ತುಳುಕೂಟ ಬೆಂಗಳೂರು (ರಿ)
ಸುವರ್ಣ ಮಹೋತ್ಸವದ ಸಂದರ್ಭ ತುಳುನಾಡಿನ ಸಾಧಕರಿಗೆ ಗೌರವ ಪೂರ್ವಕ ಸನ್ಮಾನ
ಶೈಕ್ಶಣಿಕ ಮತ್ತು ಸಾಂಸ್ಕೃತಿಕ ಹರಿಕಾರ
ಡಾ. ಪಿ. ದಯಾನಂದ್ ಪೈ
ಅವರಿಗೆ
ಸುವರ್ಣ ಸನ್ಮಾನ ಪತ್ರ.
ಸೃಷ್ಟಿಯ ಶ್ರೇಷ್ಠ ತುಳುನಾಡಿನಲ್ಲಿ 8-2-1945 ಜನಿಸಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿ ಸೆಂಚುರಿ ರಿಯಲ್ ಎಸ್ಟೇಟ್ ಸಂಸ್ಥೆಯನ್ನು ಹುಟ್ಟುಹಾಕಿ ಯಶೋಗಾಥೆಯನ್ನು ಬರೆದವರು ತಾವು . ಸಮಾಜಮುಖಿ ನಡೆಯನ್ನು ಬೆಳೆಸಿಕೊಂಡು ಶಿಕ್ಷಣ , ಸಾಮಾಜಿಕ, ಧಾರ್ಮಿಕ ಅಭಿವೃದ್ಧಿಯಲ್ಲಿ ಸಕ್ರಿಯನಾಗಿ ಪಾಲ್ಗೊಂಡು ಬಿ ಎಂ ಎಸ್ ಕಾಲೇಜು , ಭಾರತೀಯ ವಿದ್ಯಾಭವನ, ಮಂಗಳೂರು ಯೂನಿವರ್ಸಿಟಿ , ಮಣಿಪಾಲ ಯೂನಿವರ್ಸಿಟಿ , ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ ಮುಂತಾದ ಹಲವು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳ ಜವಾಬ್ದಾರಿ ಸ್ಥಾನಗಳಲ್ಲಿ ದುಡಿದು ಆ ಸಂಸ್ಥೆಗಳ ಉಜ್ಜೀವನಕ್ಕೆ ಕಾರಣರಾದವರು . ಭಾಷಾ ಪ್ರೇಮಿಯಾಗಿರುವ ತಾವು ತುಳು ಕೊಂಕಣಿ ಸೇರಿದಂತೆ ತುಳುನಾಡಿನ ಹಲವಾರು ಭಾಷೆಗಳ ಸಾಂಸ್ಕೃತಿಕ ಸಂರಕ್ಷಣೆಗೆ ಬೆನ್ನೆಲುಬಾಗಿ ನಿಂತವರು.
ಸಾಮಾಜಿಕ ಕಳಕಳಿಯ ಸಲುವಾಗಿ ''ಕರ್ನಾಟಕ ಉದ್ಯೋಗ ಅವಾರ್ಡ್'' ಮತ್ತು ''ಕರ್ನಾಟಕ ರಾಜ್ಯೋತ್ಸವ'' ಪುರಸ್ಕಾರಗಳನ್ನು ಪಡೆದಿರುವ ತಮಗೆ ಶೈಕ್ಷಣಿಕ ಕ್ಷೇತ್ರದಲ್ಲಿನ ಗಮನಾರ್ಹ ಕೊಡುಗೆಗಾಗಿ ಮಂಗಳೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಾಪ್ತವಾದದ್ದು ನಮಗೆಲ್ಲರಿಗೂ ಅತ್ಯಂತ ಸಂತೋಷದ ವಿಷಯ.
ತುಳುಕೂಟ ತನ್ನ ಐವತ್ತರ ಸಂಭ್ರಮ ''ಬಂಗಾರ್ದ ಪರ್ಬ'' ಆಚರಣೆಯ ಸಂದರ್ಭದಲ್ಲಿತಮ್ಮ ಈ ಎಲ್ಲಾ ಸಾಧನೆ ಸಹಕಾರಗಳಿಗೆ ತಮ್ಮನ್ನು ಈ ವೇದಿಕೆಯಲ್ಲಿ ಸನ್ಮಾನಿಸಲು ಹೆಮ್ಮೆ ಪಡುತ್ತದೆ. ಸಾಮಾಜಿಕ ಕ್ಷೇತ್ರ , ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮ ಈ ಸೇವೆ ಇಂತೆಯೇ ಮುಂದುವರಿದು ಮತ್ತಷ್ಟು ಸಾಧನೆಗೈಯುವಂತಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ಈ ''ಸುವರ್ಣ ಸನ್ಮಾನ'' ಪತ್ರವನ್ನು ಸರ್ವ ಮಹನೀಯರ ಸಮ್ಮುಖದಲ್ಲಿ ತಮಗೆ ಸಮರ್ಪಿಸುತ್ತಿದ್ದೇವೆ.
ದಿನಾಂಕ : 24-11-2023.
ಸ್ಥಳ :ಅರಮನೆ ಮೈದಾನ ಬೆಂಗಳೂರು
ಕೆ ವಿ ರಾಜೇಂದ್ರ ಕುಮಾರ್ ಸುಂದರ್ ರಾಜ್ ರೈ ಅಜಿತ್ ಹೆಗ್ಡೆ ಕೆ
ಗೌರವ ಅಧ್ಯಕ್ಷರು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ