ಬುಧವಾರ, ಜುಲೈ 11, 2018

ಅಪ್ಪಾ ನೀನು ಆಕಾಶ! ================

ಅಪ್ಪಾ ನೀನು ಆಕಾಶ!
================

ನಿನ್ನ ಪರಿಶ್ರಮದ
ಬೆವರ ಹನಿ
ಮಳೆಯಾಗಿ ಸುರಿದು
ಇಳೆಯೊಡಲು ತುಂಬಾ
ಹಚ್ಚಹಸಿರಿನ
ತೋರಣ ಕಟ್ಟಲು ಕಾರಣ
ಅಪ್ಪಾ
ನೀನು.......ಆಕಾಶ!

ಕಷ್ಟ ಕಾರ್ಮೋಡಗಳು
ಆವರಿಸಿ
ಕಳೆಗುಂದಿದರೂ
ಬಗ್ಗದೆ-ಕುಗ್ಗದೆ
ದುಡಿದು ಬಡಿದೆ
ಕಣ್ಣಿಂದ ಕಣ್ಣೀರು ಇಣುಕಿಲ್ಲ
ಸುರಿದದ್ದೆಲ್ಲಾ  ಒಡಲಿಂದ
ವಿಶ್ವಾಸದ ಬೆವರ ಹನಿಗಳು
ಅಪ್ಪಾ
ನೀನು........ಆಕಾಶ!

ತೊಡೆಯಿಂದ ಹೆಗಲಮೇಲೆ
ಏರಿಸಿ
ನಿನ್ನ ಎತ್ತರಕ್ಕೆ  ನನ್ನ ಬೆಳೆಯಲು
ವಿಕಾಸದ ಅವಕಾಶಗಳ
ಏಣಿ ಹಾಕಿ ಕೊಟ್ಟವನು
ಅಪ್ಪಾ
 ನೀನು..‌‌.‌..‌ ಅಕಾಶ!

ಅಪ್ಪಾ..... ನೀನು ಆಕಾಶ
ಆದಿ ಅಂತ್ಯಗಳ
ಅರಿವಾಗದಷ್ಟು ಆಳದವ
ನಾನು ಕತ್ತೆತ್ತಿ  ನೋಡುವಷ್ಟು
ಎತ್ತರ -ಎತ್ತರಕ್ಕೆ  ಬೆಳೆದವ !!

✍ಶಾಂತಾರಾಮ್ ಶೆಟ್ಟಿ.
〰〰〰〰〰〰
(ಅಪ್ಪಂದಿರಾಗಲು ಕಷ್ಟ ಪಟ್ಟವರಿಗೆಲ್ಲಾ ಅಪ್ಪನ ದಿನದ ಶುಭಾಶಯಗಳು!)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ