ದಡ್ಡರು!
=========
ಕರಿ ಹಲಗೆ
ಮೇಲೆ ಅಕ್ಷರ
ಕಲಿತವರೆಲ್ಲಾ
ವಿದ್ಯಾವಂತರಾಗಿದ್ದಾರೆ,
ಕರಿಹಲಗೆ
ತಲೆಗೆ
ಒಂದಕ್ಷರವೂ
ವಿದ್ಯೆ ಹತ್ತಲೇ ಇಲ್ಲ!
ಏಣಿ
ಹತ್ತಿದವರೆಲ್ಲಾ
ಆಕಾಶದೆತ್ತರಕ್ಕೆ
ಏರಿದ್ದಾರೆ
ಏಣಿ ಇನ್ನೂ
ನೆಲ ಅಂತಸ್ತಿನ
ತಳ ಮೂಲೆ ಯಲ್ಲಿದೆ!
ಇತರರ
ಏಳಿಗೆಗೆ ಏಗಿದವರು
ತಾವು ಮಾತ್ರ
ಏಳಲಾರದಷ್ಟು
ಹೇಳಲಾರದಷ್ಟು
ದಡ್ಡರು!!
✍🏻ಶಾಂತಾರಾಮ್ ಶೆಟ್ಟಿ
〰〰〰〰〰〰
(ಲ್ಯಾಡರ್ ಆಗಬೇಡಿ, ಲೀಡರ್ ಆಗಿ!!)
=========
ಕರಿ ಹಲಗೆ
ಮೇಲೆ ಅಕ್ಷರ
ಕಲಿತವರೆಲ್ಲಾ
ವಿದ್ಯಾವಂತರಾಗಿದ್ದಾರೆ,
ಕರಿಹಲಗೆ
ತಲೆಗೆ
ಒಂದಕ್ಷರವೂ
ವಿದ್ಯೆ ಹತ್ತಲೇ ಇಲ್ಲ!
ಏಣಿ
ಹತ್ತಿದವರೆಲ್ಲಾ
ಆಕಾಶದೆತ್ತರಕ್ಕೆ
ಏರಿದ್ದಾರೆ
ಏಣಿ ಇನ್ನೂ
ನೆಲ ಅಂತಸ್ತಿನ
ತಳ ಮೂಲೆ ಯಲ್ಲಿದೆ!
ಇತರರ
ಏಳಿಗೆಗೆ ಏಗಿದವರು
ತಾವು ಮಾತ್ರ
ಏಳಲಾರದಷ್ಟು
ಹೇಳಲಾರದಷ್ಟು
ದಡ್ಡರು!!
✍🏻ಶಾಂತಾರಾಮ್ ಶೆಟ್ಟಿ
〰〰〰〰〰〰
(ಲ್ಯಾಡರ್ ಆಗಬೇಡಿ, ಲೀಡರ್ ಆಗಿ!!)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ