ಸೋಮವಾರ, ಮೇ 7, 2018

(ಆ )ಗಧೆ!

(ಆ )ಗಧೆ!
〰〰〰
ಮದುವೆಯಾದ
ಗಂಡಸರೆಲ್ಲಾ
ದಡ್ಡರು!

ಕತ್ತೆ
ಬುದ್ದಿವಂತ ಪ್ರಾಣಿ,

ಆ ಗಧೆ
ಹಾಗೇ
ಉಳಿಯಿತು
ಮದುವೆ  ಆಗದೆ!

✒ಶಾಂತಾರಾಮ್ ಶೆಟ್ಟಿ.
〰〰〰〰〰〰〰

ಶಾಂತಾರಾಮ್ ಶೆಟ್ಟಿ

ಸೋಲು!

ಸೋಲು!
=======
ಹೆಣ್ಣಿನ ಹಟ
ಹಾಗೇನೆ...
ಜಗ್ಗೋದಿಲ್ಲ
ಬಗ್ಗೋದಿಲ್ಲ,!

ಗಂಡನಾದ್ರೆ ಏನು?
ಆನೆಯಾದ್ರೆ ಏನು?
ಕೊನೆಗೆ 
ಸೋಲೋದು
ಗಂಡಾನೇ!!

✒ಶಾಂತಾರಾಮ್ ಶೆಟ್ಟಿ.
〰〰〰〰🐘🐘

ಮಾಡಿದ್ದುಣ್ಣೋ...!!

ಮಾಡಿದ್ದುಣ್ಣೋ...!!
〰〰〰〰〰🍞🥚
ಸಾಪ್ಟ್ವೇರ್
ಹುಡುಗ - ಹುಡುಗಿ
ಪ್ರೀತಿಸಿ ಮದುವೆ
ರೋಮಿಯೋ
ಜೂಲಿಯೆಟ್!

ದಿನಾ
ಊಟಕೆ-ತಿಂಡಿಗೆ
ಈಗ
ಬ್ರೆಡ್ಡು & ಆಮ್ಲೆಟ್ಟು!!

✒ಶಾಂತಾರಾಮ್ ಶೆಟ್ಟಿ.
〰〰〰〰🥚🍞

ಗೂಬೆ!

ಗೂಬೆ!
======🦉▪

ಗೊತ್ತಿಲ್ಲದವನನ್ನು
ಗೊತ್ತಿಲ್ಲವೆಂದು
ಗೊತ್ತಿದ್ದವರು
ಗೂಬೆಯೆದುರೇ
ಗೂಬೆಯೆಂದರು!

ಗೂಬೆಗೂ
ಗೂಬೆ
ಗೂಬೆಯೆಂಬುದು
ಇನ್ನೂ ಗೊತ್ತಾಗಿಲ್ಲ!!

✒ಶಾಂತಾರಾಮ್ ಶೆಟ್ಟಿ.
〰〰〰🦉〰😇

(ಗೂಬೆನೂ ಗೂಬೆನೇ!!😀)

ಮತದಾರ!

ಮತದಾರ!
==========
ಕುರ್ಚಿಗೇರಲು
ಏಣಿ ಬೇಕು ಮತದಾರ,
ಏರಿದ ನಂತರ
ಯಾರಾದ್ರೂ-ಯಾಕಾದ್ರೂ
ನಿನ್ನ ನೆನಪಿಡುತ್ತಾರಾ?!

ಅಳೆದು ಎಳೆದು
ತೊಳೆದು-ಕಳೆದು
ಬಿಡುತ್ತಾರೆ
ಚಡ್ಡಿ ಚಲ್ಲಣ ಸೇರಿ
ಬಿಡದೇ
ಸೊಂಟದಲ್ಲಿರೋ
ನಿನ್ನ ಉಡಿದಾರ!!

✒ಶಾಂತಾರಾಮ್ ಶೆಟ್ಟಿ.
〰〰〰〰〰〰

(ಕನಿಷ್ಠ ಉಡಿದಾರ ಬಿಡೋನನ್ನಾದ್ರೂ ಆರಿಸಿ!!)

ಖಳ!

ಖಳ!
--------------🐑🦌

ಕುರುಬ
ದಿನಾ
ಪ್ರೀತಿಯಿಂದ
ಹುಲ್ಲು ತಿನ್ನಿಸುತ್ತಿದ್ದ!

ಕುರಿ
ನಂಬಿಕೆಯಿಂದ
ಬಾಲ ಅಲ್ಲಾಡಿಸಿ ತಿನ್ನುತ್ತಿತ್ತು!

ಮಾಂಸದಂಗಡಿಯಿಂದ
ಅಡ್ವಾನ್ಸ್  ತಕ್ಕೊಂಡು
ದುರಾಸೆ
ಅವಕಾಶಕ್ಕಾಗಿ
ಕತ್ತಿ ಮಸೆಯುತ್ತಿತ್ತು !!.

✒ಶಾಂತಾರಾಮ್ ಶೆಟ್ಟಿ.
〰〰〰〰〰🐑🦌

(ಕುರಿಯ ಪಾಲಿನ ಖಳನಾರು?)

ಲೆಕ್ಕ!

ಲೆಕ್ಕ!
➖➖➖➖➖
ನಮ್ಮ ಎಂ ಎಲ್ ಎ
ಆಸ್ತಿ
ಬರೀ
ನಲವತ್ತುಕೋಟಿ
ಅಷ್ಟೇ ಸ್ವಾಮಿ!

ಬಾಕಿದ್ದೆಲ್ಲಾ
ಬೇನಾಮಿ!!.

✍🏻ಶಾಂತಾರಾಮ್ ಶೆಟ್ಟಿ.
〰〰〰〰〰〰

kudka geetegalu

ಸಮಭಾವ!
〰〰〰〰🥃
ಕುಡಿದಾಗ
ಕುಡುಕರು
ಸಮಭಾವ ಪಡಿತಾರ!

ಆಗಾಗ
ಪಕ್ಕದ ಮನೆ
ಬಾಗಿಲು ಬಡಿತಾರ!!.

✍🏻ಶಾಂತಾರಾಮ್ ಶೆಟ್ಟಿ.
〰〰〰〰〰🥃

ಕಾರುಬಾರು!
===========
ಏನಿದ್ರೂ.....

ಇನ್ನು ಸ್ವಲ್ಪ ಹೊತ್ತು
ಕಾರುಬಾರು
ಆಮೇಲೆ ಕುಡುಕರು
ತನ್ನಷ್ಟಕ್ಕೆ
ಬಾಯಿ ಮುಚ್ಚುತ್ತಾರೆ!

ಹನ್ನೆರಡು ಗಂಟೆಗೆ
ಸರಿಯಾಗಿ
ಓನರು
ಬಾರು ಮುಚ್ಚುತ್ತಾರೆ!!

✒ಶಾಂತಾರಾಮ್ ಶೆಟ್ಟಿ.
================
(ರಂ ಇಲ್ಲದೆ ಧಂ ಇಲ್ಲ🥃😄)


ಒಂದೇ!
========
ಅವರ ಮನೆ-ಇವರ ಮನೆ
ಬೇರೆ-ಬೇರೆ
ಅನ್ನೋದೆಲ್ಲ ಸುಮ್ಮನೆ!

ಕುಡುಕರದ್ದು
ಅದ್ವೈತ ಸಿದ್ದಾಂತ....!

ಎಲ್ಲಾ
ಮನೆಗಳೂ ಒಂದೇ
ಎಲ್ಲಾ ಬಾಗಿಲುಗಳೂ ನಂಮ್ದೇ!!

✍🏻ಶಾಂತಾರಾಮ್ ಶೆಟ್ಟಿ.
➖➖➖➖➖🥃
( ಪರಮಾತ್ಮ ಒಳಗಿಳಿದು ಆತ್ಮನಲ್ಲಿ ವಿಲೀನವಾದರೆ ಎಲ್ಲಾ ಅವನಾಟ!)



ಇವರೂ ಅವರೇ!

ಇವರೂ ಅವರೇ!
〰〰〰〰〰

ಪ್ರಶ್ನೆಯಲ್ಲೇ
ಪ್ರಶ್ನೆಗೆ
ಉತ್ತರದ
ರಾಜಕಾರಣ!

ನನ್ನನ್ನು
ಕಳ್ಳ
ಅಂದಿಯೇನಾ?
ನೀನೇನು
ಭಾರೀ
ಸಾಚಾನಾ?!.

ಶಾಂತಾರಾಮ್ ಶೆಟ್ಟಿ.
〰〰〰〰〰〰
(ಕಳ್ಳರೇ ಎಲ್ಲರೂ😀).

ಬಂಧನ!

ಬಂಧನ!
〰〰〰🍁
ಬಂಧನದಲ್ಲೂ
ಸುಂದರ
ಬದುಕಿದೆ
ಎಂದು
ಸಾಧಿಸಿ
ತೋರಿಸಿದವ
ನಿಜ
ಸಂಸಾರಿ!!.

✍🏻ಶಾಂತಾರಾಮ್ ಶೆಟ್ಟಿ.
〰〰〰〰〰🤝🏾

(ತಾಳಿ ಕಟ್ಟಿಯೂ ಬಾಳುವ!)😍

ಧರ್ಮಸಂಕಟ!

ಧರ್ಮಸಂಕಟ!
==========
ಬಾಳೆ ಹಣ್ಣು
ತಿನ್ನೋದಕ್ಕೆ
ನನ್ನ
ಧರ್ಮದಲ್ಲಿ
ಎಲ್ಲಿದೆ
ವಿರೋಧ?

ನಿನ್ನ
ದೇವರ ಪ್ರಸಾದ

ಬಾಳೆಹಣ್ಣು
ತಿನ್ನುವುದು
ಮಾತ್ರ ಅಪರಾಧ!!.

✍🏻ಶಾಂತಾರಾಮ್ ಶೆಟ್ಟಿ.

ದರಿದ್ರ

ದರಿದ್ರ
〰〰〰🐕

ಬಡವನ
ಮನೆಯಂಗಳದಲ್ಲಿ
"ಅಮ್ಮಾ!"
ಎಂದ ಭಿಕ್ಷುಕ....

ಬಾಗಿಲು ತೆರೆಯಿತು!

ಶ್ರೀಮಂತನ
ಮನೆಯ
ಗೇಟಲ್ಲೇ
ನಾಯಿ ಬೊಗಳಿತು!!.

✒ಶಾಂತಾರಾಮ್ ಶೆಟ್ಟಿ.
〰〰〰〰〰🐕

ಉದಾರ!

ಉದಾರ!
========🌺
ಹೂವಿಂದ ಹೂವಿಗೆ
ದುಂಬಿ
ದಿನಾ
ಹಾರಿದರೂ .....

ಹೂವಿನದು
ಹೂವಿನಂತ
ಮನಸ್ಸು.....!

ಮರುದಿನ
ಮತ್ತದೇ
ನಗು ಮೊಗದ
ಸ್ವಾಗತ !!.

✒ಶಾಂತಾರಾಮ್ ಶೆಟ್ಟಿ.

(ಹೆಂಡತಿ ಹೂವಿನಷ್ಟು ಉದಾರಿಯಲ್ಲ!)

ತಳಮಳ!

ತಳಮಳ!
➖➖➖🌀

ದೂರದಲ್ಲಿ ನಿಂತು
ಯಾರೋ
ಪೋಲಿ ಹುಡುಗ
ಹೊಡೆದ ಕಲ್ಲು....,

ಎಲಾ ಎಲಾ
ಪ್ರಶಾಂತ
ಮನಸ್ಸೀಗ
ಅಲ್ಲೋಲ ಕಲ್ಲೋಲ!

✒ಶಾಂತಾರಾಮ್ ಶೆಟ್ಟಿ.
〰〰〰〰〰🌀

ಜಾರು-ಜಾಣರು!

ಜಾರು-ಜಾಣರು!
〰〰〰〰〰
ಬುದ್ಧ
ಮತ್ತೊಮ್ಮೆ ಹುಟ್ಟಿ ಬಾ!

ಗಾಂಧಿ
ಮತ್ತೊಮ್ಮೆ ಹುಟ್ಟಿ ಬಾ!

ಎಂದೆಲ್ಲಾ
ಗೋಗೆರೆಯುವ
ಸೋಗಲಾಡಿಗಳು.....,

ಯಾರೊಬ್ಬರೂ
ತಾವು
ಮತ್ತೊಬ್ಬ
ಬುದ್ಧನಾಗಲು
ಗಾಂಧಿಯಾಗಲು
ಪ್ರಯತ್ನಿಸಲೇ ಇಲ್ಲ!!.

✍🏻ಶಾಂತಾರಾಮ್ ಶೆಟ್ಟಿ.
〰〰〰〰〰🙊.

(ಜಾರು ಜಾಣರೇ ಎಲ್ಲಾ...)

ಹಳದಿಕಣ್ಣು!

ಹಳದಿಕಣ್ಣು!
=========
ಚಿನ್ನದಂತ ಅನ್ನ
ಚಿನ್ನದಂತ ಗುಣ
ಚಿನ್ನದಂತ ಹಣ್ಣು
ಚಿನ್ನದಂತ ಮಣ್ಣು!

ಚಿನ್ನಕ್ಕಿಂತ
ಮಿಗಿಲಾದುದನ್ನೂ
ಚಿನ್ನಕ್ಕೇ
ಹೋಲಿಸುವೆಯಲ್ಲೋ
ಹಳದಿಕಣ್ಣಿನ
ಡರ್ಟಿ ಫೆಲೋ?!!

(ಚಿನ್ನ ಬರೇ ಹಳದಿ ಲೋಹ. ಬೇಡ ವಿಪರೀತ ಮೋಹ!)

✍🏻ಶಾಂತಾರಾಮ್ ಶೆಟ್ಟಿ.

ಹಟ!

ಹಟ!
〰〰〰
ಛಲದೊಳ್
ಸುಯೋಧನ
ಛಲದಿಂದ್ಲೇ
ಸತ್ತೋದನ!

ಬೆಂಡಾಗದ
ಹಟದಿಂದ
ತುಂಡಾದ !!.

✍🏻ಶಾಂತಾರಾಮ್ ಶೆಟ್ಟಿ.
➖➖➖➖➖➖

ನಗು!

ನಗು!
➖➖➖〰
ಅವನಿಗೆ ಅವಳ
ಅವಳಿಗೆ ಅವನ
ಮೊದಲು
ಪರಿಚಯಿಸಿದ್ದೇ
ಆ ಒಂದು
ಕಿರುನಗು.....!

ನಗು
ಪರಿ ಪರಿ
ತಾಪ-ಸಂಹಾರಿ
ನಗುವೇ
ಪ್ರೀತಿ-ರಾಯಭಾರಿ!!

✍🏻ಶಾಂತಾರಾಮ್ ಶೆಟ್ಟಿ.
〰〰〰〰〰😄

ಗಮಟು!

ಗಮಟು!
--------------
ಓದಿದ
ಮಗ ಫಾರಿನ್ನಿಂದ
ಬಂದವ್ನೆ
ಹಳ್ಳಿ
ಮನೆ ತುಂಬಾ
ಸೆಂಟಿನ ವಾಸನೆ !

ಅಪ್ಪ ರೈತ
ಮಣ್ಣಲ್ಲಿ ಬೆಳೆದವ
ಮಣ್ಣೇ  ಚಿನ್ನ
ಮಣ್ಣೇ ಚಿನ್ಮಯ...!

ಸೆಂಟಿಂದ
ಆವತರಿಸಿದ
ತಲೆನೋವು
ಹಿಡಿತುಂಬಾ
ಘಮ್ಮನೆಯ
ತೋಟದ ಮಣ್ಣು
ಮೂಸಿದಾಗ ಮಾಯ!!

✒ಶಾಂತಾರಾಮ್ ಶೆಟ್ಟಿ

ಅತೃಪ್ತ

ಅತೃಪ್ತ
〰〰〰
ಗಂಡಸರ
ಬುದ್ಧಿಗಿಷ್ಟು....

ದಾರಿಯುದ್ದಕ್ಕೂ
ಹೂವಿಟ್ಟು
ಹಣ್ಣಿಟ್ಟು
ಪೂಜಿಸಿ
ಪ್ರೀತಿಸಿದರೂ ಇಳೆ....!

ವಸಂತ
ಜೊತೆಗಿದ್ದುದು
ಬರೀ
ಎರಡು ತಿಂಗಳೇ!!

✍🏻ಶಾಂತಾರಾಮ್ ಶೆಟ್ಟಿ.
〰〰〰〰🍃🍁
(ಚೈತ್ರ-ವೈಶಾಖ,ವಸಂತ ಮಾಯಕ!!)

ಶಿಕ್ಷೆ

ಶಿಕ್ಷೆ
〰〰🐋

ಬಲೆಯೊಳಗೆ
ಬಂಧಿ
ಮೀನು.......

ಸಿಗಲಿಲ್ಲ
ಕೊನೆಗೂ
ಜಾಮೀನು!

ಶಿಕ್ಷೆ
ಖಚಿತ....
ಮರಣದಂಡನೆ!!

✍🏻ಶಾಂತಾರಾಮ್ ಶೆಟ್ಟಿ
〰〰〰〰〰🐋

ಕಲಬೆರಕೆ!

ಕಲಬೆರಕೆ!
〰〰〰〰
ರಾಜಕೀಯದಲ್ಲಿ
ಯಾರೂ ಶತ್ರುವಲ್ಲ
ಯಾರೂ ಮಿತ್ರರಲ್ಲ!

ನಿನ್ನೆ ಕೈ
ಇಂದು ಕಮಲ
ನಾಳೆ ಪೊರಕೆ!

ರಾಜಕಾರಣಿಯ
ರಕ್ತದ ಗುಂಪೇ
ಕಲಬೆರಕೆ!!.

✍🏻ಶಾಂತಾರಾಮ್ ಶೆಟ್ಟಿ.

ಪ್ರೀತಿ ಸುಮ!🌷

ಪ್ರೀತಿ ಸುಮ!🌷
➖➖➖➖➖💞
ಪ್ರೀತಿಗೆ
ಪ್ರೀತಿ ಮೇಲಿರುವ
ನಂಬಿಕೆಯ ನಂಬಿ
ಅಭಿನಂದಿಸಲು
ಆ ಮರ
ಮೈ ತುಂಬಾ
ಹೂವು ಅರಳಿಸಿದ್ದು!

ಪ್ರೀತಿ ಸುಮ
ಸದಾ
ಘಮ ಘಮ !!

✍🏻ಶಾಂತಾರಾಮ್ ಶೆಟ್ಟಿ.
➖➖➖➖🍁🍃

ಓದುಗ!

ಓದುಗ!
===========
ಎಂತೆಂಥಹ
ಪ್ರೇಮಿಗಳ
ಪ್ರೇಮಕಾವ್ಯಗಳಿಗೆ
ಕಣ್ಣಾಗಿಲ್ಲ
ಕಿವಿಯಾಗಿಲ್ಲ
ಆ  ಮರ?!

ಓದುಗರ
ಸಾಕ್ಷಿಯಿದ್ದರೆ
ಸಮ್ಮತಿಯಿದ್ದರೆ
ಮಾತ್ರ
ಪ್ರೇಮಕಾವ್ಯಗಳು
ಅಮರ!!.

✍ಶಾಂತಾರಾಮ್ ಶೆಟ್ಟಿ
〰〰〰〰〰〰
(ಮರ ಎಷ್ಟು ಅಮರ ಪ್ರೇಮ  ಕಾವ್ಯಗಳನ್ನು ಓದಿರಬಹುದು?💞)

ಆಂತರ್ಯ!

ಆಂತರ್ಯ!
=========
ಸೋಲಲ್ಲಿರುವ
ಗೆಲುವು
ನೋವಲ್ಲಿರುವ
ನಲಿವು....

ಮೊದಲು
ಅರ್ಥವಾದದ್ದು
ತಾಯಿಗೆ ಮಾತ್ರ !!

✍ಶಾಂತಾರಾಮ್ ಶೆಟ್ಟಿ.
▪▪▪▪▪▪
(ತಾಯಿಯ ಅಂತರಾಳ ಮುಳುಗಲಾರದಷ್ಟು  ಆಳ!).

ಬಂಧನ!

ಬಂಧನ!
〰〰〰
ಮದುವೆಗೆ
ಮೊದಲು
ಹೇಳಿದ್ದ....

ನಿನ್ನನ್ನು
ಗಿಣಿ ತರ
ನೋಡ್ಕೋತೇನೆ!

ಮಾತಿನಂತೆ
ಈಗ
ಪಂಜರದಲ್ಲಿಟ್ಟಿದ್ದಾನೆ!.

✍ ಶಾಂತಾರಾಮ್ ಶೆಟ್ಟಿ
〰〰〰〰〰

ಉದ್ಭವ!

ಉದ್ಭವ!
〰〰〰〰💦
ನಿಮ್ಮಿಷ್ಟಕ್ಕೆ
ಕವಿತೆ
ಹುಟ್ಟುವುದಿಲ್ಲ.....!

ಒಮ್ಮೊಮ್ಮೆ
ಭಾವದುದ್ಭವ
ಮತ್ತೊಮ್ಮೆ
ಭಾವದಭಾವ !

ತನ್ನಷ್ಟಕ್ಕೇ
ತನ್ನಿಷ್ಟಕ್ಕೇ
ಆವಿರ್ಭಾವ
ಕವಿತೆಯ
ಸ್ವಭಾವ !

✍🏽ಶಾಂತಾರಾಮ್ ಶೆಟ್ಟಿ

ತಿರುವು!

ತಿರುವು!
〰〰〰〰
ಬಿಡುಗಡೆಯ
ನಂತರವಾದರೂ
ಬುದ್ಧಿ ಬಂದೀತು

ಇನ್ನಾದರೂ
ಸುಳ್ಳು
ಸತ್ಯ ಹೇಳಬಹುದು
ಎಂದು
ಜನ ನಂಬಿದ್ದರು..!

ಸುಳ್ಳು ಮಾತ್ರ
ಲೋಕಾಯುಕ್ತಕ್ಕೆ
ಸಿಕ್ಕಿ ಬಿದ್ದು
ಜಾಮೀನಿನ ಮೇಲೆ
ಹೊರಬಂದ
ಕಳ್ಳ
ರಾಜಕಾರಣಿಯಂತೆ...

ನನ್ನ ಏಳಿಗೆ
ಸಹಿಸದೆ
ಸುಳ್ಳು ಹೇಳಿದ
ಸತ್ಯ
ಎಂದು 
ಆರೋಪಿಸಿತು!!

✍ಶಾಂತಾರಾಮ್ ಶೆಟ್ಟಿ
〰〰〰〰〰〰
(ರಸ್ತೆ ಅಂದ್ಮೆಲೆ ತಿರುವು ಇರಲೇಬೇಕು!)😃🙏

ಬೇಡಿಕೆ!

ಬೇಡಿಕೆ!
〰〰〰🙏

ಹಾಲಾದರೂ
ಹಾಕು
ನೀರಾದರೂ
ಹಾಕು
ಎಂದ ಭಕ್ತ

ದೇವರೆದುರು
ಹಿಡಿದದ್ದು
ಹಾಲಿನ ಪಾತ್ರೇನೇ!!

✍ಶಾಂತಾರಾಮ್ ಶೆಟ್ಟಿ.
〰〰〰〰〰〰

(ಪಾತ್ರೆ ನೋಡಿಯಾದರೂ ಹಾಲು ಹಾಕಲಿ ಎಂದು!!)😄

ಸಂಶಯ!

ಸಂಶಯ!
➖➖➖➖👀
ಮನೆಯ
ಸಮಾರಂಭದಲ್ಲಿ
ಬಂಧುಗಳು ಇರುವಲ್ಲಿ
ಖಜಾನೆಗೆ
ಬೀಗ ಹಾಕಿದ್ದು
ಕಳ್ಳರಿದ್ದಾರೆ ಎಂದಲ್ಲ...!

ಸಂಬಂಧ
ಮತ್ತು
ನಂಬಿಕೆಯನ್ನು
ನಮ್ಮೊಳಗೇ
ಉಳಿಸಿಕೊಳ್ಳುವ
ಅಲ್ಪ ಪ್ರಯತ್ನ!!

✍🏽ಶಾಂತಾರಾಮ್ ಶೆಟ್ಟಿ
( ಸಂಶಯದ ದೃಷ್ಟಿಗೆ ಸಚ್ಚಾರಿತ್ರ್ಯನೂ ಕಳ್ಳನೇ!)

ಮಾನವತೆ!

ಮಾನವತೆ!
〰〰〰🌏🌔🚶🏿

ಮಂಗಳನ ಮೇಲೆ
ಮನುಷ್ಯರಿದ್ದಾರಾ?

ಚಂದ್ರನ ಮೇಲೆ
ಮನುಷ್ಯರಿದ್ದಾರಾ?

ಎನ್ನೋ
ಜ್ಞಾನಿಗಳ ಜಿಜ್ಞಾಸೆಯ
ನಡುವೆ.....,

ಅಜ್ಞಾನಿ ಬಡ
ಬೋರನಿಗೂ
ಒಂದು
ಪ್ರಶ್ನೆಯಿದೆ!


ಭೂಮಿಯ
ಮೇಲೂ
ಮನುಷ್ಯರಿದ್ದಾರಾ?

✍ ಶಾಂತಾರಾಮ್ ಶೆಟ್ಟಿ.
〰〰〰🌏🌔🚶🏿

ಅಭಿವೃದ್ಧಿ!

ಅಭಿವೃದ್ಧಿ!
〰〰〰〰🐸

ಹೆಂಡತಿ ಮಕ್ಕಳು
ಜೊತೆಯಲ್ಲಿ
ಮುದಿ ಅಪ್ಪನ ಗುಟುರು
ಜಗುಲಿಯಲ್ಲಿ ಹಾಡುತ್ತಾ
ಹೂ ಕಟ್ಟುವ ಅಮ್ಮ!

ಹಳ್ಳಿ
ಬಾವಿಯೊಳಗಿನ
ಕಪ್ಪೆಯದ್ದು
ಸುಂದರ ಸಮೃದ್ಧ ಸಂಸಾರ.....,

ಬಾವಿ ಮೇಲೆ
ಏರಿ
ಹಾರಿ
ಅಮೇರಿಕಾಕ್ಕೆ ಹೋದ
ಕಪ್ಪೆಗೆ
ಅಪ್ಪನ ಶ್ರಾದ್ಧಕ್ಕೂ
ಬರಲಾಗಲಿಲ್ಲ!!

✍🏽ಶಾಂತಾರಾಮ್ ಶೆಟ್ಟಿ.
〰〰〰〰〰🐸
(ಮನಸ್ಸನ್ನು ಕಲ್ಲು ಮಾಡಿಸುವ software ಕೂಡಾ ಇದೆಯಂತೆ!)

ನಾನಲ್ಲ!

ನಾನಲ್ಲ!
〰〰〰〰
ನನ್ನನ್ನು ನಾನೇ
'ನಾನು'
ಎಂದು
ನಾನಾಗಿ ಹೋಗಿ
ಪರಿಚಯಿಸಿದರೂ

ಆಧ್ಯಾತ್ಮದಲ್ಲಿ
'ನಾನು'
ಅಹಂ ಭಾವದ
ಭಾವವೆಂದರು
ವೇದಾಂತಿಗಳು!.

✍ಶಾಂತಾರಾಮ್ ಶೆಟ್ಟಿ
〰〰〰〰〰〰
( "ನಾನು" ಮೂಲದಲ್ಲೇ  ಉತ್ತಮ ಪುರುಷ!ಭಾವದ ವ್ಯತ್ಯಾಸವಿರುವುದು tone ನಲ್ಲಿ!).

ಸಂಪತ್ತು!

ಸಂಪತ್ತು!
〰〰〰🐟
ಜೀವಮಾನವಿಡೀ
ಅಪ್ಪ ದುಡಿದಿಟ್ಟದ್ದು
ಏಳು ಸಾವಿರ ಕೋಟಿ!

ಏಳು
ಜನ್ಮಕ್ಕೆ
ಕೂತುಣ್ಣುವಷ್ಟು!

ಸದ್ಗತಿಗೆ
ಸಂಗಮದಲ್ಲಿ
ಬೂದಿ ನೀರಲ್ಲಿ ಬಿಟ್ಟಾಗ.....
ಮೀನುಗಳು
ನಕ್ಕಿದ್ದೇ ನಕ್ಕಿದ್ದು!

ಒಂದೇ ಕ್ಷಣ
ಅಪ್ಪ ಮಾಯ!

✍🏽ಶಾಂತಾರಾಮ್ ಶೆಟ್ಟಿ.
〰〰〰〰〰🐟

ಹೇಳಿಕೆ!

ಹೇಳಿಕೆ!
=======
ಹಾರಿ ಹಾರಿ
ದ್ರಾಕ್ಷಿ ಹುಳಿ
ಎಂದಿದ್ದ
ನರಿ
ನಿನ್ನೆ ಹೇಳಿಕೆ
ಬದಲಿಸಿತು!

ನನ್ನ ಜನರು ತಿನ್ನಲಿ
ಎಂದು
ನಾ ತ್ಯಾಗ ಮಾಡಿದೆ!

ನರಿ
ಮೊನ್ನೆ ಮೊನ್ನೆ
ರಾಜಕೀಯಕ್ಕೆ
ಸೇರಿದೆ!

✍ಶಾಂತಾರಾಮ್ ಶೆಟ್ಟಿ

ಹುತ್ತ!

ಹುತ್ತ!
➖➖➖🐍
ಗೆದ್ದಲಿನ
ಮನೆಯಲ್ಲಿ
ಹಾವಿದೆ !

ಗೆದ್ದಲೇ
ಕಾಣ್ತಾ ಇಲ್ಲ.....

ಹಾವಿನ
ಸುತ್ತ
ಅನುಮಾನದ
ಹುತ್ತ!.

✍🏽ಶಾಂತಾರಾಮ್ ಶೆಟ್ಟಿ.
〰〰〰〰〰〰🐍

ಸಮಾನರು!

ಸಮಾನರು!
〰〰〰〰
ಸಮಾನತೆ
ಮತ್ತು
ಸಾಮಾಜಿಕ ನ್ಯಾಯ
ಚರ್ಚಾಗೋಷ್ಠಿಯ
ಮಂದಿನ ಸಾಲಿನ
ಕುರ್ಚಿಗಳು
ವಿಐಪಿಗಳಿಗೆ !

ಬಡ
ಬೋರೇ ಗೌಡ
ನೀ
ಹಿಂದಕ್ಕೋಗು....,

ದೊಡ್ಡವರ
ದಾರಿಗಡ್ಡ
ಬರಬಾರದು!

✒ಶಾಂತಾರಾಮ್ ಶೆಟ್ಟಿ.
➖➖➖➖➖➖

ಸಿಗ್ನಲ್ ಕವಿತೆಗಳು!

ಸಿಗ್ನಲ್ ಕವಿತೆಗಳು!
🚦🚥🚥🚥🚥🚥
೧.
ಆ ಚೆಲುವೆಯ
ನಾ
ದಿಟ್ಟಿಸುತ್ತಿದ್ದರೆ
ಸಿಗ್ನಲ್ಗೂ
ಹೊಟ್ಟೆ ಉರಿ
ಕಣ್ಣು ಕೆಂಪು!❤

೨.
ಸಣ್ಣ ಟಿವಿಎಸ್
ಹೆಂಡತಿ
ಇಬ್ಬರು ಮಕ್ಕಳು
ಬಡವನ ಬದುಕು
ಸಾಗುತ್ತಿದೆ
ನಿಧಾನ....
ಎಲ್ಲೋ-ಎಲ್ಲೆಲ್ಲೋ!💛


ಯಾವತ್ತೂ
ಮುಖ
ನೋಡದವಳು
ಇವತ್ತು ನಕ್ಕಳು
ಅಷ್ಷೇ ಸಾಕು
ಪ್ರೀತಿಗದೇ
ಗ್ರೀನ್ ಸಿಗ್ನಲ್ಲು!💚

✍ಶಾಂತಾರಾಮ್ ಶೆಟ್ಟಿ
🚥🚥🚥🚥🚥🚦

ಅವಸರ ಪುರುಷ!
➖➖➖➖➖
ಸಿಗ್ನಲ್
ಮುಗಿಯುತ್ತಿದ್ದಂತೆ
ಅವನದು
ಶರವೇಗ..

ಮುಂದಿನ
ಸಿಗ್ನಲ್ ನಲ್ಲಿ
ಮತ್ತೆ ಸಿಕ್ಕ
ಮತ್ತೆ ನಕ್ಕ !!😃
〰〰〰〰〰▪

ಶಬ್ದ!

ಶಬ್ದ!
〰〰〰〰💥🔥
ಕನ್ನಡದಲ್ಲಿ
ಪಟಾಕಿ
ಅನ್ನೋದು ಒಂದು ಶಬ್ದ
ಹೆಂಡತಿ
ಅನ್ನೋದೂ ಒಂದು ಶಬ್ದ.

ಆದರೂ
ಹೆಂಡತಿ ಮಾಡೋಷ್ಟು
ಶಬ್ದ
ಪಟಾಕಿ ಮಾಡ್ತಿಲ್ಲ !!.

✍ಶಾಂತಾರಾಮ್ ಶೆಟ್ಟಿ.
〰〰〰〰🔥💥
(Sound Engineer ಗಳಿಗೆ ಇದು ಇಂದಿಗೂ ಒಂದು ಸವಾಲು...😄)

ಕೋಣಗಳು!

ಕೋಣಗಳು!
➖➖➖➖🐃
ನಮ್ಮ
ಗ್ರಾಮೀಣ ಕ್ರೀಡೆಯ
ಅಸ್ತಿತ್ವಕ್ಕೇ
ಕಾಟ
ಕೊಡುವ
PETA....!

ಕಂಬಳದಲ್ಲಿ
ಹಿಂಸೆಯಿಲ್ಲ
ಅಂದರೂ
ಅರ್ಥವಾಗದಷ್ಟು


ಕೋಣಗಳು !!

✍🏽ಶಾಂತಾರಾಮ್ ಶೆಟ್ಟಿ.
〰〰〰〰〰🐃

ಬೆತ್ತಲೆ ಜಗತ್ತು!

ಬೆತ್ತಲೆ ಜಗತ್ತು!
➖➖➖➖➖🙈
ಜಗತ್ತು
ನಾವಂದುಕೊಂಡಂತೆ
ಇಲ್ಲ....
ಎಲ್ಲಾ ಬೊಗಳೆ !

ಖಾದಿಯೊಳಗೆ
ಗಾಂಧಿ
ಕಾವಿಯೊಳಗೆ
ವಿವೇಕಾನಂದರು
ಇರಲೇ
ಬೇಕಂತೇನೂ ಇಲ್ಲ!

ಬಟ್ಟೆಯೊಳಗೆ
ಎಲ್ಲರೂ
ಬೆತ್ತಲೆ !!

✒ಶಾಂತಾರಾಮ್ ಶೆಟ್ಟಿ.
➖➖➖➖➖➖

ಕಣ್ಣೀರು..💧

ಕಣ್ಣೀರು..💧
➖➖➖➖

ಒಡಲೊಳಗೆ
ಬೆಂಕಿ
ಬಿದ್ದಿರಬೇಕು...

ಕಣ್ಣೀರೂ
ಬಿಸಿಯಾಗಿದೆ !


ನೋವು
ಸಾಗರದಷ್ಟಿರಬೇಕು

ಹನಿ ಹನಿಯೂ
ಉಪ್ಪಾಗಿದೆ !!

✍ಶಾಂತಾರಾಮ್ ಶೆಟ್ಟಿ
➖➖➖➖👁💧

ಅಸಹ್ಯ!

ಅಸಹ್ಯ!
======
ಭ್ರಷ್ಟನ
ವೇದಿಕೆ ಮೇಲೆ
ಕುಳ್ಳಿರಿಸಿ
ಎಲ್ಲಾ
ಕೊಳಕು-ಹುಳುಕು
ಮುಚ್ಚಿಟ್ಟು
ಕೈ ನೋಯುವಷ್ಟು
ಚಪ್ಪಾಳೆ ತಟ್ಟಿ
ಹೊಗಳಿದರು....‌
ಹೊಗಳಿದರು...‌.!

ಅಸಹ್ಯವೆನಿಸಿತೇನೋ
ವೇದಿಕೆಗೆ
ನಡುಭಾಗದಲ್ಲೇ
ಮುರಿದು ಬಿತ್ತು.!!.

✍ ಶಾಂತಾರಾಮ್ ಶೆಟ್ಟಿ.

ಪಥ!

ಪಥ!
➖➖🚶🏿

ದಿನಾ
ತಿಂಗಳು
ಸತ್ಸಂಗ
ಮಹಾಪುರುಷರ
ಪ್ರವಚನಗಳೇ
ಬೇಕೆಂದೇನೂ ಇಲ್ಲ..
ಜನ ಮನ
ಪರಿವರ್ತಿಸಲು
ಜೀವನದಲ್ಲಿ
ದಾರಿ ಬದಲಿಸಲು..

ಬರೀ
ಐನೂರು
ರೂಪಾಯಿ
ಸಾಲ ಕೊಡಿ
ಆಮೇಲ್ ನೋಡಿ!!

✍ಶಾಂತಾರಾಮ್ ಶೆಟ್ಟಿ
➖➖➖➖➖🚶🏿
( ನಿಮ್ ಮನೆ ಕಡೆ ದಾರಿ ತುಳಿದರೆ ಒಂದು miss call ಕೊಡಿ).

ಕುರುಡು ಪ್ರೇಮ!

ಕುರುಡು ಪ್ರೇಮ!
➖➖➖➖👁

ಇಲ್ಲ
ಮಾತಾಡೇ ಇಲ್ಲ  !


ಪ್ರೇಮಿಗಳಾಗಿದ್ದಾಗ
ಬರೀ
ಅವಳ
ಕಣ್ಣಂಚ ಮಿಂಚೇ
ಮಾತಾಗಿ
ಮಾತಾಗಿ....!

ಮದುವೆಯಾದ
ಮೇಲೇನೇ
ಗೊತ್ತಾಗಿದ್ದು
ಆಕೆ.....







ಮೂಗಿ!!.

✍ ಶಾಂತಾರಾಮ್ ಶೆಟ್ಟಿ.

(ಕಣ್ಣಂಚಿನ ಆ ಮಾತಲ್ಲಿ...
ಏನಿತ್ತೋ !)😄

ಸಾ(ವಯ)ವ?!

ಸಾ(ವಯ)ವ?!
〰〰〰〰

ರೈತನ
ಹೊಲದ ತುಂಬಾ
ಆಗೆಲ್ಲಾ
ಮಣ್ಣು ಹುಲ್ಲು
ಕಲ್ಲು...

ಈಗ
ಬರೇ ಕೆಮಿಕಲ್ಲು !!

✍ಶಾಂತಾರಾಮ್ ಶೆಟ್ಟಿ.