ಬುಧವಾರ, ನವೆಂಬರ್ 22, 2023

dr.sadananda shetty

                                                        ತುಳುಕೂಟ ಬೆಂಗಳೂರು (ರಿ)

          ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                                       ಶೈಕ್ಷಣಿಕಾ  , ಸಂಘಟನಾ,ಕ್ರೀಡಾ  ಸ್ಪೂರ್ತಿ 

                                                           ಡಾ. ಅತ್ತೂರು   ಸದಾನಂದ ಶೆಟ್ಟಿ 

                                                                          ಅವರಿಗೆ  

                                                             ಸುವರ್ಣ ಸನ್ಮಾನ  ಪತ್ರ.  


 ತುಳುನಾಡಿನ  ಸಂಘಟನಾ ಸ್ಪೂರ್ತಿ , ಕ್ರೀಡಾ ಶಕ್ತಿ , ಶೈಕ್ಷಣಿಕಾ ವಿಶ್ವ ರೂಪಿಯೆಂದೇ  ನಾಮಾಂಕಿತರಾದವರು  ಉಡುಪಿಯ ಅತ್ತೂರು  ಸದಾನಂದ ಶೆಟ್ಟಿ . 

ಉಡುಪಿಯ  ಅಜ್ಜರಕಾಡಿನಲ್ಲಿ   20 ಸೆಪ್ಟೆಂಬರ್ 1941 ರಂದು ಜನಿಸಿದ  ಸದಾನಂದ ಶೆಟ್ಟಿಯವರದ್ದು ಮೊದಲಿಂದಲೂ  ಸಾಹಸಿ  ಪ್ರವೃತ್ತಿಯ ಜೀವನ .  ಜೀವ ವಿಮಾ  ಉದ್ಯೋಗಿಯಾಗಿ  ವೃತ್ತಿ ಆರಂಭಿಸಿ  ಉದ್ಯಮಿಯಾಗಿ ಬದಲಾಗಿ   ಹೋಟೆಲು ಮತ್ತು  ಕ್ಯಾಟರಿಂಗ್  ಕ್ಷೇತ್ರದಲ್ಲಿ  ಅದ್ವೀತಿಯ   ಅಧಿಪತ್ಯ ಸ್ಥಾಪಿಸಿದವರು ತಾವು . 

ಉದ್ಯಮ ಕ್ಷೇತ್ರದ  ಯಶಸ್ಸಿನ ನಂತರ  ತನ್ನ ಕಾರ್ಯಕ್ಷೇತ್ರವನ್ನು  ವಿದ್ಯಾಕ್ಷೇತ್ರದತ್ತ  ವಿಸ್ತರಿಸಿ  ಶ್ರೀದೇವಿ  ಎಜುಕೇಶನ್ ಟ್ರಸ್ಟ್ ಮೂಲಕ  ಹೋಟೆಲ್ ಮ್ಯಾನೇಜುಮೆಂಟ್ , ನರ್ಸಿಂಗ್ , ಇಂಟೀರಿಯರ್ ಡಿಸೈನ್ , ಫ್ಯಾಷನ್ ಡಿಸೈನ್  ಮುಂತಾದ ಕ್ಷೇತ್ರದಲ್ಲಿ  ಸಾವಿರಾರು ಪ್ರತಿಭೆಗಳನ್ನು ಹುಟ್ಟು ಹಾಕಿ ಸಮಾಜಕ್ಕೆ  ಕೊಡುಗೆಯಾಗಿ ಇತ್ತವರು ನೀವು . ಬಂಟರ  ಯಾನೆ ನಾಡವರ ಸಂಘ ದ   ಅಧ್ಯಕ್ಷರಾಗಿ ಜಾಗತಿಕ ಬಂಟ ಸಮ್ಮೇಳನ ನಡೆಸಿ  ಸಂಘಟನಾ ಕೌಶಲ್ಯ ಮೆರೆದವರು .

ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನದ  ಅಧ್ಯಕ್ಷರಾಗಿ  ಹಲವಾರು ಸಮಾಜ ಮುಖಿ ಕಾರ್ಯಗಳನ್ನು  ಕೈಗೊಂಡು  ಜನಾನುರಾಗಿಯಾದವರು .  

ಕ್ರೀಡೆಯನ್ನು  ಅತಿಯಾಗಿ ಪ್ರೀತಿಸುತ್ತಿದ್ದ  ತಾವು ಸ್ವತಃ ಕ್ರೀಡಾಳುವಾಗಿ ಸತತ  ಐವತ್ತು ವರ್ಷಗಳ ಕಾಲ  ಟೆನಿಸ್ ಆಟವನ್ನು  ಆಡಿಕೊಂಡು ಇತರರಿಗೆ ಸ್ಪೂರ್ತಿಯಾದವರು . ಕ್ರೀಡೆಯನ್ನು ನಿತ್ಯ  ಜೀವನದ ಒಂದು ಭಾಗವಾಗಿ ಬೆಳೆಸಿಕೊಳ್ಳುವ ಸಲುವಾಗಿ ಸ್ಪೋರ್ಟ್ಸ್ ಪ್ರಮೋಟರ್ಸ್  ಕ್ಲಬ್ ಮಂಗಳೂರು , ಕಬಡ್ಡಿ ಅಸೋಸಿಯೇಷನ್, ಬ್ಯಾಡ್ಮಿಂಟನ್ , ಬಾಸ್ಕೆಟ್ ಬಾಲ್ , ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಮಂಗಳ ಅಥ್ಲೆಟಿಕ್ಸ್   ಮಂಗಳೂರು  ಸಂಸ್ಥೆಗಳ ಅಧ್ಯಕ್ಷರಾಗಿ  ಅವಿರತ  ದುಡಿದು ಕ್ರೀಡೆಯನ್ನು ಪ್ರಚುರ ಪಡಿಸಿದವರು  . 

1998ರಲ್ಲಿ  ಬ್ಯಾಂಕಾಕ್ ನಲ್ಲಿ ನಡೆದ ಏಷಿಯನ್  ಗೇಮ್ಸ್ ನಲ್ಲಿ  Technical  Observer  ಆಗಿ ಕರ್ನಾಟಕ ಸರಕಾರದಿಂದ  ಆಯ್ಕೆ ಮತ್ತು 2000 ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು  ಕ್ರೀಡಾ ಪ್ರೀತಿಯನ್ನು  ಮೆರೆದವರು . 

ತಮ್ಮ  ಈ  ಎಲ್ಲಾ   ಸಾಧನೆಗಳಿಗೆ   ಮುಕುಟಪ್ರಾಯವಾಗಿ ಶಿವಮೊಗ್ಗ ಕುವೆಂಪು  ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ , 1977ರಲ್ಲಿ ಇಂಡಿಯಾ ಪ್ರಿಯದರ್ಶಿನಿ  ಪುರಸ್ಕಾರ , 1990ರಲ್ಲಿ ಪಂಡಿತ್ ಜವಾಹರ್ಲಾಲ್ ನೆಹರು ಎಕ್ಸಾಲೆನ್ಸಿ ಅವಾರ್ಡ್  ಹೀಗೆ ಹಲವಾರು  ಪುರಸ್ಕಾರಗಳು   ದೊರೆತಿರುವುದು  ನಮಗೆಲ್ಲ  ಹೆಮ್ಮೆಯ ವಿಷಯ 

 ತುಳುಕೂಟ ಬೆಂಗಳೂರು  ತನ್ನ   ಸುವರ್ಣ ಸಂಭ್ರಮದ   ''ಬಂಗಾರ್ದ ಪರ್ಬ''  ಆಚರಣೆಯ ಸಂದರ್ಭದಲ್ಲಿ  ತಮ್ಮನ್ನು ಈ ಸ್ಮರಣೀಯ ವೇದಿಕೆಯಲ್ಲಿ ಸನ್ಮಾನಿಸಲು  ಸಂತೋಷ  ಪಡುತ್ತದೆ. ಶೈಕ್ಷಣಿಕ ,  ಸಾಂಸ್ಕೃತಿಕ  ಕ್ಷೇತ್ರದಲ್ಲಿ  ತಮ್ಮ  ಈ ಸೇವೆ   ಇನ್ನೂ  ಮುಂದುವರಿದು  ತುಳುನಾಡಿಗೆ   ಮತ್ತಷ್ಟು  ಮೆರಗು ತರುವಂತಾಗಲಿ  ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಅಭಿಮಾನ ಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ