ಶನಿವಾರ, ಮಾರ್ಚ್ 10, 2018

ಕುರುಡು ಪ್ರೇಮ!

ಕುರುಡು ಪ್ರೇಮ!
➖➖➖➖👁

ಇಲ್ಲ
ಮಾತಾಡೇ ಇಲ್ಲ  !


ಪ್ರೇಮಿಗಳಾಗಿದ್ದಾಗ
ಬರೀ
ಅವಳ
ಕಣ್ಣಂಚ ಮಿಂಚೇ
ಮಾತಾಗಿ
ಮಾತಾಗಿ....!

ಮದುವೆಯಾದ
ಮೇಲೇನೇ
ಗೊತ್ತಾಗಿದ್ದು
ಆಕೆ.....







ಮೂಗಿ!!.

✍ ಶಾಂತಾರಾಮ್ ಶೆಟ್ಟಿ.

(ಕಣ್ಣಂಚಿನ ಆ ಮಾತಲ್ಲಿ...
ಏನೋ  ತುಂಬಿತ್ತು !)😄

ಸಾ(ವಯ)ವ?!

ಸಾ(ವಯ)ವ?!
〰〰〰〰

ರೈತನ
ಹೊಲದ ತುಂಬಾ
ಆಗೆಲ್ಲಾ
ಮಣ್ಣು ಹುಲ್ಲು
ಹಟ್ಟಿ  ಗೊಬ್ಬರ ಎಲ್ಲೆಲ್ಲೂ

ಈಗ
ಬರೇ ಕೆಮಿಕಲ್ಲು !!

✍ಶಾಂತಾರಾಮ್ ಶೆಟ್ಟಿ.
➖➖➖➖➖➖

ಬೇಜವಾಬ್ದಾರಿ!

ಬೇಜವಾಬ್ದಾರಿ!
➖➖➖➖〰
ಎಲ್ಲರ
ಮನೆ ಹೊತ್ತಿ
ಉರಿಯುವಾಗಲೂ
ಗೃಹಸಚಿವರು
ಮನೆಯಲ್ಲಿ
ಪಿಟೀಲು ಬಾರಿಸುತ್ತಿದ್ದರು...,

ಅವರ
ರೋಮವೂ
ಸುಟ್ಟಿಲ್ಲವಂತೆ!!.

✍ಶಾಂತಾರಾಮ್ ಶೆಟ್ಟಿ.
〰〰〰〰〰🔪
(ಪ್ಲಾಸ್ಟಿಕ್ ಚೂರಿಯಾದ್ದರಿಂದ ಮೆಟಲ್ ಡಿಟೆಕ್ಟರ್ ಕಣ್ಮುಚ್ಚಿಕೊಂಡಿತ್ತು!!)

ಗುರಿ!

ಗುರಿ!
〰〰〰🔪
ಇಲ್ಲಿ
ಸರಕಾರದ
ತಪ್ಪೇನಿಲ್ಲ...!

ಸರಕಾರಕ್ಕೆ
ಲೋಕಾಯುಕ್ತ
ಸಾಯಬೇಕಿತ್ತು
ಅಷ್ಟೇ...,
ಲೋಕಾಯುಕ್ತರಲ್ಲ!!.

✍ಶಾಂತಾರಾಮ್ ಶೆಟ್ಟಿ.
➖➖➖➖➖🔪
(ಗುರಿ ತಪ್ಪಿದರೆ ಎರಡು ಹಕ್ಕಿ...!)😥

ನಿಶ್ಚಿತ!

ನಿಶ್ಚಿತ!
➖➖➖
ಸಾವಿಲ್ಲದ
ಮನೆಯ
ಸಾಸಿವೆ ತರಲು ಹೋದವ
ಇನ್ನೂ ವಾಪಸು ಬಂದಿಲ್ಲ....

ಬಹುಶ:
ಅವನೂ
ಸತ್ತಿರಬೇಕು!!

👻
✍ಶಾಂತಾರಾಮ್ ಶೆಟ್ಟಿ.

ಮತ್ತು!

ಮತ್ತು!
🥀🥀🥀


ಚೆಂದುಳ್ಳಿಗೆ
ಮುತ್ತನಿತ್ತು
ದುಂಬಿ
ಹಾರಾಡುವಾಗ
ತೂರಾಡುತ್ತಿತ್ತು....

ನಿಜ

ಪ್ರೀತಿ ಮಧುವಲ್ಲಿ
ಅಂತಹ
ಮತ್ತು ಇತ್ತು!!.

✒ಶಾಂತಾರಾಂ ಶೆಟ್ಟಿ.
➖➖➖➖➖🥀

ಸಿಗ್ನಲ್ ಕವಿತೆಗಳು


!ಸಿಗ್ನಲ್ ಕವಿತೆಗಳು
🚦🚥🚥🚥🚥🚥
.
ಚೆಲುವೆಯ
ನಾ
ದಿಟ್ಟಿಸುತ್ತಿದ್ದರೆ
ಸಿಗ್ನಲ್ಗೂ
ಹೊಟ್ಟೆ ಉರಿ
ಕಣ್ಣು ಕೆಂಪು!

.
ಸಣ್ಣ ಟಿವಿಎಸ್
ಹೆಂಡತಿ
ಇಬ್ಬರು ಮಕ್ಕಳು
ಬಡವನ ಬದುಕು
ಸಾಗುತ್ತಿದೆ
ನಿಧಾನ....
ಎಲ್ಲೋ-ಎಲ್ಲೆಲ್ಲೋ!💛

ಯಾವತ್ತೂ
ಮುಖ
ನೋಡದವಳು
ಇವತ್ತು ನಕ್ಕಳು
ಅಷ್ಷೇ ಸಾಕು
ಪ್ರೀತಿಗದೇ
ಗ್ರೀನ್ ಸಿಗ್ನಲ್ಲು!💚

ಶಾಂತಾರಾಮ್ ಶೆಟ್ಟಿ

ಸ್ನೇಹಿತ!

ಸ್ನೇಹಿತ!
--------------
ಹೆಣ ಸುಟ್ಟೂ
ಹೆಣ ಹೊತ್ತೂ
ಹೆಣ ಹೂತೂ
ಜನ
ಬದುಕು
ಕಟ್ಟಿ ಕೊಂಡಿದ್ದಾರೆ!

ವೈರಿಯೇನಲ್ಲ...,

ಸಾವೂ
ಕೂಡಾ
ಬದುಕಿನ
ಸ್ನೇಹಿತನೇ!!.

✍ ಶಾಂತಾರಾಮ್ ಶೆಟ್ಟಿ.
➖➖➖➖➖➖

ಇಹದಲ್ಲಿರು!

ಇಹದಲ್ಲಿರು!
🍁🍁🍁🍁

ನಾಳೇನೇ
ಸಾಯೋನು
ನಾನು
ಇಂದಾದರೂ
ಬದುಕಬೇಕು!

ನಿನ್ನೇನೂ
ಸತ್ತೋನು
ನಾನು
ಇನ್ನಾದರೂ
ಬದುಕಬೇಕು!!.

✍🏽ಶಾಂತಾರಾಮ್ ಶೆಟ್ಟಿ
➖➖➖➖➖👻

ಸುಖ-ದು:ಖ!

ಸುಖ-ದು:ಖ!
~~~~
ಏನೂ
ಇಲ್ಲದಾಗ
ಇದ್ದ ಖುಷಿ
ಎಲ್ಲಾ
ಇದ್ದಾಗಲೂ ಇಲ್ಲ!

ಸುಖ-ದು:ಖಗಳು
ಇದ್ದಾಗ ಇರದ
ಇರದಾಗ ಇರುವ
ಸಮ ಭಾವಗಳು!!

✍ಶಾಂತಾರಾಮ್ ಶೆಟ್ಟಿ.
〰〰〰〰〰〰

ಛಲ!

ಛಲ!
======

ತುಳಿದರೆಂದು
ಕಳೆದು
ಹೋಗದಿರಿ..

ತುಳಿದವರನ್ನೂ
ಗುರಿ
ಮುಟ್ಟಿಸಿದ್ದು
ದಾರಿ !!.

✒ಶಾಂತಾರಾಮ್ ಶೆಟ್ಟಿ
➖➖➖➖🚶🏿▪

ಬಂಡಾಯ

ಬಂಡಾಯ
➖➖➖➖🐕
ಸ್ವಾಮಿ ನಿಷ್ಠೆ
ಒಂದೇ ಅಲ್ಲ
ಬಂಡಾಯದ
ಭಾಷೆಯೂ
ಗೊತ್ತಿದೆ ನಾಯಿಗೆ !

ಮೈದಡವಿದರೆ
ತಲೆದೂಗುತ್ತೆ
ಬಾಲಕ್ಕೆ
ಕಾಲಿಟ್ಟರೆ
ಕಚ್ಚುತ್ತೆ  ಕಾಲಿಗೆ !!

✍ಶಾಂತಾರಾಮ್  ಶೆಟ್ಟಿ.
➖➖➖🐕➖➖

ದ್ವಂದ್ವ!!


ದ್ವಂದ್ವ!!
=======
ನಮ್ಮನೆ ಮಕ್ಳಾದ್ರೇನು
ಪಕ್ಕದ ಮನೆ ಮಕ್ಳಾದ್ರೇನು
ಎಲ್ಲಾ
ಒಂದೇ ಅಲ್ವಾ?
ಅಂದರೆ
ಹೆಂಡತಿಗೇಕೋ
ಗಂಡನ
ಬಗ್ಗೆ
ದುರುಗುಟ್ಟಿ
ನೋಡುವಷ್ಟು
ಸಂಶಯ!!

🏽ಶಾಂತಾರಾಮ್ ಶೆಟ್ಟಿ
➖➖➖➖➖😢

ಮೂಲ!

ಮೂಲ!
=======
ಹಸಿವಿನ
ಮೂಲ ಎಲ್ಲಿದೆ?
ಎಂದರೆ
ಎಲ್ಲರೂ
ಹೊಟ್ಟೆಯ
ಮೇಲೆ ಕೈಯಿಟ್ಟರು!

ನಿಜವಾಗಿಯೂ
ಗುಡಾಣ
ಹೊಟ್ಟೆಯವರಿಗೆ
ಹಸಿವಿರಲಿಲ್ಲ!!

ಶಾಂತಾರಾಮ್ ಶೆಟ್ಟಿ✒
〰〰〰〰〰〰
(ಹಸಿದಿದ್ದವರ ಹೊಟ್ಟೆ ಬೆನ್ನಲ್ಲಿತ್ತು!😥)

'ಶಿಲ್ಪಿ' ಸ್!

➖➖➖➖➖'ಶಿಲ್ಪಿ' ಸ್!

======🛠🔨
ಹೊಡೆದೂ
ಬಡಿದೂ
ಕುಕ್ಕೀ- ತಿಕ್ಕೀ
ಕುಟ್ಟಿ-ತಟ್ಟಿ
ತಾನೇ
ಮೂರ್ತಿಯಾದದ್ದು....?!

ಬರೀ
ಮೂರ್ತಿ ಯದ್ದೇ
ಅಲ್ಲ
ಹೆಚ್ಚಿನವರ
ಹೆಂಡತೀಯರೂ
ಶಿಲ್ಪಿಗಳೆ!!
..........................😢
✍🏽ಶಾಂತಾರಾಮ್ ಶೆಟ್ಟಿ.

(ದಿನಾ ಕೆತ್ತಿಸಿಕೊಂಡರೇ ಮೂರ್ತಿಯಾಗೋದು!!)

ಬೂದಿ!

ಬೂದಿ!
➖➖➖🤜🏽
ಅವರು
ನಮ್ಮ ನಿಮ್ಮಂತೆ
ಸಾಮಾನ್ಯರೇನೂ
ಅಲ್ಲ..‌..,

ಹಣವಂತರು
ಆಸ್ತಿವಂತರು
ಅಂತಸ್ತಿನವರು
ಅಹಂವಿನವರು!

ನಿನ್ನೆ
ಸಡನ್ನಾಗಿ
ಸತ್ತರು!

ಸ್ಮಶಾನದಲ್ಲಿ
ವೀರಬಾಹು
ಬೂದಿ
ತುಂಬಿಸಿದ
ಮಣ್ಣ ಬಿಂದಿಗೆ
ಸಂಬಂಧಿಕರ
ಕೈಗಿಟ್ಟ!!.

✍ಶಾಂತಾರಾಮ್ ಶೆಟ್ಟಿ.
➖➖➖➖➖👊🏻
( ಎಷ್ಟಿದ್ದರೂ ಕೊನೆಗೆ
ಒಂದೇ ಹಿಡಿ!.)

ದ್ವಿಮುಖ!

ದ್ವಿಮುಖ!
========
ಅಲ್ಪತೃಪ್ತಿ
ಆತ್ಮತೃಪ್ತಿ
ಸಂತೃಪ್ತಿ...
ಎಂದವನನ್ನು
ಜನರೆಲ್ಲಾ
ಕೈಮುಗಿದು
ಬುದ್ಧನೆಂದರು !

ಮೂವೈತ್ತೈದು
ಮಾರ್ಕ್ಸ್ ಗೆ
ಮುಖದ ತುಂಬಾ
ಸಂತೃಪ್ತಿಯ
ಮೆಲುನಗೆ ಹೊತ್ತ
ಹಿಂದಿನ ಬೆಂಚಿನ
ಹುಡುಗರನ್ನು
ಸಮಾಜ
ಒಪ್ಪಲೇ ಇಲ್ಲ....,

ಬುದ್ದುಗಳೆಂದರು!!

✍ಶಾಂತಾರಾಮ್ ಶೆಟ್ಟಿ 

ಅಪಹಾಸ್ಯ!

ಅಪಹಾಸ್ಯ!
➖➖➖

ಛೆ
ಇಲ್ಲಾರೀ....
ನನಗೆ
ಅಂತದ್ದೇನೂ
ವಯಸ್ಸಾಗಿಲ್ಲ
ಅನ್ನುವಾಗೆಲ್ಲಾ.....

ನನ್ನ
ಗಡ್ಡ ಮೀಸೆಯ
ಕೆಲವೊಂದು
ಕೂದಲುಗಳು
ಘೊಳ್ಳನೆ
ಬೆಳ್ಳನೆ
ಅಪಹಾಸ್ಯದ
ನಗು ನಗುತ್ತವೆ!!

✍🏽ಶಾಂತಾರಾಮ್ ಶೆಟ್ಟಿ.

(ಹೆಂಗಸರಿಗೆ ಗಡ್ಡ ಮೀಸೆ ಬರದಿರುವುದರಿಂದ ಅವರಿಗೆ
ವಯಸ್ಸಾಗಲ್ಲ !)😀

Be cool


Be cool 

ಮಣ್ಣಿನ
ಮಡಕೆಯೊಳಗೆ
ತಣ್ಣಗೆ
ಮಂಥನವಾದರೆ
ಮಜ್ಜಿಗೆಯೊಳಗಿನ
ಮೃದು-ಮಧುರ
ಬಟರ್ !

ಒಳಗೊಳಗೆ
ಒಡಲೊಳಗೆ
ಕುದಿದರೆ..
ಬಾಳು
ಪ್ರಶ್ಶರ್ ಕುಕ್ಕರ್...

ಬೇಗ ಬೇಯುವೆ
ಬೇಗ ಸಾಯುವೆ!!

ಶಾಂತಾರಾಮ್ ಶೆಟ್ಟಿ.
(ಕುದಿಯ ಬೇಡವೋ ಎಲೈ ಮನವೇ...)

ಅಂತರ!!

ಅಂತರ!!
📶📶📶📶
ನಮ್ಮ
ಸಾಂಸಾರಿಕ
ಸಾಮಾಜಿಕ
ಮಾನವೀಯ ಮೌಲ್ಯಗಳೆಲ್ಲಾ
ಎಲ್ಲಿ ಹೋದವು?

ಕೇಳಿದರೆ
4G ಹುಡುಗರು
ಗೂಗಲ್‌ನಲ್ಲಿ
ಹುಡುಕಿದರು!

ಉಹೂಂ...
ಸಿಕ್ಕಿಲ್ಲ !


ನೆಟ್ ವರ್ಕ್ ಪ್ರಾಬ್ಲೆಮ್ಮ್!

✍ ಶಾಂತಾರಾಮ್ ಶೆಟ್ಟಿ.
➖➖➖➖➖➖
(ಅಜ್ಜಿಗೂ ಮೊಮ್ಮಗನಿಗೂ ಕನೆಕ್ಟೇ ಆಗ್ತಾ ಇಲ್ಲ!!)😃