ತುಳುಕೂಟ ಬೆಂಗಳೂರು (ರಿ)
ಸುವರ್ಣ ಮಹೋತ್ಸವದ ಸಂದರ್ಭ ತುಳುನಾಡಿನ ಸಾಧಕರಿಗೆ ಗೌರವ ಪೂರ್ವಕ ಸನ್ಮಾನ
ಶ್ರೀ. ದಿವಾಕರ ಅಣ್ಣಯ್ಯ ಪೂಜಾರಿ ಕತಾರ್
ಅವರಿಗೆ
ಸುವರ್ಣ ಸನ್ಮಾನ ಪತ್ರ. ಡಾ. ಮಾರ್ಪಾಡಿ ವೀರಪ್ಪ ಮೊಯಿಲಿ
ಉಡುಪಿ ಉದ್ಯಾವರ ಪಡುಬಿದ್ರಿ ಮೂಲದವರಾದ ತಾವು 7 ಏಪ್ರಿಲ್ 1959 ಮುಂಬೈಯಲ್ಲಿ ಜನಿಸಿ ಮುಂಬೈನಲ್ಲಿ ವಾಣಿಜ್ಯ ಪದವಿ ಪಡೆದು ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದವರು. ದುಬೈ ಮತ್ತು ಕತಾರ್ ದೇಶಗಳಲ್ಲಿ ಸುಮಾರು 37 ವರ್ಷಗಳ ಸುಧೀರ್ಘ ಅವಧಿಯಲ್ಲಿ ಕೆಲಸದ ನಡುವೆ ತನ್ನ ಮಾತೃ ಭಾಷೆ ತುಳುವಿನ ಉಳಿವಿಗಾಗಿ ವಿಶೇಷ ಒಲವು ಹೊಂದಿ ಕಾರ್ಯ ಪ್ರವೃತ್ತರಾದವರು .
ತುಳು ಭಾಷೆಯನ್ನು, ಸಂಸ್ಕೃತಿಯನ್ನು ಕೊಲ್ಲಿ ದೇಶಗಳಲ್ಲಿ ಉಳಿಸುವ ಸಲುವಾಗಿ ತುಳುಕೂಟ ಕತಾರ್ ಇದರ ಅಧ್ಯಕ್ಷ ಸ್ಥಾನವನ್ನು 2002ರಿಂದ 2004 ಮತ್ತು 2006 ರಿಂದ 2008 ರವರೆಗೆ ಎರಡು ಸಾರಿ ಆಯ್ಕೆಯಾಗಿ ಅಲಂಕರಿಸಿ ತುಳು ಕಲಾವಿದರನ್ನು ಪ್ರೋತ್ಸಾಹಿಸಿದವರು.
ಪರಿಸರ ಪ್ರಿಯರಾಗಿರುವ ತಾವು Qatar Green and Clean ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತನಗೆ ಅನ್ನ ನೀಡಿದ ದೇಶದ ನಾಗರೀಕ ಜವಾಬ್ದಾರಿಯನ್ನು ಪೂರೈಸಿ ಪ್ರಶಂಶೆಗೆ ಒಳಗಾದವರು . ಸಾಂಸ್ಕೃತಿಕ ಚಟುವಟಿಕೆಗಳ ನಡುವೆ ರಕ್ತ ದಾನ ಮತ್ತು Anti Doping commission ನಲ್ಲಿ Anti Doping Officer ಆಗಿ ಕಾರ್ಯ ನಿರ್ವಹಿಸಿ ಸಾಮಾಜಿಕ ಕಳಕಳಿ ತೋರ್ಪಡಿಸಿದವರು.
ಹಲವಾರು ಅಂತಾರಾಷ್ಟ್ರೀಯ ಮಟ್ಟದ ಉನ್ನತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅತ್ಯಂತ ಸರಳ ಮತ್ತು ಸಜ್ಜನ ನಡವಳಿಕೆಯ ತಮ್ಮನ್ನು ತುಳುಕೂಟ ಬೆಂಗಳೂರಿನ ಸುವರ್ಣ ಸಂಭ್ರಮದ ''ಬಂಗಾರ್ದ ಪರ್ಬ'' ಆಚರಣೆಯ ಸಂದರ್ಭದಲ್ಲಿ ತಮ್ಮನ್ನು ಈ ಸ್ಮರಣೀಯ ವೇದಿಕೆಯಲ್ಲಿ ಸನ್ಮಾನಿಸಲು ಸಂತೋಷ ಪಡುತ್ತದೆ. ಸಾಮಾಜಿಕ , ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಈ ಸೇವೆ ಇನ್ನೂ ಮುಂದುವರಿದು ತುಳುನಾಡಿಗೆ ಮತ್ತಷ್ಟು ಮೆರಗು ತರುವಂತಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ಈ ''ಸುವರ್ಣ ಸನ್ಮಾನ'' ಪತ್ರವನ್ನು ಸರ್ವ ಮಹನೀಯರ ಸಮ್ಮುಖದಲ್ಲಿ ತಮಗೆ ಅಭಿಮಾನ ಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ.
ದಿನಾಂಕ : 24-11-2023.
ಸ್ಥಳ :ಅರಮನೆ ಮೈದಾನ ಬೆಂಗಳೂರು
ಕೆ ವಿ ರಾಜೇಂದ್ರ ಕುಮಾರ್ ಸುಂದರ್ ರಾಜ್ ರೈ ಅಜಿತ್ ಹೆಗ್ಡೆ ಕೆ
ಗೌರವ ಅಧ್ಯಕ್ಷರು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ