ.ಛೆ..!!
ಈ ಹಣ
ಈ ಆಸ್ತಿ
ಈ ಪಾಸ್ತಿ ಅಷ್ಟೇ ....
ಎಲ್ಲಾ ನಶ್ವರ!!
ಸತ್ಮೇಲೆ
ಕೈಲಾಸಕ್ಕೆ
ತಲೆಮೇಲಿಟ್ಟು
ಎತ್ಕೊಂಡು
ಹೋಗಕ್ಕಾಗುತ್ತಾ?!
ಅದ್ಕೆ
ಬುದ್ಧಿವಂತ್ರು
ಬದ್ಕಿರುವಾಗಲೇ
ಎತ್ತಾಕ್ಕೊಳ್ಳೋದು
ಮುತ್ತಾಕ್ಕೊಳ್ಳೋದು
ಗೊತ್ತಾ.....?
ಮಂಕು
ಬೂದಿ ಈಶ್ವರ !!
✍🏻 ಶಾಂತಾರಾಮ್ ಶೆಟ್ಟಿ
🙄😫🙄😫🙄😫
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)