ಶುಕ್ರವಾರ, ಸೆಪ್ಟೆಂಬರ್ 16, 2016

ತಾ-ಕತ್ತು❗

ತಾ-ಕತ್ತು❗
=======

ಪಾಪ
ಅವಳಿಗೆ
ವರ ಮಾಲೆ
ಹಾಕಲು
ಕಷ್ಟವಾಗುತ್ತಲ್ಲಾ
ಅಂತನಿಸಿ
ಗಂಡು
ಅಂದು
ಕತ್ತು ಬಾಗಿಸಿದ !

ಅಷ್ಟೇಯಾ....

ಈವತ್ತಿಗೂ
ಕತ್ತು
ಎತ್ತಲಾಗುತ್ತಿಲ್ಲ !
😀

✍🏾..ಶಾಂತಾರಾಂ ಶೆಟ್ಟಿ
      ❣❣❣❣❣

ಹಾಗೇನಿಲ್ಲ...❗

ಛೆ...! ಛೆ..!!
ಹಾಗೇನಿಲ್ಲ...❗

ಎಲ್ಲಾ  ಹೆಂಡತಿಯರು
ಗಂಡಂದಿರ
ಮಾತು
ಕೇಳೋದಿಲ್ಲ
ಅನ್ನೋ ಹಾಗಿಲ್ಲ.....😃😃



ಕೆಲವು ಗಂಡಂದಿರೇ
ಮಾತಾಡುವ
ಧೈರ್ಯ
ಮಾಡಲ್ಲ.❗❗
😂😂😂

ಬಹುಪರಾಕ್

ಬಹುಪರಾಕ್
=========
ಹೇಳ್ಕೋಳೋದಕ್ಕೆ
ಏನು?

ನಮ್ಮದೂ
ಪ್ರಜಾಪ್ರಭುತ್ವ,

ಕಾಮಿಡಿ
ನೋಡಿ.....!!

ಈಗಲೂ
ಪ್ರಜೆಗಳ ನಡುವೆ


"ಸಾಹೇಬರು
ಬರುತ್ತಾರೆ"

ದಾರಿಬಿಡಿ

ದಾರಿ ಬಿಡಿ  !!.

........✍🏾ಶಾಂತಾರಾಮ್ ಶೆಟ್ಟಿ