ತುಳುಕೂಟ ಬೆಂಗಳೂರು (ರಿ)
ಸುವರ್ಣ ಮಹೋತ್ಸವದ ಸಂದರ್ಭ ತುಳುನಾಡಿನ ಸಾಧಕರಿಗೆ ಗೌರವ ಪೂರ್ವಕ ಸನ್ಮಾನ
ಪದ್ಮಶ್ರೀ ಪುರಸ್ಕೃತ ಸಾವಯವ ಕೃಷಿಕ
ಶ್ರೀ ಮಹಾಲಿಂಗ ನಾಯ್ಕ ಅಮೈ ಅವರಿಗೆ
ಸುವರ್ಣ ಸನ್ಮಾನ ಪತ್ರ.
ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಸದ್ದಿಲ್ಲದೆ ಸಹಜ ಕೃಷಿಯಲ್ಲಿ ತೊಡಗಿಕೊಂಡ ತಾವು ಪ್ರಾಕೃತಿಕ ರೀತಿಯಲ್ಲಿ ಬೆಳೆದ ಕೊಬ್ಬರಿ , ಕರಿ ಮೆಣಸು ಮುಂತಾದ ಬೆಳೆಗಳಿಗೆ ಕೆಲವಾರು ವಿದ್ಯಾ, ಸಂಶೋಧನಾ ಸಂಸ್ಥೆಗಳಿಂದ ಮತ್ತು ಕರ್ನಾಟಕ ಸರಕಾರದಿಂದ ಗುರುತಿಸಲ್ಪಟ್ಟವರು . ನೀರಿನ ಸಂರಕ್ಷಣೆಯಲ್ಲಿ ಇಂಗು ಗುಂಡಿ , ಸ್ವಚ್ಛ ಪರಿಸರ ನಿರ್ವಹಣೆಯಿಂದ ತಾಯಿ ಭೂದೇವಿಯ ಪ್ರೀತಿ ಕೃಪೆಗೆ ಪಾತ್ರರಾದವರು .
ಬೆಟ್ಟದ ತಡಿಯಲ್ಲಿ ಸುರಂಗ ಕೊರೆದು ಗಂಗೆಯನ್ನು ಒಲಿಸಿಕೊಂಡಂತಹ ಹಳ್ಳಿಯ ಆಧುನಿಕ ಭಗೀರಥ ತಮ್ಮ ಈ ಎಲ್ಲಾ ನಿಸ್ವಾರ್ಥ ಪರಿಸರ ಸಾಧನೆಗೆ ಭಾರತ ಸರಕಾರದ ಅತ್ಯುನ್ನತ ನಾಗರೀಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಒಲಿದು ಬಂದಿರುವುದು ತುಳುನಾಡಿಗೆ ಹೆಮ್ಮೆಯ ವಿಷಯ .
ಭಾಷೆ ನೆಲ ಜಲ ಸಂಸ್ಕೃತಿಗೆ ಸದಾ ಜಾಗ್ರತ ರೀತಿಯಲ್ಲಿ ಕಳೆದ ಐವತ್ತು ವರ್ಷಗಳಿಂದ ದುಡಿಯುತ್ತಾ ಬಂದ ತುಳುಕೂಟ ಬೆಂಗಳೂರಿಗೆ ಈಗ ಸುವರ್ಣ ಮಹೋತ್ಸವ ''ಬಂಗಾರ್ದ ಪರ್ಬದ'' ಸಂಭ್ರಮ . ಈ ಸಂದರ್ಭದಲ್ಲಿ ತಮ್ಮನ್ನು ಸನ್ಮಾನಿಸಲು ತುಳುಕೂಟ ಬೆಂಗಳೂರು ಹೃದಯಪೂರ್ವಕವಾಗಿ ಸಂತೋಷಪಡುತ್ತದೆ .
ತಮ್ಮ ಸಾಧನೆ ಹೀಗೆ ಮುಂದುವರಿಯಲಿ , ತುಳುನಾಡಿಗೆ , ಕರ್ನಾಟಕಕ್ಕೆ ಹಾಗೂ ದೇಶಕ್ಕೆ ವಿಶೇಷ ಕೊಡುಗೆ ನೀಡಿದ ತಾವು ನೂರ್ಕಾಲ ಅರೋಗ್ಯ ಪೂರ್ಣರಾಗಿ ಬಾಳಿ ನಮಗೆಲ್ಲ ಆದರ್ಶರಾಗಿರಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ಈ ಸುವರ್ಣ ಸನ್ಮಾನ ಪತ್ರವನ್ನು ಸರ್ವ ಮಹನೀಯರ ಸಮ್ಮುಖದಲ್ಲಿ ತಮಗೆ ಸಮರ್ಪಿಸುತ್ತಿದ್ದೇವೆ.
ದಿನಾಂಕ : 24-11-2023.
ಸ್ಥಳ :ಅರಮನೆ ಮೈದಾನ ಬೆಂಗಳೂರು
ಕೆ ವಿ ರಾಜೇಂದ್ರ ಕುಮಾರ್ ಸುಂದರ್ ರಾಜ್ ರೈ ಅಜಿತ್ ಹೆಗ್ಡೆ ಕೆ
ಗೌರವ ಅಧ್ಯಕ್ಷರು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ