ತುಳುಕೂಟ ಬೆಂಗಳೂರು (ರಿ)
ಸುವರ್ಣ ಮಹೋತ್ಸವದ ಸಂದರ್ಭ ತುಳುನಾಡಿನ ಸಾಧಕರಿಗೆ ಗೌರವ ಪೂರ್ವಕ ಸನ್ಮಾನ
ಕವಿ ಮನಸ್ಸಿನ ಶ್ರೇಷ್ಠ ರಾಜಕಾರಣಿ
ಡಾ. ಮಾರ್ಪಾಡಿ ವೀರಪ್ಪ ಮೊಯಿಲಿ
ಅವರಿಗೆ
ಸುವರ್ಣ ಸನ್ಮಾನ ಪತ್ರ.
ಮೂಡ ಬಿದ್ರಿಯ ಮಾರ್ಪಾಡಿಯಲ್ಲಿ 12 ಜನವರಿ 1940 ರಂದು ಜನಿಸಿ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದು ನಂತರ ವಕೀಲ ವೃತ್ತಿಯನ್ನು ಆರಂಭಿಸಿದ ತಾವು 1972 ರಲ್ಲಿ ಮೊದಲ ಬಾರಿಗೆ ಕಾರ್ಕಳ ಶಾಸಕನಾಗಿ ರಾಜಕೀಯ ಜೀವನ ಆರಂಭಿಸಿ ನಂತರ ಯಶಸ್ಸಿನ ಉತ್ತುಂಗಕ್ಕೆ ಏರಿದ್ದು ಇಂದಿಗೆ ಇತಿಹಾಸ. ಶಾಸಕನಾಗಿ , ಸಂಸದೀಯನಾಗಿ,ಮುಖ್ಯಮಂತ್ರಿಯಾಗಿ , ಕೇಂದ್ರದಲ್ಲಿ ಕಾನೂನು, ಶಿಕ್ಷಣ ಸಚಿವನಾಗಿ ಹೀಗೆ ಹಲವಾರು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿ ಆ ಸ್ಥಾನಗಳಿಗೆ ಅರ್ಹರೀತಿಯ ನ್ಯಾಯ ಒದಗಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ .
1992-1994 ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ತುಳು ಅಕಾಡಮಿ ಸ್ಥಾಪನೆಯಲ್ಲಿ ತಮ್ಮ ಕೊಡುಗೆಯನ್ನು ತುಳು ಭಾಷಿಗರು ಎಂದೂ ಮರೆಯದೆ ಸದಾ ಹೃದಯದಲ್ಲಿ ಸ್ಥಾಪಿಸಿದ್ದಾರೆ .
ಕವಿ ಹೃದಯದ ರಾಜಕಾರಣಿಯಾಗಿ ತಾವು ''ಶ್ರೀರಾಮಾಯಣ ಮಹಾನ್ವೇಷಣಂ'' ,''ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ'' ಇಂತಹ ಮೇರು ಕೃತಿಗಳನ್ನು , ಸತ್ವಯುತ ಕವನ ಸಂಕಲನಗಳನ್ನು , ಚಲನಚಿತ್ರ ವಾಗಿ ರೂಪಿತವಾದ ಸಾಮಾಜಿಕ ಕಾದಂಬರಿಗಳನ್ನು ಕೊಟ್ಟು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದೀರಿ .
ಸರಸ್ವತಿ ಸಮ್ಮಾನ್ , ದೇವರಾಜು ಅರಸು ಪ್ರಶಸ್ತಿ , ಬಸವ ಶಾಂತಿ ಪ್ರಶಸ್ತಿ ಯಂತಹ ಶ್ರೇಷ್ಠ ಪುರಸ್ಕಾರಗಳ ಜೊತೆಗೆ ಮೈಸೂರು ವಿಶ್ವ ವಿದ್ಯಾಲಯ , ಹೈದರಾಬಾದ್ ಕಾನೂನು ವಿಶ್ವ ವಿದ್ಯಾಲಯ , ಮಂಗಳೂರುವಿಶ್ವ ವಿದ್ಯಾಲಯ ಮತ್ತು ರಶಿಯನ್ ಅಕಾಡಮಿಯಿಂದ ಗೌರವ ಡಾಕ್ಟರೇಟ್ ಪಡೆದಿರುವುದು ತಮ್ಮ ವಿದ್ವತ್ತಿಗೆ ಸಾಕ್ಷಿಗಳಾಗಿವೆ
ತುಳುಕೂಟ ತನ್ನ ಐವತ್ತರ ಸಂಭ್ರಮ ''ಬಂಗಾರ್ದ ಪರ್ಬ'' ಆಚರಣೆಯ ಸಂದರ್ಭದಲ್ಲಿ ತಮ್ಮನ್ನು ಈ ವೇದಿಕೆಯಲ್ಲಿ ಸನ್ಮಾನಿಸಲು ಹೆಮ್ಮೆ ಪಡುತ್ತದೆ. ತಮ್ಮ ಸಾಧನೆ ಹೀಗೆ ಮುಂದುವರಿಯಲಿ , ತುಳುನಾಡಿಗೆ , ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಅನನ್ಯ ಕೊಡುಗೆಯಾಗಿರುವ ತಾವು ನೂರ್ಕಾಲ ಅರೋಗ್ಯ ಪೂರ್ಣರಾಗಿ ಬಾಳಿ ಮತ್ತಷ್ಟು ಸಾಧನೆಗೈಯಿರಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ಈ ''ಸುವರ್ಣ ಸನ್ಮಾನ'' ಪತ್ರವನ್ನು ಸರ್ವ ಮಹನೀಯರ ಸಮ್ಮುಖದಲ್ಲಿ ತಮಗೆ ಸಮರ್ಪಿಸುತ್ತಿದ್ದೇವೆ.
ದಿನಾಂಕ : 24-11-2023.
ಸ್ಥಳ :ಅರಮನೆ ಮೈದಾನ ಬೆಂಗಳೂರು
ಕೆ ವಿ ರಾಜೇಂದ್ರ ಕುಮಾರ್ ಸುಂದರ್ ರಾಜ್ ರೈ ಅಜಿತ್ ಹೆಗ್ಡೆ ಕೆ
ಗೌರವ ಅಧ್ಯಕ್ಷರು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ