ಬುಧವಾರ, ನವೆಂಬರ್ 23, 2016

ಲೀಕೇಶ್ವರ =======

ಲೀಕೇಶ್ವರ
=======
ಕರ್ನಾಟಕದಲ್ಲಿ
ಕೆಮಿಸ್ಟ್ರಿ ಮಿಸ್ಟ್ರಿ
ಮಾತ್ರ ಅಲ್ಲ
ಎಲ್ಲಾ ಪೇಪರ್
ಲೀಕಾಗಿದೆಯಂತೆ...

ಲೀಕಾಗಿದ್ದು
ಲೀಕಾಗದಿರುತಿದ್ರೆ
ಲೀಕಾಗಿದ್ದದ್ದೂ
ಲೀಕಾಗ್ತಿರಲಿಲ್ಲ
ಲೀಕಾಗಿಯೂ
ಲೀಕಾಗದ
ಇತರ ಪೇಪರ್ ಗಳಂತೆ
ಲೋಕೇಶ್ವರ!.

          ✍🏾ಶಾಂತಾರಾಮ್ ಶೆಟ್ಟಿ.                        

ಕವಿ

ಕವಿ
=====

ಬತ್ತಿದ
ಬಾವಿಯಲ್ಲೂ
ಭಾವದ
ಸೆಲೆ
ಹುಡುಕುವ
ಭಾವ ಜೀವಿ !.


✍🏾ಶಾಂತಾರಾಮ್ ಶೆಟ್ಟಿ.
     💢💢💢💢💢

ಜನ-ಜೀವನ!!

ಜನ-ಜೀವನ!!
===========

ಇರುವುದೆಲ್ಲ
ಇದ್ದಕ್ಕಿದ್ದಂತೆ
ಇಲ್ಲವಾದರೆ
ಇದ್ದೇನು?!

ಮನೆ ಮಠ
ಹಣ ಹಠ
ಎಲ್ಲವೂ ಇದ್ದಾಗ
ಹೆಂಡತಿ ಮಕ್ಕಳು
ಜನ-ಗಣ
ಎಲ್ಲಾ ಗೆದ್ದಾಗ !

ಇಲ್ಲದ ದಿನ
ಉಸಿರಿದ್ದ ಹೆಣ
ನಾಯಿ ಮೂಸಿತು!

ಬಂಧು-ಜನ
ವೈಕುಂಟದ ದಿನ
ಶ್ರಾದ್ಧದ ಭೋಜನ
ಯಾವತ್ತೆಂದು?
ಹೇಗಿರತ್ತೆಂದು?
ಲೆಕ್ಕ ಹಾಕಿತು!!.

✍🏾ಶಾಂತಾರಾಮ್ ಶೆಟ್ಟಿ.
➰➰➰➰➰➰➰

ನಾನ್ಯಾರು?

ನಾನ್ಯಾರು?
========

ಜೋತಿಷಿಯ
ಮಾತಿನಂತೆ
ಯಶಸ್ಸಿಗೆ
ಹೆಸರು ಬದಲಾಯಿಸಿದ್ದು.....

ಆದರೆ
ಹೆಸರೇಳಿದಾಗ
ಎಲ್ಲಾರೂ
ಅಪ್ಪನ ಹೆಸರೂ
ಕೇಳುತ್ತಾರಲ್ಲ....?

ಬದಲಾದದ್ದು
ಹೆಸರು ಮಾತ್ರ....
ಜನ್ಮ ಕುಂಡಲಿಯಲ್ಲ!

ಇಂದಿಗೂ
ಹಿಂದೆಗೂ
ಅಪ್ಪ....
ಅವನೇ...!
ನಡೀಬೇಕಾದ್ದು
ಅವನಿಟ್ಟ
ದಾರೀನೇ!!.

✍🏾ಶಾಂತಾರಾಮ್ ಶೆಟ್ಟಿ
➰➰➰➰➰➰

ಮೆಮೊರಿ!

ಮೆಮೊರಿ!
========

ನಮ್ಮಜ್ಜಿಗೆ
ಈಗಲೂ
ಅದೆಂತಹಾ
ನೆನಪಿನ ಶಕ್ತಿ?

ನಮ್ಮದೋ.....
ದೇವರೇ ಕಾಪಾಡು !

ಸಾಲ್ತಾ ಇಲ್ಲ
32 ಜಿಬಿ
ಮೆಮೋರಿ ಕಾರ್ಡು !!

✍🏾ಶಾಂತಾರಾಮ್ ಶೆಟ್ಟಿ
➰➰➰➰➰➰➰                        

ಸ್ಥಿತಿ!!

ಸ್ಥಿತಿ!!
➖➖➖
ನ್ಯಾಯಾಧೀಶರಿಗೇ
ಲಂಚ ಕೊಟ್ಟು
ಗೆದ್ದ
ಸುಳ್ಳು
ಸತ್ಯದ
ಹೆಗಲ ಮೇಲೇರಿ
ಕುಳಿತು
ಕೈಎತ್ತಿ ಮುಗಿದು
ಸತ್ಯಮೇವ ಜಯತೆ
ಎಂದು
ಬೀಗಿತು!!

ಬೀದಿಯ
ಕೊನೆಯಲ್ಲಿ
ತಂಬೂರಿ
ಹಿಡಿದ
ದಾಸಯ್ಯ
ಹಾಡಿದರು
ಸತ್ಯವಂತರಿಗಿದು
ಕಾಲವಲ್ಲ!

ನಾಯಿ
ಅಟ್ಟಿಸಿಕೊಂಡು
ಬೊಗಳಿತು!!
😕😕
✍🏾:ಶಾಂತಾರಾಮ್ ಶೆಟ್ಟಿ.
     🔘🔘🔘🔘🔘

ನಿಗೂಢ!!

ನಿಗೂಢ!!

➖➖➖
ದೀಪಾವಳಿಯ
ರಾಕೆಟ್
ಕೂಡಾ
ಹೆಂಡತಿಯಂತೆಯೇ....

ಹಠಮಾರಿ!

ಇಟ್ಟ ಗುರಿ
ನೆಟ್ಟ ನೇರ...
ಯೋಚಿಸಿದಂತೆ
ಇರುವುದೇ ಇಲ್ಲ!

ಅದಕ್ಕೆ
ಅದರದ್ದೇ
ದಾರಿ !!
😜😀
✍🏾:ಶಾಂತಾರಾಮ್ ಶೆಟ್ಟಿ.

ಶನಿವಾರ, ನವೆಂಬರ್ 19, 2016

ಸ್ಥಿತಿ!!

ಸ್ಥಿತಿ!!
➖➖➖
ನ್ಯಾಯಾಧೀಶರಿಗೇ
ಲಂಚ ಕೊಟ್ಟು
ಗೆದ್ದ
ಸುಳ್ಳು
ಸತ್ಯದ
ಹೆಗಲ ಮೇಲೇರಿ
ಕುಳಿತು
ಕೈಎತ್ತಿ ಮುಗಿದು
ಸತ್ಯಮೇವ ಜಯತೆ
ಎಂದು
ಬೀಗಿತು!!

ಬೀದಿಯ
ಕೊನೆಯಲ್ಲಿ
ತಂಬೂರಿ
ಹಿಡಿದ
ದಾಸಯ್ಯ
ಹಾಡಿದರು
ಸತ್ಯವಂತರಿಗಿದು
ಕಾಲವಲ್ಲ!

ನಾಯಿ
ಅಟ್ಟಿಸಿಕೊಂಡು
ಬೊಗಳಿತು!!
😕😕
✍🏾:ಶಾಂತಾರಾಮ್ ಶೆಟ್ಟಿ.
     🔘🔘🔘🔘🔘⁠⁠⁠⁠

ತಾ-ಕತ್ತು❗

ತಾ-ಕತ್ತು❗
=======

ಪಾಪ
ಅವಳಿಗೆ
ವರ ಮಾಲೆ
ಹಾಕಲು
ಕಷ್ಟವಾಗುತ್ತಲ್ಲಾ
ಅಂತನಿಸಿ
ಗಂಡು
ಅಂದು
ಕತ್ತು ಬಾಗಿಸಿದ !

ಅಷ್ಟೇಯಾ....

ಈವತ್ತಿಗೂ
ಕತ್ತು
ಎತ್ತಲಾಗುತ್ತಿಲ್ಲ !
😀

✍🏾..ಶಾಂತಾರಾಂ ಶೆಟ್ಟಿ
      ❣❣❣❣❣
ಒಂದು ಕಾಲವಿತ್ತು ....


ನಾವು ಚಿಕ್ಕವರಾಗಿದ್ದಾಗ ಹಳ್ಳಿಯ ಬದುಕಲ್ಲಿ ಪೇಟೆಗೆ ಹೋಗಿ ಅಂಗಡಿಯಲ್ಲಿ ತರುವ ಮನೆಗೆ ಬೇಕಾದ ಸಾಮಾನು ಪದಾರ್ಥಗಳ ಪಟ್ಟಿ ಅಷ್ಟೇನೂ ದೊಡ್ಡದಿರುತ್ತಿರಲಿಲ್ಲ. ಹಳ್ಳಿಯ ಬದುಕು ಸ್ವಾವಲಂಬಿ ಬದುಕು. ಕುಡಿಯುವ ನೀರಿಗೆ ತಮ್ಮದೇ ಭಾವಿ , ಕೆರೆ ಕಟ್ಟೆ , ತರಕಾರಿಗೆ ಮನೆ ಹಿತ್ಲು , ಊಟಕ್ಕೆ ಭತ್ತ ರಾಗಿ ಬೆಳೆಯುವ ಗದ್ದೆಗಳು, ಪೂಜೆಗೆ ತೆಂಗಿನಕಾಯಿ -ಬಾಳೆ -ಎಳೆನೀರು-ಹೂವುಗಳು, ಧಾನ್ಯಕ್ಕೆ ಹೆಸರು ಹುರುಳಿ ಉದ್ದು, ಚಾ ಕಾಫಿಗೆ ಹಟ್ಟಿಯಲ್ಲಿದ್ದ ಗಂಗೆ-ಗೌರಿ ಹೀಗೆ ಎಲ್ಲಾನೂ ಮನೆ ಪರಿಸರದಲ್ಲೇ ದೊರಕಿಸಿಕೊಳ್ಳುತ್ತಿದ್ದುದರಿಂದ ಪೇಟೆಯ ಅಥವಾ ಇತರರ ಅವಲಂಬನೆ ತೀರಾ ಕಡಿಮೆ ... ಹೆಚ್ಚೆoದರೆ ಸಕ್ಕರೆ ಮೆಣಸು ಬೆಲ್ಲ ಉಪ್ಪು ಸೋಪು ಇಂತಹ ವಸ್ತುಗಳಿಗೆ ಮಾತ್ರ ಪೇಟೆಗೆ ಹೋಗುವ ಪ್ರಮೇಯ ಇತ್ತು ! ಅವಲಂಬನೆ ಕಡಿಮೆ ಆದಷ್ಟು ಭಿನ್ನಾಭಿಪ್ರಾಯಗಳು , ವಾದ- ವಿವಾದ,ತಿಕ್ಕಾಟಗಳಿಗೆ ಅವಕಾಶಗಳೂ ಕಡಿಮೆ ... ಆದರೆ ಬರ್ತಾ ಬರ್ತಾ ನಾವು ದುಡ್ಡಿನ ಸಂಪಾದನೆಯನ್ನು ಐಶ್ವರ್ಯ- ಶ್ರೀಮಂತಿಕೆ- ಅಭಿವೃದ್ಧಿ ಎಂದು ತಿಳಿದಾಗ ನೀರು ನಲ್ಲಿಯಲ್ಲಿ ಬಂತು, ಹಾಲು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಬಂತು, ಅತಿ ಬೆಲೆಯ 30x40 ಚದರ ಮನೆಯಲ್ಲಿ ಹಿತ್ತಿಲೇ ಇಲ್ಲದೆ ಎಲ್ಲದಕ್ಕೂ ಕಾಸು ಕೊಟ್ಟು ಬೇರೆಯವರ ಕೃಪಾಕಟಾಕ್ಷದ ಮೋರೆ ನೋಡುವ ಪ್ರಸಂಗ ಬಂದಾಗ ಉದ್ಭವ ಆದದ್ದೇ ಈ ಕಾವೇರಿಯಂತಹ , ಕಸ ವಿಲೇವಾರಿಯಂತಹ ಪ್ರಸಂಗಗಳು !


ಹಳ್ಳಿಗಳಲ್ಲಿ ಪ್ಲಾಸ್ಟಿಕ್ ಗಾಜು ಇಂತಹ ಕೆಲವೇ ಕೆಲವು ವಸ್ತುಗಳನ್ನು ಹೊರತು ಪಡಿಸಿದರೆ , ಮೊಟ್ಟೆಯ ಹೊರ ಕವಚ , ಹಣ್ಣು - ತರಕಾರಿಗಳ ಸಿಪ್ಪೆ , ಸತ್ತ ಪ್ರಾಣಿಗಳು ಯಾವುದೂ ಕಸವಾಗಿ ಸಮಸ್ಯೆಯಾಗೋದಿಲ್ಲ. ಬದಲಾಗಿ ಉಪಯುಕ್ತ ಗೊಬ್ಬರವಾಗಿ ಮಾರ್ಪಾಡಾಗುತಿತ್ತು . ಆಧುನಿಕ ಸೌಲಭ್ಯ ಜೀವನ ಶೈಲಿಯಲ್ಲಿ ಇವೆಲ್ಲವೂ ಸಮಸ್ಯೆಗಳೇ . ಕಸ ವಿಲೇವಾರಿಗೆ ಬರುವ ಕಾರ್ಪೋರೇಶನ್ ಗಾಡಿ ಎರಡು ದಿನ ಬಂದಿಲ್ಲ ವಾದರೆ ಮನೆ ಕೊಳೆತು ನಾರುವ ಸ್ಮಶಾನ !


ಹಿಂದೆ ತುಂಬಾ ಮಳೆ ಬರ್ತಿತ್ತು- ಈಗ ಹಾಗಿಲ್ಲ ! ಮೊದಲು ಬೇಕಾದಷ್ಟಿತ್ತು-ಈಗಿನ ಸ್ಥಿತಿಗತಿ ಅವರಿಗೆ ಅರ್ಥ ಆಗ್ತಾ ಇಲ್ಲ , ನಮಗೇ ಇಲ್ಲ ಇನ್ನು ಅವ್ರಿಗೆ ಎಲ್ಲಿಂದ ಇಂತಹ ಸೋಗಲಾಡಿತನದ ಮಾನವ ನಿರ್ಮಿತ ಸಮಸ್ಯೆಗಳಿಗೆ ನಾವು ಎಲ್ಲವನ್ನು ಹಿತವಾಗುವಷ್ಟು ನೀಡಿರುವ ಪ್ರಕೃತಿಯನ್ನು ದೂರುವುದು ಎಷ್ಟು ಸರಿ ? ಅದರ ಬದಲಿಗೆ ಹಿಂದೆಗೂ-ಈಗಿಗೂ ಏನು ವ್ಯತ್ಯಾಸವಾಯ್ತು ? ! ಆಗ ಮಳೆ ಬರ್ತಿದ್ರೆ-ಈಗ್ಯಾಕೆ ಬರ್ತಿಲ್ಲ? . ಬದಲಿ ವ್ಯವಸ್ಥೆಗಳೇನು? . ಹೀಗೆ ಆದ್ರೆ ಮುಂದಕ್ಕೇನು? ಹೀಗೆಲ್ಲಾ ಯೋಚನೆ ಮಾಡುವ ಜನಸಂಖ್ಯೆ ಹಾಗೆಯೆ ದಿವ್ಯ ದೂರದರ್ಶಿತ್ವ ಇರುವ ನಾಯಕತ್ವ ಕೊರತೆಯೇ ನಮ್ಮನ್ನು ಈ ಸ್ಥಿತಿಗೆ ತಂದಿಟ್ಟದ್ದು !

ಹಿರಿಯರ ನಂಬಿಕೆಗಳನ್ನೆಲ್ಲ ಮೂಢನಂಬಿಕೆಗಳು ಎಂದು ನಮ್ಮ ಮೂಗಿನ ನೇರಕ್ಕೆ ಸಾರ ಸಗಾಟಾಗಿ ಸಾಗ ಹಾಕುವ ನಾವು ಕನಿಷ್ಠ ನಮ್ಮ ಬುದ್ಧಿವಂತ ನಂಬಿಕೆಗಳನ್ನಾದರೂ ವೈಜ್ಞಾನಿಕವಾಗಿ ಬಲ ಪಡಿಸಲಾಗದೆ ಸೋತು ಸೊರಗಿ ಈಗ ಅಸಾಹಾಯಕರಾಗಿ ಮೈ ಪರಚಿ ಕೊಳ್ಳುವಂತಾಗಿದೆ !

ಕೊರತೆ ಕಾಡಿದಾಗ ಬದಲಿ ವ್ಯವಸ್ಥೆಯನ್ನು ಹುಡುಕಿಕೊಂಡು ಬದುಕಿ ಮೆರೆದ ಪ್ರಾಣಿ ಮಾನವ. ಕೆರೆಗಳ ಪುನರುಜ್ಜೀವನ , ಸೊರಗಿದ ನದಿಗಳ ಜಲ ಜೀವ ಪೂರಣ, ಮಲಿನವಾಗದಂತೆ ಸಂರಕ್ಷಣೆ , ಪೋಲಾಗದಂತೆ ವೈಜ್ಞಾನಿಕ ನಿರ್ವಹಣೆ , ಮಳೆ ನೀರಿನ ಸಾರ್ಥಕ ಸಂರಕ್ಷಣೆ ಇಂತದ್ದನ್ನೆಲ್ಲಾ ಮಾಡಿದ್ದರೆ ನೀರನ್ನು ಹಿಡಿದಿಟ್ಟು ಕೊಳ್ಳುವ ಗುಣವಿರುವ ಮಣ್ಣಿನ ಬಯಲು ಸೀಮೆಗೆ ಕಾವೇರಿಯ ನೀರಿನ ಬಳಕೆಯ ಅಗತ್ಯ ಕನಿಷ್ಠವಾಗುತ್ತಿತ್ತು ! ಆದರೆ ಇದನ್ನೆಲ್ಲಾ ತಲೆಗೆ ತುಂಬಿಸಿಕೊಂಡು ಜೀವ ತೇಯುವ ವಿಶ್ವೇಶ್ವರಯ್ಯ ರನ್ನು ನಾವು ಈಗ ಹುಡುಕುವುದಾದ್ರೂ ಎಲ್ಲಿಂದ ?
ನೀರಿನ ಕೊರತೆಗೆ ಕಾರಣಗಳನ್ನು ಹುಡುಕಿಕೊಂಡು ಒಬ್ಬ ಹಳ್ಳಿಯ ಅವಿದ್ಯಾವಂತ ಪ್ರಗತಿ ಪರ ರೈತ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶವನ್ನು ಸೇರಿಸಿಕೊಂಡು ನೀರು ಇಂಗುವಿಕೆಯನ್ನು ಹೇರಳಗೊಳಿಸಿ ವಿಜ್ಞಾನಿಗಳಿಗೆ ಸವಾಲು ಹಾಕುವ ದೊಡ್ಡ ಬಳ್ಳಾಪುರದ ನಾರಾಯಣ ರೆಡ್ಡಿ ಯವರಲ್ಲಿ ಇರುವ ಇಚ್ಚಾಶಕ್ತಿಯ ಕನಿಷ್ಠ ಒಂದಂಶ ನಮ್ಮ ರಾಜಕೀಯ ನಾಯಕರಲ್ಲಿ ಇದ್ದಿದ್ದರೆ ಇಂದು ನಾವು ತಮಿಳುನಾಡಿಗೆ ''ಇಕ್ಕಳಮ್ಮ ತಗೋ...ಜಾಸ್ತಿನೇ ಇಟ್ಕೋ'' ಅನ್ನುವ ಮೇಲ್ಮಟ್ಟಕ್ಕೆ ಮುಟ್ಟುತ್ತಿದ್ದೆವು !

ವಿದ್ಯೆಯಿಲ್ಲದ ವಿದ್ಯಾಮಂತ್ರಿ , ಗದ್ದೆಗಿಳಿಯದ ಕೃಷಿ ಮಂತ್ರಿ ಇಂತವರಿಂದ ಯಾವ ಘನಂಧಾರಿ ವಿಸ್ಮಯಗಳನ್ನು ಜನ ಸಾಮಾನ್ಯ ತಾನು ನಿರೀಕ್ಷಿಸ ಬಹುದು !

ನಮ್ಮನ್ನು ನಾವು ಬದಲಾಯಿಸಿಕೊಂಡು , ಜೀವನ ಶೈಲಿಯಲ್ಲಿ ಅತಿ ಸೌಲಭ್ಯಗಳನ್ನು ತ್ಯಜಿಸಿ ಪ್ರಾಕೃತಿಕವಾಗಿ ಬದುಕುವುದರಿಂದ ಮೇಲಿನ ಬಹಳಷ್ಟು ಸಮಸ್ಯೆಗಳು 'ಸಮಸ್ಯೆ' ಅನ್ನಿಸದೆಯೇ ಜೀವನ ಸರಳವಾಗುವುದು ಖಂಡಿತ !

ಅದಕ್ಕೆ ಇಚ್ಚಾಶಕ್ತಿ, ಜವಾಬ್ಧಾರಿಯ ನಡೆ ಬೇಕು , ಭಂಡ ಜೀವನದ ಅಭಿಮಾನ ಕಡಿಮೆಯಾಗಬೇಕು !


ಕೊನೆಗೊಂದು ಮಾತು
ನಮ್ಮಲ್ಲಿ ನಂಬಿಕೆಯಿಟ್ಟು ಭವಿಷ್ಯವಿದೆಯೆಂದು ಈ ಸುಂದರ ವಸುಂಧರೆಗೆ ಕಾಲಿಟ್ಟ ನಮ್ಮ ಮುಂದಿನ ಪೀಳಿಗೆಗೆ ನಾವು ಬದುಕುವ ಉತ್ತಮ ವಾತಾವರಣವನ್ನು ಬಿಟ್ಟು ಕೊಟ್ಟು ಹೋಗಲು ಆಗುವುದಿಲ್ಲವೆಂದಾದರೆ ಮಕ್ಕಳನ್ನು ಹುಟ್ಟಿಸುವುದನ್ನು ನಿಲ್ಲಿಸುವುದು ಒಳಿತು !

ನರಕಕ್ಕೆ ದಾರಿ ತೋರಿಸುವ ಪಾಪಕಾರ್ಯವಾದರೂ ತಪ್ಪುತ್ತೆ !!

ಸಮಯವಿದ್ದರೆ ನಾರಾಯಣ ರೆಡ್ಡಿಯವರ ಜೀವ ಸತ್ವದ ನಾಲ್ಕು ಮಾತುಗಳನ್ನಾದರೂ ಕೇಳಿ .....

https://youtu.be/nknxV4IVkVE
ಶಾಂತಾರಾಮ್ ಶೆಟ್ಟಿ

ಬೇಕೂಫ !!

ಬೇಕೂಫ !!
▪▪▪▪

ನ್ಯಾಯ ಕೊಡಿ
ಬಡವನ
ಆರ್ತನಾದ.... !

ನಾಲ್ಕು
ಗೋಡೆಯ
ನಡುವೆ
ಕಣ್ಣಿಗೆ ಕಪ್ಪು ಬಟ್ಟೆ
ಕಟ್ಟಿದ
ನ್ಯಾಯ ದೇವತೆಯ
ತಕ್ಕಡಿಯ
ತೂಗಿ-ಕೂಗಿ
ಕೇಳಿತು !

ಇದ್ದರೆ...,
ಕೊಡಬಹುದಿತ್ತೇನೋ?
ತಕ್ಕಡಿಯೇ
ಖಾಲಿ !
ನ್ಯಾಯ ಎಲ್ಲಿ ?
ಅದು
ಸಿರಿವಂತನ
ಜೇಬಿನಲ್ಲಿ !

ನ್ಯಾಯ
ಕೇಳೋದಕ್ಕೂ
ಅಧಿಕಾರ
ಅಂತಸ್ತು
ಬೇಕಪ್ಪಾ !

ಬಡವನಿಗದು
ಗೊತ್ತಿಲ್ಲ
ಪಾಪ....,

ಬೇಕೂಫ !!

✍🏾ಶಾಂತಾರಾಮ್ ಶೆಟ್ಟಿ.
🔘🔘🔘🔘🔘🔘
[10:01 AM, 9/28/2016] +91 99161 29570: ಕಾಸಿಗ್ ಕಾಸ್ ಗಂಟಾಕಿ
ಹೊಟ್ಟೆಗ್ ಬೆನ್ ನಂಟಾಕಿ
ನಾನು ಒಬ್ಬ ಸೆಟ್ಟಿ
ದುಡ್ಡೈತೆ  ಗಟ್ಟಿ
ಅಂತಂತಿ ಮುನಿಯಾ
ಚೆಂದಾನ ಮುನಿಯಾ?!!

ಹೆಚ್ಚಳತೆ ಕೊಡುವಲ್ಲೆ
ಬಿಡಿಕಾಸು ಬಿಡುವಲ್ವೆ
ನೀನೂ ತಿನ್ವಲ್ಲೆ
ಕೋ ಅಂತ ಅನ್ನಲ್ವೆ
ಚೆಂದಾನ ಮುನಿಯಾ
ನೀನ್ಹೇಳು ಮುನಿಯಾ?!!

ಹಿಂಗೆಲ್ಲಾ ಗಂಟ್ ಮಾಡಿ
ತೈಲ್ ತೈಲಿ ದುಡ್ ಮಾಡಿ
ನೀ ಸತ್ರೆ  ನಿಂಗೆ
ಸುಡುಗಾಡೇ ಕೊನೆಗೆ
ಸಾಸ್ವತವೇ ನೀನು
ಬುಟ್ಟಿಗ್ ಬಿದ್ ಮೀನು!!.

ಸುಮ್ ಸುಮ್ಕೆ
ಒದ್ದಾಡ್ತಿ
ಮೂರ್ ಹೊತ್
ದುಡ್ ಮಾಡ್ತಿ
ಅನ್ಬೋಸದೇ ಸಾಯ್ತಿ
ನಿನ್ಗೇನಕಿ ಪಾಯ್ತಿ
ಬಿಡ್ಕಾಸ್ಗೆ ನಡಗು
ಮಕ್ಕಳ್ಗೆ ಮಡಗು!!

ನಿನ್ ಮಕ್ಲ್ ಜೂಜಾಡಿ
ದುಡ್ನೆಲ್ಲಾ ಪೋಲ್ ಮಾಡಿ
ಪಡ್ಕಾನೆ ಕೆತ್ರೆ
ಸೂಳೆ ಮನೆಗ್ ಒತ್ರೆ
ನಿನ್ಗೇನ್ ಬಂತ್ ಮುನಿಯಾ
ಸತ್ ಮೇಲೆ ಸೂನ್ಯ!!

ಅದ್ರಿಂದ ಕೇಳ್ದೊಂಗೆ
ಹೆಂಡ ಬಿಟ್ ಕೇಳ್ದಂಗೆ
ಯೋಳಿದ್ರೆ ನೋಡು
ಇಲ್ಲಾಂತ್ ಅನ್ಬೇಡ
ನೀನಾಗ್ತಿ ಮುನಿಯಾ
ಜಗದೊಳಗೆ ಮಾನ್ಯ !!.

✍🏾:ಜಿ.ಪಿ.ರಾಜರತ್ನಂ.
🗣🎙: ಮೈಸೂರು_
ಅನಂತಸ್ವಾಮಿ
              🌹🌹🌹                      
[10:01 AM, 9/28/2016] +91 99161 29570: ಜೀವನ್ದೊಳ್ಗೆ ಒಂದು ಹನಿ ಹೆಂಡವನ್ನೂ ಮುಟ್ಟದ,ತಾನು ಓಡಾಡಿದ ದಾರಿಯಲ್ಲಿ ಕುಡುಕ ಸಂಸಾರದ
ಗಂಡನ ನಡೆ ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಿ ತನ್ನನ್ನೇ ಕುಡುಕನನ್ನಾಗಿಸಿ ಮುನಿಯಣ್ಣನನ್ನು ಸಮಾಜವನ್ನಾಗಿಸಿ ಹೆಂಡದ್ ಪದ ಹರಿಸಿದೋರು ಜಿ.ಪಿ.ರಾಜರತ್ನಂ.


ಬಣ್ಣದ ತಗಡಿನ ತುತ್ತೂರಿ ನಾಯಿ ಮರಿ ನಾಯಿಮರಿ ತಿಂಡಿ ಬೇಕೆ?  ಇಂತಹ ಪ್ರಸಿದ್ಧ ಬಾಲ ಪದ್ಯಗಳನ್ನು ಮಕ್ಕಳೆದುರು ಹಾಡಿ ಅವರು ಅದನ್ನು ಸಂತೋಷವಾಗಿ ಆಸ್ವಾದಿಸುತ್ತಾರೆ ಅಂತ ನಿಖರವಾದ ಮೇಲೆಯೇ  ಅದನ್ನು ಅಚ್ಚುಹಾಕಿಸಿ ಅದನ್ನು ತಲೆ ಮೇಲೆ ಹೊತ್ತು ಪುಸ್ತಕ ಮಾರಿ ಜೀವನ ಮಾಡಿದ ಮಗು ಮನಸ್ಸಿನ ಮುದ್ದುಕವಿ ಜಿ.ಪಿ.!!



ಗುಂಡು ಮುಟ್ಟದ ಗುಂಡ್ಲುಪೇಟೆಯ ಈ ಶರೀಫ ಗುಂಡು ಪಂಡಿತ (ಜಿ.ಪಿ.) ರಾಜರತ್ನಂ ಆಗಿ ಪ್ರಸಿದ್ಧಿಯಾದದ್ದು ಅವರು ಹೆಂಡದ ಪದದೊಳಗೆ  ಆಳಕ್ಕೆ ಇಳಿದು ಸಿದ್ದಿಸಿದ ಸಿದ್ದಿಗೆ ಸಿಕ್ಕ ಪುರಸ್ಕಾರ!!.

ಪ್ರಸ್ತುತ ಹಾಡಿನಲ್ಲಿ
ಸಮಾಜದ ಜಿಪುಣ ಜನಾಂಗದ
ಪ್ರತಿನಿಧಿ ಮುನಿಯಣ್ಣನ ಕಾಸು ಕೂಡಿಡುವ ವಿಷಗುಣವನ್ನು "ಚಂದಾನಾss.... ಮುನಿಯಾ?"
ಅಂದು ನಯವಾಗಿ ಲೇವಡಿ ಮಾಡುತ್ತಾ ನಮ್ಮ ಆತ್ಮಸಾಕ್ಷಿಯನ್ನೆ ಪ್ರಶ್ನಿಸುವ ಜಿ.ಪಿ. ದಯೆ-ದಾನದ ಜಗಮಾನ್ಯದ ಬದುಕನ್ನು ಸೂಚ್ಯವಾಗಿ ಎತ್ತಿಡುತ್ತಾರೆ!!.

ಸಾಮಾನ್ಯನ ಬದುಕಿನ ಪಾಡನ್ನು ಹಾಡಿನ ಮೂಲಕ ಜನದೊಳಗೆ-ಮನದೊಳಗೆ ಹೆಂಡದ ರೂಪದಲ್ಲಿ ಸರಾಗವಾಗಿ ಹರಿಯಬಿಡುವ ಜಿ.ಪಿ.ಆರ್.

ಅಷ್ಟಕ್ಕೇ....

ಆಪ್ತರಾಗುತ್ತಾರೆ.....

ಆತ್ಮೀಯರಾಗುತ್ತಾರೆ!!.


ಪ್ರೀತಿ ನಮನದೊಂದಿಗೆ
🙏🌹

ಸಿರಿತನ!

ಸಿರಿತನ!
=======

ದೊರೆಗೂ
ಬಡತನವಿತ್ತು
ಹಸಿದ
ತಿರುಕನಿಗೆ
ಭಿಕ್ಷೆ
ನೀಡಲಿಲ್ಲ!!

ತಿರುಕನಿಗೂ
ಸಿರಿತನವಿತ್ತು
ತಾನೂ ಉಂಡ...
ಮೊದಲ
ತುತ್ತು
ನಾಯಿಗಿತ್ತು !!

…✍🏾ಶಾಂತಾರಾಮ್ ಶೆಟ್ಟಿ
▪▪▪▪▪▪⁠⁠⁠⁠

ತ್ಯಾಗ!.

ತ್ಯಾಗ!.
▪▪▪

ಅಪ್ಪ ಯಾವತ್ತೂ
ಹಾಗೇನೇ...

ಹಣ್ಣು
ನಮಗೆ
ತಿನ್ನಿಸಿ
ಬೀಜ ತಾನು
ತಿನ್ನುತ್ತಿದ್ದ.....!

ಅದಕ್ಕೇ.....

ಕಣ್ಣೆದುರೇ...
ಹೆಮ್ಮರವಾಗಿ
ಬೆಳೆದ !!.

…✍🏾ಶಾಂತಾರಾಮ್ ಶೆಟ್ಟಿ.
=================

Anything can happen over a coffee...!! 🔘🔘🔘🔘🔘

Anything can  happen over a coffee...!!
🔘🔘🔘🔘🔘

ಐದನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ಸುಂದರಣ್ಣನ ಮಗ ರಮೇಶ ಇಂಗ್ಲೀಷಿನಲ್ಲಿ ಯಾವಾಗಲೂ ಫೇಲಾಗುತ್ತಿದ್ದ....!

ಐದನೇ ಕ್ಲಾಸನ್ನು ಮೂರನೇ  ಬಾರಿಯಾದರೂ ಪಾಸು ಮಾಡುತ್ತಾನೆ ಎಂದು ನಂಬಿದ್ದ ಸುಂದರಣ್ಣನಿಗೆ progress card ನಲ್ಲಿ ಈ ಸಾರಿನೂ  ಪ್ರಗತಿ ಕಾಣುವ ಬದಲು ಕೆಂಪು ಗೆರೆ ಕಂಡಾಗ...ಯಾಕೋ ಮಾಸ್ಟ್ರ ಮೇಲೇನೆ
ಸಂಶಯ ಬಂದು ಏನಾದರೂ ವೈಯಕ್ತಿಕ
ದ್ವೇಷದ ಮೇಲಿಂದ ಹೀಗಾಗುತ್ತಿದೆಯೋ ಎಂದು ತಿಳಿಯುವ ಕುತೂಹಲದಿಂದ ಶಾಲೆಯ ಕಡೆಗೆ ನಡೆದರು....!


ಶಾಲೆಯಲ್ಲಿ ಮಾಸ್ಟ್ರ ಜೊತೆ ಸ್ವಲ್ಪ ವಾಗ್ವಾದದ ನಂತರ ಮಾಸ್ಟ್ರು ಹೀಗೊಂದು ಸಲಹೆ ಇತ್ತರು....

ನಾನು ಈ ಬ್ರಹ್ಮನಿಗೆ ನಿಮ್ಮೆದುರೆ ಒಂದು English ಶಬ್ದವನ್ನು ಬರೆಯಲು ಹೇಳುತ್ತೇನೆ...
ಆ ಶಬ್ದದ ಒಂದು ಅಕ್ಷರ(spelling)  ಅವನು ಸರಿಯಾಗಿ ಬರೆದರೆ ಅವನನ್ನು  ಪಾಸು ಮಾಡುತ್ತೇನೆ !!

ಮಾಸ್ಟ್ರ ವ್ಯಂಗ್ಯ ಸಹ್ಯವಾಗದಿದ್ರೂ ಸುಂದರಣ್ಣ ತನ್ನ ಮಗ ಅಷ್ಟು ದಡ್ಡನೇ..?
ಖಂಡಿತಾ ಇರಲಿಕ್ಕಿಲ್ಲ ಎಂದು ಧೈರ್ಯದಿಂದ. , ಹೂಂ...
.ಅಂದರು....

ಮಾಸ್ಟ್ರು Black board ತೋರಿಸಿ

"ಏ ರಮೇಶ ಕಾಫಿ ಇದನ್ನು ಇಂಗ್ಲಿಷ್ನಲ್ಲಿ ಬರಿಯೋ"

 ಅಂದರು....

ಮಗ ಬರೆದ coffee ಓದಿ ಸುಸ್ತಾಗಿ ಸುಂದರಣ್ಣ ಮಗನನ್ನು ಕರೆದು...

ಯಾವುಂಬೆ ಮೂಜಿಕಾಸ್ದಾಯ ಈ ಕಲ್ತ್ ಎನನ್  ಉದ್ಧಾರ ಮಲ್ತಿನ
ಎಲ್ಲೆ Bajaj M 80 ದೆತ್ ಕೊರ್ಪೆ....
ಕಾಂಡೆ ಲಕ್ಕೊಂದು ಮೀನ್ ಮಾರೆರೆ ಪೋ  ನಾಲ್ ಕಾಸಾಂಡಲಾ ಆಪುಂಡು..!😜

ಎಂದು ದಡದಡನೆ ಶಾಲೆಯಿಂದ ಹೊರನಡೆದರು!!.

ಅಷ್ಟಕ್ಕೂ ರಮೇಶ ಒಂದೂ ಅಕ್ಷರವೂ ಇರದೆ ಕಾಫಿ ಯನ್ನು ಇಂಗ್ಲಿಷ್ನಲ್ಲಿ ಬರೆದಿರೋದಾದ್ರೂ ಹ್ಯಾಗೆ ಅನ್ನೋ ಕುತೂಹಲವೇ ತಮ್ಮಂತ ಮಹಾನುಭಾವರಿಗೆ..?..















ಅದು ಹೀಗೆ..










🍮🍮🍮
KAPHY...!

😂😂😂


✍🏾: ಶಾಂತಾರಾಮ್ ಶೆಟ್ಟಿ.
     ▪▪▪▪▪▪

Clean cheatಉ

Clean cheatಉ
➖➖➖➖➖➖

ಈಗೀಗ ಕೋರ್ಟು
ಲೋಕಾಯುಕ್ತ
ಸಿಐಡಿ ಸಿಓಡಿ
ಸಿಬಿಐಗಳೆಲ್ಲಾ
ಒಂಥರಾ
ಧೋಬಿ ಘಾಟು !!

ಕೊಳೆಯಾದವರನ್ನೆಲ್ಲಾ
ಒಂದು ಸಾರಿ
ಅದ್ದಿ
ತೆಗೆದರೆ ಸಾಕು
ಅಂಟಿಕೊಂಡೇ
ಬರುತ್ತೆ
ಕ್ಲೀನ್ ಚೀಟು!!

😉
✍🏾: ಶಾಂತಾರಾಮ್ ಶೆಟ್ಟಿ.
▪▪▪▪▪▪▪

ಕಳ್ಳ!!

ಕಳ್ಳ!!🔴
➖➖➖➖


ಕೋಟಿ
ನುಂಗಿದ್ದು
ತೇಗಿದ್ದು...
ಕೇಸುಗಳೆಲ್ಲಾ
ದೊಡ್ಡ ಕೋರ್ಟಲ್ಲೇ
ರದ್ದು !

ಈಗೆಲ್ಲಾ
ಹಂಗೇ
ತಮ್ಮಾ....!

ಅಡಿಕೆ ಕದ್ದೋನೇ
ಸಿಕ್ಕಿ ಬೀಳೋದು
ಆನೆ ಕದ್ದೋನು
ಮಾತ್ರ....
ಎಲೆಕ್ಷನ್ ಗೆದ್ದು
ಮಂತ್ರಿಯಾಗೋದು !!

ಜನ ಕುರಿಗಳು...
ಮರೀತಾರೆ
ಕಣಾ..!
ಕುರಿ
ಮೇಯಿಸೋನೇ
ತಮ್ಮಾ
ಈಗ
ಜಾಣ !!
✍🏾: ಶಾಂತಾರಾಮ್ ಶೆಟ್ಟಿ.
🔘🔘🔘🔘🔘🔘🔘

ಲೀಲೆ

ಲೀಲೆ
▪▪▪
ಆಟವಾಡಿದ್ದು
ನಾಲಿಗೆ
ಜಾರಿಬಿದ್ದಿದ್ದು
ಮಾತು!

ಪೆಟ್ಟಾದದ್ದು
ನಂಬಿಕೆಗೆ
ನೋವಾಗಿದ್ದು
ಮೃದು
ಹೃದಯಕ್ಕೆ!

ಅದು ಇದು
ಎಲ್ಲಾ
ಬರೆದಿದ್ದು
ಹಣೆಯಲ್ಲಿ !

ಕೊಂಡಿಯಿಂದ
ಬೆಸದು
ಹೊಸೆದವ
ನಗುತಿದ್ದ !!.

✍🏾: ಶಾಂತಾರಾಮ್ ಶೆಟ್ಟಿ
          🔘🔘🔘🔘🔘

ಭಯ!!

ಭಯ!!
➖➖➖➖
ನನಗೆ
ಯಾರ ಭಯವೂ ಇಲ್ಲ
ಎಂದು
ಸುಳ್ಳು
ಸುಳ್ಳು ಹೇಳಿತ್ತು!!

ಭಯವಿತ್ತು,

ಅದಕ್ಕೇ
ಸತ್ಯಾನ
ಬಚ್ಚಿಟ್ಟಿತ್ತು
ಭಯಾನ
ಮುಚ್ಚಿಟ್ಟಿತ್ತು!!

✍🏾: ಶಾಂತಾರಾಮ್ ಶೆಟ್ಟಿ.

ಅಮ್ಮ!.

ಅಮ್ಮ!.
➖➖➖
ಎಂಟು ವರ್ಷದ
ನನಗೆ
ದಿನಾ
ಸತ್ಯ ಹರಿಶ್ಚಂದ್ರನ
ಕತೆ ಹೇಳುತ್ತಿದ್ದ
ಅಮ್ಮ....
ತಾನು ಮಾತ್ರ
ಸುಳ್ಳು ಹೇಳುತ್ತಿದ್ದಳು....!!

ನಾ ಉಂಡೆ...
ನೀ
ಉಣ್ಣು ಮಗಾ!
ಅನ್ನುವಾಗ
ಅಮ್ಮನ
ಖಾಲಿ ಹೊಟ್ಟೆ
ಸುಳ್ಳಿಂದಲೆ
ತುಂಬುತ್ತಿತ್ತು!!
😢
✍🏾: ಶಾಂತಾರಾಮ್ ಶೆಟ್ಟಿ
🔘🔘🔘🔘🔘🔘🔘

ವೈರಾಗ್ಯ

ವೈರಾಗ್ಯ!.⚪
➖➖➖➖

ಅಲ್ಲಮರ
ವಚನ ಓದಿ
ಎಲ್ಲಾ
ಬೇಡವೆಂದವರೂ....

ಆಸ್ತಿ ಹಂಚುವಾಗ
ವಂಶವೃಕ್ಷದಲ್ಲಿ
ನಾವೂ
ಅಪ್ಪನ
ಆಲದ ಮರದ
ಬೇರುಗಳೆಂದರು !.

ವೈರಾಗ್ಯಕ್ಕೂ
ವೈರಾಗ್ಯವಿದೆ !!
😜
✍🏾ಶಾಂತಾರಾಮ್ ಶೆಟ್ಟಿ
▪▪▪▪▪▪▪