ಸೋಮವಾರ, ಫೆಬ್ರವರಿ 19, 2018

ಸಾವಧಾನ

ಸಾವಧಾನ 

ಮಣ್ಣಿನ
ಮಡಕೆಯೊಳಗೆ
ತಣ್ಣಗೆ
ಮಂಥನವಾದರೆ
ಮಜ್ಜಿಗೆಯೊಳಗಿನ
ಮೃದು-ಮಧುರ
ಬಟರ್ !

ಒಳಗೊಳಗೆ
ಒಡಲೊಳಗೆ
ಕುದಿದರೆ..
ಬಾಳು
ಪ್ರಶ್ಶರ್ ಕುಕ್ಕರ್...

ಬೇಗ ಬೇಯುವೆ
ಬೇಗ ಸಾಯುವೆ!!

✍ ಶಾಂತಾರಾಮ್ ಶೆಟ್ಟಿ.
(ಕುದಿಯ ಬೇಡವೋ ಎಲೈ ಮನವೇ...)

ಅಂತರ!!

ಅಂತರ!!
📶📶📶📶
ನಮ್ಮ
ಸಾಂಸಾರಿಕ
ಸಾಮಾಜಿಕ
ಮಾನವೀಯ ಮೌಲ್ಯಗಳೆಲ್ಲಾ
ಎಲ್ಲಿ ಹೋದವು?

ಕೇಳಿದರೆ
4G ಹುಡುಗರು
ಗೂಗಲ್‌ನಲ್ಲಿ
ಹುಡುಕಿದರು!

ಉಹೂಂ...
ಸಿಕ್ಕಿಲ್ಲ !


ನೆಟ್ ವರ್ಕ್ ಪ್ರಾಬ್ಲೆಮ್ಮ್!

✍ ಶಾಂತಾರಾಮ್ ಶೆಟ್ಟಿ.
➖➖➖➖➖➖
(ಅಜ್ಜಿಗೂ ಮೊಮ್ಮಗನಿಗೂ ಕನೆಕ್ಟೇ ಆಗ್ತಾ ಇಲ್ಲ!!)😃

ದುರಾಸೆ! ➖➖➖➖ ಬೇಕಾಗುವಷ್ಟು ಬಾಚಿಕೋ ಎಂದೇ ದೇವರು ಎರಡು ಕೈ ಕೊಟ್ಟ! ದುರಾಸೆ ಕೈ ಚೀಲ ಹಿಡಿಯಿತು!! ✍ಶಾಂತಾರಾಮ್ ಶೆಟ್ಟಿ ➖➖➖➖➖🍁

ದುರಾಸೆ!
➖➖➖➖

ಬೇಕಾಗುವಷ್ಟು
ಬಾಚಿಕೋ
ಎಂದೇ
ದೇವರು
ಎರಡು ಕೈ ಕೊಟ್ಟ!

ದುರಾಸೆ
ಕೈ
ಚೀಲ ಹಿಡಿಯಿತು!!

✍ಶಾಂತಾರಾಮ್ ಶೆಟ್ಟಿ
➖➖➖➖➖🍁

ಆಶಾವಾದಿ!

ಆಶಾವಾದಿ!
➖➖➖👍🏻
ಜೀವನದಲ್ಲಿ
ಗಂಡಸರು
ಯಾವತ್ತೂ
ಆಶಾವಾದಿಗಳಾಗಿ
ಇರಬೇಕು...!

ಇಂದಲ್ಲ ನಾಳೆ
ಹೆಂಡತಿ....
ನಿಮ್ಮ ಮಾತು
ಕೇಳಿದರೂ
ಕೇಳಬಹುದು !!

✍ ಶಾಂತಾರಾಮ್ ಶೆಟ್ಟಿ.

(ಹಣೆ ಬರಹಕ್ಕೆ ಗ್ಯಾರಂಟಿ ಕೊಡಲಾಗದು)😜

ಉನ್ಮಾದ!

ಉನ್ಮಾದ!
➖➖➖➖➖
ಈ ದೇಶ ನನ್ನದು
ನನ್ನ ದೇಹದೊಳು
ಹರಿಯುವ
ಹನಿ ಹನಿ
ರಕ್ತವೂ ನಿನ್ನದು !

ಕವಿ ಬರೆದ
ಗಾಯಕ ಹಾಡಿದ
ಜನ
ಕುಣಿದರು
ದಣಿದರು...!!

ಉನ್ಮತ್ತ ಮತಭಕ್ತ
ರಾಜಕಾರಣಿ
ಎದೆಸೀಳುವ
ತಲೆಕಡಿಯುವ
ಯುದ್ದೋನ್ಮಾದದ
ಪಂಥಾಹ್ವಾನ ನೀಡಿದ!

ಗಡಿಯಲ್ಲಿ
ಗುಂಡು ಎದೆಯೊಕ್ಕಿಸಿ
ರಕ್ತ ಬಸಿದುಕೊಂಡು
ವೈರಿಯ ಪ್ರಾಣ
ಕಸಿದುಕೊಂಡು
ಸತ್ತಿದ್ದು
ಸೈನಿಕ ಮಾತ್ರ!

ವೀರ ಸತ್ತಾಗ
ಹೆಂಡತಿ ಮಕ್ಕಳು
ಎದೆಬಿರಿದು ಅತ್ತಾಗ
ಲೆಕ್ಕಿಸಲಿಲ್ಲ-ಬಿಕ್ಕಿಸಲಿಲ್ಲ
ದು:ಖಿಸಲು
ಜನರೇ ಇಲ್ಲ !

ಉಗುರು ಕಚ್ಚುವ
ದೇಶಭಕ್ತರೆಲ್ಲರೂ
ಅತಂಕಿತರೇ
ದೇಶ ಗೆದ್ದರೆ ಸಾಕು
ಕೊನೆಯ ಬಾಲಲ್ಲಿ
ಗೆಲ್ಲಲು ಇನ್ನೂ
ಐದು ರನ್ನು ಬೇಕು!!.

✍🏽ಶಾಂತಾರಾಮ್ ಶೆಟ್ಟಿ 😕

ಉಪದೇಶ!

ಉಪದೇಶ!
========🗣
ಅದು ಬಿಡಿ
ಇದು ಬಿಡಿ
ಬರೀ
ದೇವರಲ್ಲಿ
ಚಿತ್ತವಿಡಿ !

ಎಂದೆಲ್ಲಾ
ಪ್ರವಾಚಿಸುವ
ಸ್ವಾಮೀಜಿಗೂ
ತಿರುಗಾಡಲು
Audi ಗಾಡಿ !!

✍ ಶಾಂತಾರಾಮ್ ಶೆಟ್ಟಿ.

ಓ(ಊ)ಳು!

ಓ(ಊ)ಳು!
➖➖➖➖

ತಮ್ಮಷ್ಟಕ್ಕೇ
ತಮ್ಮನ್ನು
ತಾವೇ
ಬುದ್ಧಿವಂತ ಪ್ರಾಣಿ
ಎಂದು
ಮನುಷ್ಯ
ಕರೆದುಕೊಳ್ಳುವಾಗಲೆಲ್ಲಾ...

ದೂರದಲ್ಲಿ
ನರಿಯೊಂದು
ಓಓಉ
ಎಂದು
ಊಳಿಡುತ್ತಿತ್ತು!!.

✍ ಶಾಂತಾರಾಮ್ ಶೆಟ್ಟಿ
➖➖➖➖➖
(ಪ್ರತಿಭಟನೆ ಇದ್ದರೂ ಇರಬಹುದೇನೊ?)😃

ಸಂಶಯ! ➖➖➖

ಸಂಶಯ!
➖➖➖
ಸ್ವಂತದೊಂದು
ಸೂರಿಲ್ಲ
ಬ್ಯಾಂಕಲ್ಲೇನೂ
ಬ್ಯಾಲೆನ್ಸ್
ಇದ್ದಂಗಿಲ್ಲ
ಆದರೂ
ದಿನಾ ಬೆಳಿಗ್ಯೆದ್ದು
ಹಾಡುವ
ಕೋಗಿಲೆಯ ಖುಷಿ ಕಂಡಾಗಲೆಲ್ಲಾ.....

ಮಾನವ ಜನ್ಮ ದೊಡ್ಡದು
ಎಂದ
ದಾಸರ ಮೇಲೇಕೋ
ಸಣ್ಣದೊಂದು
ಸಂಶಯ !!

✍ ಶಾಂತಾರಾಮ್ ಶೆಟ್ಟಿ.
➖➖➖➖➖➖
(ಬರುವ ಜನ್ಮದಲ್ಲಾದರೂ ನಾನು  ನೀನಾಗಲೇ
ಎಲೈ ಕೋಗಿಲೆ.....?! )

ಗಾರ್ಧಭ(ಗಾನ)ರು

ಗಾರ್ಧಭ(ಗಾನ)ರು
===============

"ನಿಲ್ಲಿಸು...
ಕೋಗಿಲೆಯಂತಿಲ್ಲ
ನಿನ್ನ ಧ್ವನಿ"
ಅಂದರೂ
ಕತ್ತೆ ಅರಚುವುದನ್ನು
ನಿಲ್ಲಿಸೋಲ್ಲವಂತೆ....!

ಕೆಲ ಕಿವಿಗಳಿಗೆ
ಹಸಿವಿನ
ಅರಚಾಟದಲ್ಲೂ 
ಸಂಗೀತದ ಧ್ವನಿ
ಕೇಳುವಾಸೆ !

✍ಶಾಂತಾರಾಮ್ ಶೆಟ್ಟಿ

( ಕತ್ತೆಯನ್ನೂ ಅರ್ಥಮಾಡಿಕೊಳ್ಳದ___!)

ಇಷ್ಟೇ!

ಇಷ್ಟೇ!
➖➖➖➖
ಮೂರಂತಸ್ತಿನ
ಮನೆಯಲ್ಲಿ
ಆರು ಬೆಡ್ರೂಮು
ಕಟ್ಟಿಸಿದವನೂ...

ಕೊನೆಗೆ
ಮಲಗಿದ್ದು
ಮಾತ್ರ






ಮಣ್ಣೊಳಗೆ!!.

✍ಶಾಂತಾರಾಮ್ ಶೆಟ್ಟಿ
➖➖➖➖➖➖
(ಅರೆನಿದ್ರೆಗೆ ಚಿರನಿದ್ರೆಯ ಸವಾಲು!)

ಕೆಲಸವಿಲ್ಲ!

ಕೆಲಸವಿಲ್ಲ!
=========

ಹಣ
ಸಂಪಾದನೆಯ
ಹಿಂದೆ
ಬಿದ್ದವರೆಲ್ಲಾ
ಬೆಳೆಗ್ಗೆದ್ದು ಮನೆಬಿಟ್ಟು
ಕೆಲಸಕ್ಕೆ ಹೋದರು,

ಅಮ್ಮನಿಗೆ
ಕೆಲಸವಿಲ್ಲ....

ಆಕೆ ಮನೆಯಲ್ಲೇ !

ಹೊತ್ತಾರೆ ಎದ್ದು
ಅಡುಗೆಮನೆಯಲ್ಲಿ
ಕುಟ್ಟಿ-ತಟ್ಟಿ
ಹದವಿಟ್ಟು-ಹಬೆಯಿಟ್ಟು
ಬೇಯಿಸಿ-ಬಾಡಿಸಿ
ಕುದಿಸಿ-ಕುಂದಿಸಿ
ಹಸಿ-ಬಿಸಿ
ಪ್ರೀತಿಯ-ಛಾತಿಯ
ತುತ್ತು
ಉಣಬಡಿಸಿದವಳಿಗೆ
ಸಂಬಳವಿಲ್ಲ!!

✍ ಶಾಂತಾರಾಮ್ ಶೆಟ್ಟಿ.
➖➖➖➖➖➖
( ಅಮ್ಮನ ಹೃದಯದಲ್ಲಿ ಕಾಸಿಗೆ ಚಿಕ್ಕಾಸಿನ ಬೆಲೆ!)

(ತ)ಗಾದೆ!

(ತ)ಗಾದೆ!
➖➖➖➖

"ಬಿತ್ತಿದ್ದನ್ನೇ
ಬೆಳೆಯೋದು...!"

ಕಲಬೆರಕೆ
ಕಳಪೆ ಬೀಜ
ಬಿತ್ತೋವರೆಗೆ
ರೈತ
ಹಾಗಂತ್ಲೇ ನಂಬಿದ್ದ!!

✍ ಶಾಂತಾರಾಮ್ ಶೆಟ್ಟಿ.

(ಅ)ಕ್ಷಯ!.

(ಅ)ಕ್ಷಯ!.
➖➖➖➖

ಮೂಲೆಯಲ್ಲೇ
ಸಂಪತ್ತು
ವೃದ್ಧಿಯಾಗೋದು
ದುಡ್ಡು ಬಂಗಾರ
ಇಲ್ಲಿಡಿ
ಎಂದರು
ವಾಸ್ತು ತಜ್ಞರು...!

ಜಾಣ
ಕಳ್ಳ
ಕುಬೇರ
ಮೂಲೆಗೇ
ಕನ್ನ ಹಾಕಿದ !!

 ✍ ಶಾಂತಾರಾಮ್ ಶೆಟ್ಟಿ.

ಅರ್ಥವಾಗಿಲ್ಲ!

ಅರ್ಥವಾಗಿಲ್ಲ!
➖➖➖➖➖😇
ಅರ್ಥವಾಗದವರೂ
ಅರ್ಥವಾಗದವರಿಗೆ
ಅರ್ಥವಾಗದಂತೆ
ಅರ್ಥೈಸದೆ ಹೇಳುವ
ವೇದಾಂತದಂತೆ
ಸಂಕೀರ್ಣ

ಬದುಕ ಸಂತೆ !

ಸ್ವಾರ್ಥ
ಪರಾರ್ಥ
ಪಾರಮಾರ್ಥ
ಜೀವನಾರ್ಥ

ಇರುಕು ದಾರಿಯಲ್ಲಿ
ಇನಿತೂ
ಅರ್ಥವಾಗದೆ
ತಡವುತ್ತಾ ಎಡವುತ್ತಾ
ನಮ್ಮ
ಜೀವನ
Already
ಅರ್ಧ
ಮುಗಿದೋಗಿದೆಯಂತೆ !!

✍ ಶಾಂತಾರಾಮ್ ಶೆಟ್ಟಿ
➖➖➖➖➖➖
(ಅರ್ಥವಾಗಲಿ,ಆಗದಿರಲಿ
ಸಂತೆ
ಮುಗಿದಂತೆ
ಜಾಗ ಖಾಲಿ ಮಾಡಬೇಕಂತೆ!)
====≠========

ಭಾನುವಾರ, ಫೆಬ್ರವರಿ 4, 2018

(ಮೂರಾ)ಬಟ್ಟೆ!.

(ಮೂರಾ)ಬಟ್ಟೆ!.
==========
ಮೈ
ಮುಚ್ಚಿಟ್ಟು
ಬಿಚ್ಚಿಟ್ಟು
ಅರೆಬರೆ ತೆರೆದಿಟ್ಟು
ಕಣ್ಣಾಮುಚ್ಚಾಲೆ
ಆಟ ಆಡಿದ್ದು
ಈ ಬಟ್ಟೆ....,

ಮಾನದ
ಬದುಕು
ಬಟ್ಟೆಯ
ಬಲೆಯೊಳಗೆ
ಮೂರಾಬಟ್ಟೆ!!.

✍ ಶಾಂತಾರಾಮ್ ಶೆಟ್ಟಿ.

(ಮಾನದ ಜೊತೆ
ಬಟ್ಟೆ
ಆಟ ಆಡುತ್ತೆ ಖಂಡಾಬಟ್ಟೆ !!.)😃

ನಿಸ್ವಾರ್ಥಿ!

ನಿಸ್ವಾರ್ಥಿ!
➖➖➖➖✋🏾
ಹೆಂಡತಿ
ಮನೆ-ಮಠ
ಮಕ್ಕಳು-ಮೊಮ್ಮಕ್ಕಳು...‌,

ನಾನೇ
ಕಟ್ಟಿಕೊಂಡ
ಬದುಕೇ
ನನಗೆ ಸಾಕಷ್ಟಿದೆ !

ಅತಿಯಾಸೆ ನನಗಿಲ್ಲ
ಯಮರಾಜ
ಬೇಕಿಲ್ಲ ನನಗೆ
ಸಾವು
ನೀನೇ
ಇಟ್ಟುಕೋ !!

✍🏽ಶಾಂತಾರಾಮ್ ಶೆಟ್ಟಿ.
➖➖➖➖✋🏾😀

Costly....!

Costly....!
➖➖➖➖💞

ಇತ್ತೀಚೆಗೆ
ತೀರಾ
ಹೆಚ್ಚಾಗಿದೆ
ಪ್ರೀತಿಯ ಬೆಲೆ!

ಪಾಪ
ಪ್ರೀತಿ
ಮಾಡೋದಾದ್ರೂ
ಹ್ಯಾಗೆ
ಬಡಪಾಯಿ...?

ಕಾಫಿ ಡೇಯಲ್ಲಿ
ಅವಳ ಜೊತೆ
ಕುಡಿದ
ಒಂದು ಕಾಫಿಗೆ
ಬರೋಬ್ಬರಿ
ಇನ್ನೂರು ರೂಪಾಯಿ!!


(ಹುಡುಗ ಸಪಾಯಿ!😉)

✍ಶಾಂತಾರಾಮ್ ಶೆಟ್ಟಿ.
➖➖➖➖➖☕

ಬೆಲೆ!!

ಬೆಲೆ!!
=====

ಹೌದ್ರೀ...
ಕತ್ತೆಗೇನು ಗೊತ್ತು
ಕಸ್ತೂರಿ ಸುವಾಸನೆ?!

ಕತ್ತೆಗೆ
ಗೊತ್ತಿದ್ದದ್ದು
ಬರೇ..

ದಿನಾ
ಸುಡು ಬಿಸಿಲಿನ
ದುಡಿತದಿಂದ
ಸುರಿಯುವ
ಬೆವರಿನ
ಗಮಟು ವಾಸನೆ!!

✍ ಶಾಂತಾರಾಮ್ ಶೆಟ್ಟಿ.

ನೋವು!

ನೋವು!
➖➖➖😢

ತನ್ನ ಹೆಸರಿಡಿದು
ದೇವರಲ್ಲಿ
ಹಿಡಿಶಾಪ ಹಾಕೋ
ನೋವುಂಡವರ
ನೋವು ಕಂಡಾಗ
ನೋವಿಗೂ
ನೋವಾಗುತ್ತಿತ್ತು......!

ತನ್ನ
ಬೆನ್ನ ಹಿಂದೇನೇ
ನಲಿವಿದೆ
ಎಂದು ನೋವು
ತಾನೇ ತಾನಾಗಿ
ತೋರಿ ಕೊಟ್ಟಾಗಲೂ
ತಾಯಿ
ಮಗುವಿನ ನಗು
ನೋಡಿ
ನೋವ
ಮರೆತೇ ಬಿಟ್ಟಳು!!

✍🏽ಶಾಂತಾರಾಮ್ ಶೆಟ್ಟಿ.

ವ್ಯತ್ಯಾಸ!

ವ್ಯತ್ಯಾಸ!
▪▪▪▪
ಹಗಲು
ಸುಂದರ
ಇರುಳು
ಭಯಂಕರ!

ಕಂಡವರ ಮಾತಿಗೆ
ಕಪ್ಪು
ಕನ್ನಡಕದೊಳಗಿನ
ಕುರುಡನದ್ದು

ನಿರ್ಲಿಪ್ತ ನಗು!
😎

✍ಶಾಂತಾರಾಮ್ ಶೆಟ್ಟಿ
⚜⚜⚜⚜⚜⚜

ದಾರಿ!

ದಾರಿ!
======
ಬೆಂಕಿ
ತನ್ನಿಂತಾನೆ
ಉರಿಯೋದು
ಗಾಳಿ
ಉರಿಯೋ ಬೆಂಕಿಗೆ
ತುಪ್ಪ
ಸುರಿಯೋದು
ನಡೀತಾನೇ ಇತ್ತು.....!

ನೀರು
ಮಾತ್ರ
ಆರಿಸುವ
ತಣ್ಣಗಿನ
ದಾರಿ
ಆರಿಸಿತು!!

✍ಶಾಂತಾರಾಮ್ ಶೆಟ್ಟಿ.