ಮಂಗಳವಾರ, ಡಿಸೆಂಬರ್ 6, 2016

ಭಯ!!

ಭಯ!!
➖➖➖➖
ನನಗೆ
ಯಾರ ಭಯವೂ ಇಲ್ಲ
ಎಂದು
ಸುಳ್ಳು
ಸುಳ್ಳು ಹೇಳಿತ್ತು!!

ಭಯವಿತ್ತು,

ಅದಕ್ಕೇ
ಸತ್ಯಾನ
ಬಚ್ಚಿಟ್ಟಿತ್ತು
ಭಯಾನ
ಮುಚ್ಚಿಟ್ಟಿತ್ತು!!

✍🏾: ಶಾಂತಾರಾಮ್ ಶೆಟ್ಟಿ.
        ▪▪▪▪▪▪

ಕಲಿಯುಗದಲಿ....

ಕಲಿಯುಗದಲಿ....
▪▪▪▪▪

ಎಷ್ಟೊಂದು
ಹುಡುಗಿಯರು
ಶ್ರೀ ಕೃಷ್ಣನ
ಸುತ್ತಾಮುತ್ತಾ ......

ಕಾರಣ ....
ಕೈಯಲ್ಲಿದ್ದ
ಒಂದು
ಸಣ್ಣ
ಬಿದಿರಿನ
ಕೊಳಲು!

ಕಲಿಯುಗದಲ್ಲಿ
ಇದೆಲ್ಲಾ
ನಡೆಯಲ್ಲ ಬಿಡಿ...!

ಈಗ
ಏನಿದ್ದರೂ...
ಸ್ಯಾಮ್ಸಂಗ್ -ಆ್ಯಪಲ್
ಅಂಡ್ರಾಯ್ಡ್
ಮೊಬೈಲು!!.
😜😝

✍🏾:  ಶಾಂತಾರಾಮ್ ಶೆಟ್ಟಿ
🚥🚥🚥🚥🚥🚥🚥

ಸಣ್ಣತನ!

ಸಣ್ಣತನ!

ದೇಶದ ವಿಷಯದಲ್ಲಿ
ನಾವು ರಾಜ್ಯದವರು
ರಾಜ್ಯದ ತಕರಾರಲ್ಲಿ
ನಾವು ಜಿಲ್ಲೆಯವರು
ಜಿಲ್ಲೆಯ ನಡುವೆ
ಕೋಮಿನವರು
ಕೋಮಿನೊಳಗೆ
ಜಾತಿಯವರು....!

ನಾವು ಬೆಳೆದಿದ್ದೇವೆ...
ದಿನದಿಂದ
ದಿನಕ್ಕೆ.....

ಸಣ್ಣವರಾಗಿ!!

✍🏾 ಶಾಂತಾರಾಮ್ ಶೆಟ್ಟಿ.
🚥🚥🚥🚥🚥🚥🚥🚥

ಗೋವಿಂದಾ...!

ಗೋವಿಂದಾ...!
➖➖➖➖

ಹೆತ್ತಮ್ಮನನ್ನೂ
ಕಣ್ಣೆತ್ತಿ
ನೋಡಲಾರರು
ನಮ್ಮ ಮಕ್ಕಳು
ಮನ
ನರಳುತ್ತಿದೆ
ನೋವಿಂದಾ...!

ಸಾಕಿದ
ಯಶೋದೆಯನ್ನೇ
ಪ್ರೀತಿ ಸಾಗರದಲ್ಲಿ
ತೇಲಿಸಿದವ
ನೀನು
ನಮ್ಮ
ಕಾಯಲಾರೆಯ
ಮುಕುಂದಾ?!!.

✍🏾 : ಶಾಂತಾರಾಮ್ ಶೆಟ್ಟಿ

ಸುಸ್ತು!

ಸುಸ್ತು!
💓💓💓

ಪ್ರಿಯೇ....
ನಿನಗಾಗಿ ನಕ್ಷತ್ರ
ಕಿತ್ತು ತರುವೆ
ಬೆಟ್ಟಾನ
ಹೊತ್ತು ಬರುವೆ...
ಪ್ರೇಮಿಗಳಾಗಿದ್ದಾಗ
ಈ ಮಾತೆಲ್ಲಾ
ಚೆಂದ....!

ಆಗ ಇತ್ತು
ತಾಕತ್ತು
ಈಗ
ಮದುವೆಯಾಗಿದೆ...
ಸುಸ್ತೋ ಸುಸ್ತು !

ಆಗದು ನನ್ನಿಂದ
ನಿನ್ನ
ಪೌಡರು ಲಿಪ್ಸ್ಟಿಕ್ಕ್ ಗಳಿಗೆ
ಎರಡು ಸಾವಿರದ
ಒಂದು ನೋಟು
ತರಲೂ
ಏ.ಟಿ.ಎಂ ನಿಂದ!!
😜

✍🏾:ಶಾಂತಾರಾಮ್ ಶೆಟ್ಟಿ
💔💔💔💔💔💔💔

ವಾಸ್ತವ!

ವಾಸ್ತವ!
👁👁👁

ಪ್ರೇಮಿಗಳಾಗಿದ್ದಾಗ.....
ನಿನ್ನ
ಕಣ್ಣ ನೋಟದಲ್ಲೇ
ಹೊಟ್ಟೆ ತುಂಬುತ್ತೆ
ಅಂದಿದ್ದು ನಿಜಾನೇ...!

ಆಗ ನಾನು
ಕವಿಯಾಗಿದ್ದೆ
ಕಲ್ಪನೆಯಲ್ಲಿದ್ದೆ!

ಹಾಗಂತ ನೀನು
ನನ್ನನ್ನೇ ನೋಡುತ್ತಾ
ಕೂಡ ಬೇಡ...
ಅಡುಗೆಮಾಡಿ
ಏನಾರ ಬಡಿಸು
ಹಸಿವಾಗುತ್ತೆ..!

ನಮಗೀಗ
ಮದುವೆಯಾಗಿದೆ
ನನಗೀಗ
ವಾಸ್ತವದ
ಅರಿವಾಗಿದೆ !!.
😀

✍🏾:ಶಾಂತಾರಾಮ್ ಶೆಟ್ಟಿ
🙏🙏🙏🙏🙏🙏🙏