ಬುಧವಾರ, ನವೆಂಬರ್ 22, 2023

wilson Dsouza

                                                       ತುಳುಕೂಟ ಬೆಂಗಳೂರು (ರಿ)

ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                         ಕುವೈಟ್ ರಾಷ್ಟ್ರದ  ಹೆಮ್ಮೆಯ ತುಳುವ  

                                                   ವಿಲ್ಸನ್  ಡಿಸೋಜಾ   

                                                            ಅವರಿಗೆ  

                                                 ಸುವರ್ಣ ಸನ್ಮಾನ  ಪತ್ರ. 

ತುಳುನಾಡಿನ ಆಯುರ್ವೇದ  ಮೂಲಿಕಾ ಭಂಢಾರ  ಮುಲ್ಕಿಯಲ್ಲಿ  22 ಆಗಸ್ಟ್  1970ರಲ್ಲಿ ಜನಿಸಿ  ನಿಟ್ಟೆ ರುಕ್ಮಿಣಿ  ಅಡ್ಯಂತಾಯ  ಪಾಲಿಟೆಕ್ನಿಕ್  ವಿದ್ಯಾಲಯದಲ್ಲಿ  ವಿದ್ಯಾಭ್ಯಾಸ ಮುಗಿಸಿ  ಕಡಲಾಚೆಯ ದೇಶ ಕುವೈಟಿನಲ್ಲಿ ನೆಲೆಸಿದ್ದರೂ  ತುಳು ಭಾಷೆಯ ಮೇಲಿನ ಅಪ್ರತಿಮ  ಮಮತೆಯಿಂದ  ತುಳುಕೂಟ ಕುವೈಟ್  ಜೊತೆಗೂಡಿ ಅವಿರತವಾಗಿ  ನಿಸ್ವಾರ್ಥ ಸೇವೆ ಗೈದಿರುವಿರಿ . 2009 ರಿಂದ  ಸಾಮಾನ್ಯ ಸದಸ್ಯತ್ವದಿಂದ ಆರಂಭಿಸಿ  ಪ್ರಧಾನ ಕಾರ್ಯದರ್ಶಿಯಾಗಿ , ಉಪಾಧ್ಯಕ್ಷರಾಗಿ  ಅಂತಿಮವಾಗಿ ಅಧ್ಯಕ್ಷರಾಗಿ  ತಾವು ತುಳುಕೂಟ ಕುವೈಟ್  ಮುಖಾಂತರ  ತುಳು ಭಾಷೆಗೆ ಸಲ್ಲಿಸಿದ  ಸೇವೆಯನ್ನು  ಮತ್ತು ಅಶಕ್ತ  ತುಳುನಾಡಿನ ಬಂಧುಗಳಿಗೆ ಗೃಹ ನಿರ್ಮಾಣ ಮಾಡುವಲ್ಲಿ    ಹಾಗೂ ತುಳು ಕಲಾವಿದರಿಗೆ ಬೆನ್ನೆಲಬಾಗಿ ನಿಂತಿರುವುದನ್ನು  ನಾವು  ಗೌರವಪೂರ್ವಕವಾಗಿ  ಸ್ಮರಿಸುತ್ತೇವೆ.  

ಭಾಷೆ ನೆಲ ಜಲ ಸಂಸ್ಕೃತಿಗೆ ಸದಾ  ಜಾಗ್ರತ ರೀತಿಯಲ್ಲಿ  ಕಳೆದ ಐವತ್ತು ವರ್ಷಗಳಿಂದ ದುಡಿಯುತ್ತಾ  ಬಂದ ತುಳುಕೂಟ ಬೆಂಗಳೂರಿಗೆ ಈಗ   ಸುವರ್ಣ ಮಹೋತ್ಸವದ ಸಂಭ್ರಮ . ಈ ''ಬಂಗಾರ್ದ ಪರ್ಬ'' ಸಂದರ್ಭದಲ್ಲಿ ತಮ್ಮ ಈ ಎಲ್ಲಾ ಸೇವೆಗಳನ್ನು  ಗಮನಿಸಿ  ತಮ್ಮನ್ನು  ಸನ್ಮಾನಿಸಲು   ತುಳುಕೂಟ ಬೆಂಗಳೂರು   ಹೃದಯಪೂರ್ವಕವಾಗಿ  ಸಂತೋಷಪಡುತ್ತದೆ . 

 ತಮ್ಮ ಸಾಧನೆ  ಹೀಗೆ  ಮುಂದುವರಿಯಲಿ , ತುಳುನಾಡಿಗೆ , ಕರ್ನಾಟಕಕ್ಕೆ ಹಾಗೂ ದೇಶಕ್ಕೆ  ವಿಶೇಷ ಕೊಡುಗೆ ನೀಡಿದ ತಾವು   ನೂರ್ಕಾಲ ಅರೋಗ್ಯ ಪೂರ್ಣರಾಗಿ ಬಾಳಿ  ನಮಗೆಲ್ಲ  ಆದರ್ಶರಾಗಿರಿ ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ