ಬುಧವಾರ, ನವೆಂಬರ್ 22, 2023

sarvothama shetty

                                                       ತುಳುಕೂಟ ಬೆಂಗಳೂರು (ರಿ)

          ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                     ತುಳು ಭಾಷೆ ಮತ್ತು ಸಂಸ್ಕೃತಿಯ  ಸಾಗರೋತ್ತರ  ರಾಯಭಾರಿ 

                                                    ಶ್ರೀ ಸರ್ವೋತ್ತಮ  ಶೆಟ್ಟಿ  ಅಬುಧಾಬಿ         

                                                                       ಅವರಿಗೆ  

                                                         ಸುವರ್ಣ ಸನ್ಮಾನ  ಪತ್ರ. 

ಕರ್ನಾಟಕ ರಾಜ್ಯದ  ಎರಡು ಪ್ರಮುಖ ಭಾಷೆಗಳಾದ ತುಳು ಮತ್ತು ಕನ್ನಡವನ್ನು  ಸಾಗರದಾಚೆಯ  ಕೊಲ್ಲಿ ಮತ್ತಿತರ  ರಾಷ್ಟ್ರಗಳಲ್ಲಿ ಪಸರಿಸಿದವರಲ್ಲಿ   ತಾವು ಅಗ್ರಮಾನ್ಯರು.  ಉಡುಪಿಯ ಪರೀಕ  ಎಂಬ ಸಣ್ಣ ಹಳ್ಳಿಯಲ್ಲಿ  ಜನಿಸಿ   ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ  ಜೀವನೋಪಾಯಕ್ಕಾಗಿ  ಮುಂಬೈ ನಗರ ಸೇರಿ ಅಲ್ಲಿಯೂ  ಛಲಬಿಡದೆ  ಕಲಿಕೆಯನ್ನು ಮುಂದುವರಿಸಿ  ವಾಣಿಜ್ಯ ಪದವಿ ಮುಗಿಸಿ   ಬ್ಯಾಂಕ್ ಉದ್ಯೋಗಿಯಾಗಿ  ನೆಲೆ ಕಂಡುಕೊಂಡವರು . 

ನಾಟಕ, ಕಲೆ ಮತ್ತು ಭಾಷೆಯ ಮೇಲಿನ ತಮ್ಮ  ಅಪ್ರತಿಮ ಪ್ರೀತಿ  ಅವಿರತ ದುಡಿಮೆಯ ನಡುವೆಯೂ  ಅವಿಚ್ಛಿನ್ನವಾಗಿ ನಡೆದು 1979 ರಲ್ಲಿ ಮುಂಬೈನಲ್ಲಿ ತಮ್ಮ ಕನಸಿನ  ''ಕಲಾಜಗತ್ತು'' ಎನ್ನುವಂತಹ  ಉನ್ನತ  ಸಾಂಸ್ಕೃತಿಕ  ಸಂಘದ ಸ್ಥಾಪನೆಗೆ ಕಾರಣವಾಯಿತು .  

ಜೀವನದಲ್ಲಿ ಮತ್ತಷ್ಟು ಸಾಧಿಸಬೇಕು  ಎನ್ನುವ  ''ಮಹತ್ವಾಕಾಂಕ್ಷೆ''  ತಮ್ಮನ್ನು ಸಾಗರದಾಚೆಯ  ಕೊಲ್ಲಿ ರಾಷ್ಟ್ರ ಅಬುದಾಭಿಗೆ  ಕರೆದೊಯ್ದು  ಸುಮಾರು ಇಪ್ಪತ್ತೈದು ವರ್ಷಗಳ ಸಾರ್ಥಕ  ಕಾಯಕ ಬದುಕನ್ನು ಕಲ್ಪಿಸಿಕೊಟ್ಟಿತು. ನಂತರದ ದಿನಗಳಲ್ಲಿ  ಸ್ವಂತ ಉಡಿಮೆಯನ್ನು ಸ್ಥಾಪಿಸಿ  ಅಲ್ಲಿಯೂ  ತಮ್ಮ ಯಶಸ್ಸಿನ  ನಾಗಾಲೋಟವನ್ನು  ತಾವು ಮುಂದುವರಿಸಿ ಸಾಂಸಾರಿಕ ಮತ್ತು ಸಾಮಾಜಿಕ ಜೀವನದಲ್ಲಿ  ತುಂಬು ಸಂತೃಪ್ತಿಯನ್ನು ಹೊಂದಿರುವಿರಿ. 

ಕಡಲಾಚೆಯೂ  ತನ್ನ ಮೂಲ ಸಂಘಟನಾ ಗುಣವನ್ನು  ಮುಂದುವರಿಸಿದ ತಾವು  ಕರ್ನಾಟಕ ಸಂಘ ಅಬುಧಾಬಿ ,  ಯು. ಎ. ಇ, ಬಂಟ ಸಂಘ, ಯು. ಎ. ಇ.  ತುಳುಕೂಟ  ನಮ್ಮ ತುಳುವೆರ್  ಸ್ಥಾಪನೆಯಲ್ಲಿ  ಪ್ರಮುಖ ಪಾತ್ರ ವಹಿಸಿದಿರಿ . 

ಇಂಡಿಯನ್ ಸೋಶಿಯಲ್ ಅಂಡ್ ಕಲ್ಚರ್ ಸೆಂಟರ್  ಅಧ್ಯಕ್ಷರಾಗಿ ಸತತ 55 ವರ್ಷಗಳ ಕಾಲ  ಅವಿರೋಧವಾಗಿ ಆಯ್ಕೆ ಆಗಿರುವುದು ತಮ್ಮ ಜನಪ್ರಿಯತೆ  ಮತ್ತು ಸಂಘಟನಾ ಸಾಮರ್ಥ್ಯಕ್ಕೆ  ಸಾಕ್ಷಿ . 

ಪ್ರಥಮ  ಬಾರಿಗೆ    2018ರಲ್ಲಿ  ವಿದೇಶದಲ್ಲಿ    ತುಳು ವಿಶ್ವ ಸಮ್ಮೇಳನ ಮತ್ತು ರಾಷ್ಟ್ರಕವಿ ಕುವೆಂಪು  ಹೆಸರಲ್ಲಿ ಕನ್ನಡ ವಿಶ್ವ ಸಮ್ಮೇಳನ ನಡೆಸಿ  ಕರ್ನಾಟಕದ ಹೆಸರನ್ನು   ವಿಶ್ವ ಭೂಪಟದಲ್ಲಿ  ರಾರಾಜಿಸಿದ ಕೀರ್ತಿ ತಮ್ಮದು . 

ಶೈಕ್ಷಣಿಕಾಗಿ , ಸಾಂಸ್ಕೃತಿಕವಾಗಿ   ವಿಶ್ವದಲ್ಲಿ  ತಾವು ನಡೆಸಿದ  ಸಮಾಜಮುಖಿ ಕಾರ್ಯಕ್ರಮಗಳಿಗಾಗಿ  ತಮಗೆ ಅರ್ಹವಾಗಿಯೆ  ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ತೌಳವ ಶ್ರೀ  ಪ್ರಶಸ್ತಿ , ಬಲಿಯೇಂದ್ರ ಪ್ರಶಸ್ತಿ   ಗೌರವ ಡಾಕ್ಟರೇಟ್     ಹೀಗೆ  ಅಗಣಿತ  ಪುರಸ್ಕಾರಗಳು ತಮ್ಮ  ಮಡಿಲೊಳಗೆ  ಅಡಗಿರುವುದು  ತುಳುವರಾದ ನಮಗೆಲ್ಲ  ವಿಶೇಷ ಹೆಮ್ಮೆ 

ತುಳುಕೂಟ ಬೆಂಗಳೂರು ತನ್ನ ಐವತ್ತರ ಸಂಭ್ರಮ ''ಬಂಗಾರ್ದ ಪರ್ಬ''  ಆಚರಣೆಯ ಸಂದರ್ಭದಲ್ಲಿ ತಮ್ಮ ಈ ಎಲ್ಲಾ  ಸಾಧನೆ ಸಹಕಾರಗಳಿಗೆ  ತಮ್ಮನ್ನು ಈ ಸ್ಮರಣೀಯ ವೇದಿಕೆಯಲ್ಲಿ ಸನ್ಮಾನಿಸಲು  ಸಂತೋಷ  ಪಡುತ್ತದೆ. ಸಾಮಾಜಿಕ ಕ್ಷೇತ್ರ , ಶೈಕ್ಷಣಿಕ ಮತ್ತು  ಧಾರ್ಮಿಕ  ಕ್ಷೇತ್ರದಲ್ಲಿ  ತಮ್ಮ  ಈ ಸೇವೆ   ಇನ್ನೂ  ಮುಂದುವರಿದು  ತುಳುನಾಡಿಗೆ   ಮತ್ತಷ್ಟು  ಮೆರಗು ತರುವಂತಾಗಲಿ  ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಅಭಿಮಾನ ಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ