ಬುಧವಾರ, ನವೆಂಬರ್ 22, 2023

abdulla maadumoole.

                                             ತುಳುಕೂಟ ಬೆಂಗಳೂರು (ರಿ)

ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                           ಅಬುಧಾಬಿಯ ಹೆಮ್ಮೆಯ ತುಳುವ  

                                                 ಅಬ್ದುಲ್ಲಾ ಮಾದುಮೂಲೆ 

                                                            ಅವರಿಗೆ  

                                                 ಸುವರ್ಣ ಸನ್ಮಾನ  ಪತ್ರ. 

ಬಂಟವಾಳ ತಾಲೂಕಿನ ಗಡಿನಾಡು ಪ್ರದೇಶದಲ್ಲಿ  ಹುಟ್ಟಿ  ತನ್ನ ಕರ್ಮ ಕ್ಷೇತ್ರವನ್ನು  ಕೊಲ್ಲಿಯ ದೇಶ  ಅಬುಧಾಬಿಗೆ  ವಿಸ್ತರಿಸಿ  ಲೆಕ್ಕ ಪರಿಶೋಧಕರಾಗಿ  ವೃತ್ತಿ ಜೀವನ ಆರಂಭಿಸಿದ  ತಾವು  ಅಮೆರಿಕಾ ಇಂಗ್ಲೆಂಡ್ ನಂತಹ ದೇಶಗಳಲ್ಲಿ  ವಿದ್ಯಾರ್ಜನೆ ಗೈದು ಕೊಲ್ಲಿಯಲ್ಲಿ  ವಿದ್ಯಾಕ್ಷೇತ್ರ , ವಾಣಿಜ್ಯ ಕ್ಷೇತ್ರಗಳಲ್ಲಿ ಸೇವೆಗೈದು  ಹೆಸರಾಗಿರುವಿರಿ . 

 ಅಬುಧಾಬಿ ಇನ್ವೆಸ್ಟ್ಮೆಂಟ್  ಅಥಾರಿಟಿ  , ಇತಿಹಾದ್  ಏರ್ವೇಸ್  ಇಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ದುಡಿದು  ಸಮಾಜದ  ಸಂತೋಷಗಳಿಗೆ,ಸಂಕಷ್ಟಗಳಿಗೆ  ಸದಾ ಸ್ಪಂದಿಸುತ್ತಾ  ಬಂದು ತಮ್ಮನ್ನು ಸಕ್ರಿಯವಾಗಿ ಸಮಾಜ  ಕಾರ್ಯಗಳಲ್ಲಿ ತೊಡಗಿಕೊಂಡವರು . ಈ ಎಲ್ಲಾ ಮಹತ್ಕಾರಣಗಳಿಂದ  ತಮಗೆ ಅರ್ಹವಾಗಿಯೇ  ಕರ್ನಾಟಕ ಸರಕಾರದ  ಜಿಲ್ಲಾ ರಾಜ್ಯೋತ್ಸವ , ಗಡಿನಾಡ ರಾಜ್ಯೋತ್ಸವ , ದುಬೈ ಬ್ಯಾರೀಸ್ ಫೋರಮ್ ನ  ಬ್ಯಾರೀಸ್ ಪರ್ಸನಾಲಿಟಿ  ಆಫ್ ದಿ ಇಯರ್  ಪುರಸ್ಕಾರಗಳು  ಬೆನ್ನತ್ತಿ  ಬಂದಿವೆ  ಎಂದು  ಹೇಳಲು ಸಂತೋಷವಾಗುತ್ತದೆ 

ತುಳು ಭಾಷೆಗೆ , ಸಂಸ್ಥೆಗಳಿಗೆ  ಸದಾ ಆಶ್ರಯದಾತರಾಗಿ ಮುಂಚೂಣಿಯಲ್ಲಿ ನಿಂತಿರುವ ತಮ್ಮನ್ನು ತುಳುಕೂಟ ತನ್ನ ಐವತ್ತರ ಸಂಭ್ರಮ ಬಂಗಾರ್ದ ಪರ್ಬ  ಆಚರಣೆಯ ಸಂದರ್ಭದಲ್ಲಿ ಅದರಪೂರ್ವಕವಾಗಿ ಸ್ಮರಿಸಿಕೊಳ್ಳುತ್ತದೆ . 

 ತಮ್ಮ ಸಾಧನೆ  ಹೀಗೆ  ಮುಂದುವರಿಯಲಿ , ತುಳುನಾಡಿಗೆ , ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಆಸ್ತಿಯಾಗಿರುವ  ತಾವು   ನೂರ್ಕಾಲ ಅರೋಗ್ಯ ಪೂರ್ಣರಾಗಿ ಬಾಳಿ  ನಮಗೆಲ್ಲ  ಆದರ್ಶರಾಗಿರಿ ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ