ಬುಧವಾರ, ಮೇ 18, 2016

ಬೇಕೂಫ

ನ್ಯಾಯ ಕೊಡಿ
ಬಡವನ
ಆರ್ತನಾದ

ನಾಲ್ಕು
ಗೋಡೆಯ
ನಡುವೆ
ಕಣ್ಣಿಗೆ ಕಪ್ಪು ಬಟ್ಟೆ
ಕಟ್ಟಿದ
ನ್ಯಾಯ ದೇವತೆಯ
ತಕ್ಕಡಿಯ
ತೂಗಿ-ಕೂಗಿ
ಕೇಳಿತು !

ಇದ್ದರೆ
ಕೊಡಬಹುದಿತ್ತೇನೋ?
ತಕ್ಕಡಿಯೇ  ಖಾಲಿ !
ನ್ಯಾಯ ಎಲ್ಲಿ ?
ಸಿರಿವಂತನ  
ಜೇಬಿನಲ್ಲಿ !

ನ್ಯಾಯ ಕೇಳೋದಕ್ಕೂ
ಅಧಿಕಾರ
ಅಂತಸ್ತು
ಬೇಕಪ್ಪಾ !

ಬಡವಗದು  
ಗೊತ್ತಿಲ್ಲ
ಪಾಪ....,
ಬೇಕೂಫ !!

ಸೋಮವಾರ, ಮೇ 16, 2016

ಗಮನ

ಗಮನ 
ಸಾವು 
ಬಂಧನದ ಬಲೆಯಲ್ಲ 
ಇಹದಾಚೆಯ 
ಗಮನ 
ಉಸಿರಾಚೆಗಿನ 
ದಿನದ 
ಅಂತಿಮ ನಮನ !

ಏನಿದೆ ಸಾಯಲು ?
ಅಸಲು 
ಸವಾಲು 
ಇರೋದೇ 
ಬದುಕಲು 
ಬದುಕಿ ಬಾಳಲು  ! 

ಸಾವು 
ಯಾರಿಗಿಲ್ಲ  
ಬದುಕು  ಹಾಗಲ್ಲ  
ಬಲ್ಲವನ ಬಿಟ್ಟು 
ಎಲ್ಲರೊಳಗಿಲ್ಲ !

 ದಿನಾ  
ಹೊಸತನ 
ಸಿರಿತನ ಬಡತನ 
ಸುಖ ಸಮ್ಮಾನ  
ದುಃಖ  ದುಮ್ಮಾನ 
ದುಗುಡ !

 ಬದುಕಲರಿಯದವರಿಗೆ  
ಬದುಕು 
ಸಾವಿಗಿಂತಲೂ 
ನಿಗೂಢ !!