ಬುಧವಾರ, ಜುಲೈ 11, 2018

ವಿಷಾದ ಯೋಗ!

ವಿಷಾದ ಯೋಗ!
============

ಪಾಪ ಬೇಡವೆಂದ
ಬೇಡ ವಾಲ್ಮೀಕಿ
ರಾಮ ನಾಮದ
ಪುಣ್ಯ ಬೇಕೆಂದ!

ಯುದ್ಧದ ಅಶಾಂತಿ
ಬೇಡವೆಂದ
ಅರ್ಜುನ
ಮನ ಶಾಂತಿ ಬೇಕೆಂದ!

ಆಸೆ ಬೇಡವೆಂದ
ಬುದ್ಧ
ನಿರ್ವಾಣ ಬೇಕೆಂದ!

ಎಲ್ಲೂ ಹೋಗಿಲ್ಲ,
ಬೇಡಗಳ ಬೆನ್ನಲ್ಲೇ
ಇನ್ನೂ
ಬೇಕುಗಳಿವೆ!

ಮುಂದಿನವನ
ಹಿಂದು
ಹಿಂದಿನವನಿಗೆ
ಮುಂದು!!

✍ಶಾಂತಾರಾಮ್ ಶೆಟ್ಟಿ.
〰〰〰〰〰〰

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ